________________
ತ್ರಯೋದಶಾಶ್ವಾಸಂ / ೬೭೩ ಮ|ಹರಿಯೆಂದಂದಮದಂತೆ ಪಾಂಡುತನಯ ನಿರ್ದೋಷಿಗಳ ತಥಮಿಂ
ತು ರಣಸ್ಥಾನದೊಳಿನ್ನೆರಲ್ಕುಡಿವೆನೇ ಮದ್ದಂಧು ಶೋಕಾಗ್ನಿಯಿಂ | ದುರಿದಪ್ಟೆಂ ತೊಡರ್ದನ್ನನಿಂ ಬಿಡು ವಿರೋಧಿಕ್ಷಾಪರೆ ಗದಾ
ಪರಿಘಾಘಾತದಿನಟ್ಟಿ ತಟ್ಟೆ ಮಡಿದಿನ್ನಬಾಡದೇಂ ಪೋಪರೇ | ೯೦ |
ವ|| ಎಂಬುದುಂ ಸಂಕರ್ಷಣನಾತನ ಮನದುತ್ಕರ್ಷತೆಯನದು ಪೆಜತನಿನ್ನೆನಗೆ ನುಡಿಯಲೆಡೆಯಿಲ್ಲ ಧರ್ಮಯುದ್ಧಮಂ ನೋಡಲ್ವುಮೆಂದು ಧರ್ಮಪುತ್ರನನಿಂತೆಂದಂ ನಿಮ್ಮಯ್ಯರೊಳೊರ್ವನೀತನೊಳ್ ಕಾದುವುದು ಕಾದಿ ಸೋಂ ಬಳೆಯಂ ದುರ್ಯೋಧನಂ ನೆಲನನಾಳ್ವನುಟಿದ ನಾಲ್ವರುಮಾತಂಗೆ ಬೆಸಕೆಯ್ತುದಾರ್ ಕಾದಿದಪಿರನೆ ಭೀಮಸೇನನಿಂತೆಂದಂಚಂ|| ತೊಡರ್ದು ಬಿಡಿಂ ಸುಯೋಧನನನೆನ್ನುಮನಾನಿರೆ ಕೌರವಾಧಿಪಂ
ಗಿಡುವಗೆ ಪೇಟಿಮಿಂ ಪುರೊಳಂ ಮುಳಿಸುಂಟೆ ಮಹಾ ಪ್ರತಿಜ್ಞೆಯೊಳ್ || ತೊಡರ್ದನುಮಾನ ಭೂತಮಳಮದಿರ್ಕೆಡೆಗೆಯ್ ಗೆಲಲಾರ್ತರಾರ್ಗರ ೧ುಡಿಯದಿರೆಂದೂಡಂಬಡಿಸಿದಂ ಹಳಿಯಂ ನಯದಿಂ ವೃಕೋದರಂ 11೯೧
ಮುಖವನ್ನು ನೋಡಿದ ಬಲರಾಮನಿಗೆ ದುರ್ಯೊಧನನು ಹೀಗೆಂದನು. ೯೦. ಕೃಷ್ಣನು ಹೇಳಿದ ರೀತಿ ಹೇಗೋ ಹಾಗೆಯೇ, (ಅವನೆಂದುದು ನಿಜ) ಪಾಂಡುಪುತ್ರರು ನಿರ್ದೋಷಿಗಳು, ಅದು ನಿಜ. ಯುದ್ಧರಂಗದಲ್ಲಿ ಇನ್ನು ಮೇಲೆ ಎರಡು ಮಾತನ್ನಾಡುತ್ತೇನೆಯೇ? ನನ್ನ ಬಾಂಧವರ ಮರಣದಿಂದುಂಟಾದ ದುಃಖದ ಬೆಂಕಿಯಿಂದ ಉರಿಯುತ್ತಿದ್ದೇನೆ. ಸಿಕ್ಕಿಕೊಂಡಿರುವ ನನ್ನನ್ನು ನೀನು ಬಿಟ್ಟುಬಿಡು. ವೈರಿರಾಜರು ಪರಿಘದಂತಿರುವ ಈ ಗದೆಯ ಪೆಟ್ಟಿನಿಂದ ನಾಶವಾಗಿ ತಗ್ಗಿ ಹಾಳಾಗದೆ ಇರುತ್ತಾರೆಯೆ ಎಂದನು. ವ|| ಬಲರಾಮನು ಆತನ ಮನಸ್ಸಿನ ಉದಾತ್ತತೆಯನ್ನು ತಿಳಿದು ಇನ್ನು ಬೇರೆಯದನ್ನು ನುಡಿಯಲು ಅವಕಾಶವಿಲ್ಲ. ಧರ್ಮಯುದ್ಧವನ್ನು ನೋಡಬೇಕೆಂದು ಧರ್ಮಪುತ್ರನನ್ನು ಕುರಿತು ಹೀಗೆಂದನು, ನಿಮ್ಮಅಯ್ದು ಜನರಲ್ಲಿ ಒಬ್ಬನು ಈತನೊಡನೆ ಕಾದುವುದು; ಕಾದಿ ಸೋತ ಬಳಿಕ ದುರ್ಯೋಧನನು ಭೂಮಿಯನ್ನು ಆಳುವನು, ಉಳಿದ ನಾಲ್ಕು ಜನವೂ ಆತನಿಗೆ ಸೇವೆಮಾಡತಕ್ಕದ್ದು, ಯಾರು ಕಾದುತ್ತೀರಿ ಎನ್ನಲು ಭೀಮಸೇನನು ೯೧. ನನ್ನನ್ನೂ ದುರ್ಯೋಧನನನ್ನೂ ಒಟ್ಟುಗೂಡಿಸಿ ಬಿಡಿ. ಕೌರವೇಶ್ವರನಿಗೆ ಬದ್ಧದ್ವೇಷಿಯಾಗಿ ನಾನಿರುವಾಗ ಇನ್ನಿತರರಲ್ಲಿ ಕೋಪವುಂಟೆ? ಮಹಾ ಪ್ರತಿಜ್ಞಾರೂಢನಾಗಿರುವವನೂ ನಾನೇ! ಭೂಮಿಯ ವಿಷಯ ಅದು ಹಾಗಿರಲಿ, ಕಾಳಗಮಾಡುವುದಕ್ಕೆ ಸ್ಥಳವನ್ನು ಸಿದ್ದಪಡಿಸು, ಗೆಲ್ಲಲು ಸಮರ್ಥ ರಾದವರು ಯಾರು ? ಎರಡು ಮಾತನ್ನಾಡಬೇಡ ಎಂದು ಭೀಮನು ಬಲರಾಮನನ್ನು ನಯದಿಂದ ಒಪ್ಪಿಸಿದನು. ವll ಯುದ್ಧರಂಗಕ್ಕೆ ಎಲ್ಲರನ್ನು ಕೂಡಿಕೊಂಡು ಬಂದರು.