________________
೬೮೦ / ಪಂಪಭಾರತಂ
ಚoll ಮಗನಯಲೊಳ್ ಕರಂ ಮಲುಗುತಿರ್ಪಿನಮೆನ್ನ ತನೂಜನಾಳ್ವ ಸಾ ಮಿಗಮಟೆವಾಗ ಶೋಕರಸಮಿರ್ಮಡಿಸಿತ್ತು ಜಳಪ್ರವೇಶಮಿ | ಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನನಾಥನಾಗಿ ತೊ
ಮೃಗೆ ಮುಲಪಂತೆವೋಲ್ ಮುಲುಗಿದಂ ಕಡುಕೆಯ್ದಪರಾಂಬುರಾಶಿಯೊಳ್ || ೧೦೬
ವ|| ಆ ಪ್ರಸ್ತಾವದೊಳಶ್ವತ್ಥಾಮಂ ಕೃಪ ಕೃತವರ್ಮರುಂಬೆರಸು ಹಸ್ತಿನಪುರದೊಳ್ ಪಾಂಡವರಿರ್ದರೆಗೆತ್ತುಮಲ್ಲಿಗೆ ನಿಟ್ಟಾಲಿಯಾಗಿ ದಾಡೆಯನಿಟ್ಟು ಮುಟ್ಟೆವಂದು ಬಾಯಾಡಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ನೂತ್ತಮೌಜಸರಂ ಕೊಂದು ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರಂ ಪಾಂಡವರೆಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು ತಲತಲನೆ ನೇಸಡುವಾಗಳೆಯೇ ಎಂದು ದುರ್ಯೋಧನನಂ ಕಂಡು ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನೆಂದು ಮುಂದಿಕ್ಕಿದಾಗಳ್ ದುರ್ಯೋಧನಂ ನೋಡಿ
ಕಂ ಬಾಲಕಮಳಂಗಳಂ ಕಮ
ಛಾಲಯದಿಂ ತಿಳದು ತರ್ಪ್ಪವೋಲ್ ತಂದೆ ನೀಂ | ಬಾಲಕರ ತಲೆಗಳಕ್ಕಟ ಬಾಲಕವಧದೋಷಮೆಂತು ನೀಂ ನೀಗಿದಪಮ್ ||
002
ತರಿದು ರಾಶಿಹಾಕಿ ಬರುತ್ತಿಯಾ? ಏನು. ವ|| ಎನ್ನಲು 'ಪಾಂಡವರನ್ನು ಇಕ್ಕಿ ಕೊಂದ ಶುಭವಾರ್ತೆಯನ್ನು ಈಗಲೇ ಕೇಳಿಸುತ್ತೇನೆ' ಎಂದು ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ ಅರಳಿದ ಕಮಲದ ಕೊಡೆಯ ತಂಪಾದ ನೆರಳನ್ನು ಕಡಿಮೆಮಾಡಬೇಡವೆಂದು ಕಟ್ಟಳೆಯಿಟ್ಟು ರುದ್ರಾವತಾರನಾದ ಅಶ್ವತ್ಥಾಮನು ಕೃಪಕೃತವರ್ಮರೊಡನೆ ರಾಜನನ್ನು ಬೀಳ್ಕೊಂಡು ಹೋದನು-ಆಗ ೧೦೬. ನಾನು ನನ್ನ ಮಗನ ಮರಣದುಃಖದಿಂದಲೇ ವಿಶೇಷ ದುಃಖಪಡುತ್ತಿರಲು ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸವಿಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ (ದಿಕ್ಕಿಲ್ಲದವನಾಗಿ ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು. (ಸೂರ್ಯಾಸ್ತಮಾನವಾಯಿತು) ವ। ಆ ಸಮಯದಲ್ಲಿ ಅಶ್ವತ್ಥಾಮನು ಕೃಪಕೃತವರ್ಮರೊಡಗೂಡಿ ಹಸ್ತಿನಾಪಟ್ಟಣದಲ್ಲಿ ಪಾಂಡವರಿರುವರೆಂದು ಭ್ರಾಂತಿಸಿ ಅಲ್ಲಿಗೆ ಎಚ್ಚರದಿಂದ ದಾಳಿಯಿಟ್ಟು (ಮುತ್ತಿಗೆ ಹಾಕಿ) ಸಮೀಪಕ್ಕೆ ಬಂದು ಕೂಗಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ನೂತ್ತಮೌಜಸರನ್ನು ಕೊಂದು ಶ್ರುತಸೋಮಕರೇ ಮೊದಲಾದ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿಕೊಂಡು ಅವರ ತಲೆಗಳನ್ನು ತೆಗೆದುಕೊಂಡು ಪ್ರಕಾಶಮಾನವಾಗಿ ಸೂರ್ಯನು ಹುಟ್ಟುವ ಹೊತ್ತಿಗೆ ಸರಿಯಾಗಿ ಸಮೀಪಕ್ಕೆ ಬಂದು, ದುರ್ಯೋಧನನನ್ನು ಕುರಿತು ತೆಗೆದುಕೊ ನಿನಗೆ ಪ್ರಿಯರಾದ ಪಾಂಡವರ ತಲೆಗಳನ್ನು ಎಂದು ಮುಂದಿಟ್ಟನು. ಅದನ್ನು ದುರ್ಯೋಧನನು ನೋಡಿ ೧೦೭. ಸರೋವರದಿಂದ ಎಳೆಯ ಕಮಲಗಳನ್ನು ಕಿತ್ತು ತರುವ ಹಾಗೆ ಅಯ್ಯೋ! ನೀನು ಬಾಲಕರ ತಲೆಗಳನ್ನು ತಂದಿರುವೆ, ಬಾಲವಧಾದೋಷವನ್ನು ನೀನು ಹೇಗೆ ಕಳೆಯುತ್ತೀಯೇ ? ಎಂದನು.