________________
೬೭೨ / ಪಂಪಭಾರತಂ
ಶಾ|| ಆ ದುಶ್ಯಾಸನನಂ ಪೊರಳ್ಳಿ ರಣದೊಳ್ ಕೊಂದೀ ಮರುತ್ತು ನಿಂ ತಾದಂ ದಳ್ಳಿಸೆ ನೋಡಿ ನೋಡಿ ಪುದುವಾಂತಕ್ಕುಮಿಂತೀಗಳಾ | ನಾದಂ ಮೇಣಿವನಾದನೇಕೆ ತಡೆವಿರ್ ಕೆಲ್ಲೊಯೆವಿಂ ಕರಂ ಸೋದರ್ಯಕ್ಕೆ ಕನಲ್ಲೊಡೆಂತಿನಿಬರುಂ ಕಾದಿಂ ಭರಂಗೆಯಸೆಂ || ೮೮
ವ|| ಎಂಬನ್ನೆಗಂ ತೀರ್ಥಯಾತ್ರೆಯೊಳ್ ತೊಡರ್ದು ತಡೆದ ಬಲದೇವಂ ದುರ್ಯೋಧನಂಗಾಯು ಬರ್ಪಂತೆ ಹೆಗಲೊಳ್ ಹಲಾಯುಧಮನಿಕ್ಕಿಕೊಂಡು ಜಂಗಮಪರ್ವತಮ ಬರ್ಪಂತೆ ಬಂದು ತನಗೆ ಪೊಡೆವಟ್ಟ ದುರ್ಯೋಧನನಂ ಪರಸಿ ಪಿರಿದುಮಂದಪ್ಪ ಕೊಂಡಾತಂಗಾದವಸ್ಥೆಯಂ ಕಂಡು ಮನುಗದ್ಗದಕಂಠವಾಗಿ ತನಗೆರಗಿದ ಮುರಾಂತಕನುಮಂ ಪಾಂಡುವರುಮಂ ಪರಸಲೊಲ್ಲದಿದೇನಂ ಮಾಡಿದಿರೆಂದೊಡೆ ಮಧುಮಥನನಣ್ಣನ ಮುನಿದ ಮೊಗಮನದಿಂತೆಂದಂ
ಚಂ।।
ಮುಳಿವೊಡಮೆಯೇ ಕೇಳು ಮುಳಿ ಪಾಂಡುತನೂಜರ ಮುಖ್ಯನಾಳ ಭೂ ತಳಮನದೆಂತುಮಾಯದ ಸುಯೋಧನನುದ್ಧತನ ವೃತ್ತಿಯಿಂ ಸುಹೃ | ದಳಮಯದಲ್ಲಿ ಕಾದಿ ಪುದುವಾಗೊಡಂಬಡಲೊಲ್ಲದಿನ್ನುಮ ಊಳಿಸುವನೀಗಳಾತನನೆ ನೀಂ ಬೆಸಗೊಳ್ ಪುಸಿಯಂ ಸುಯೋಧನಂ || ೮೯
ವ|| ಎನೆ ನೀಂ ಮರುಳನಮನೇಕೆ ಮಾಡಿದೆಯೆಂದು ತನ್ನ ಮೊಗಮಂ ನೋಡಿದ ಹಲಾಯುಧಂಗೆ ದುರ್ಯೋಧನನಿಂತೆಂದಂ
ಲೋಕೋಕ್ತಿಯನ್ನು ನನ್ನಲ್ಲಿ ಇನ್ನು ಮೇಲೆ ಆಡಬೇಡಿ. ೮೮. ದುಶ್ಯಾಸನನನ್ನು ಯುದ್ಧದಲ್ಲಿ ಹೊರಳಿಸಿ ಕೊಂದು ಈ ಭೀಮನೂ ಹೀಗೆ ವಿಶೇಷವಾಗಿ ಉರಿಯುತ್ತಿರುವುದನ್ನು ನೋಡಿ ನೋಡಿಯೂ ಜೊತೆಯಲ್ಲಿ ಕೂಡಿ ಬಾಳುವುದು ಹೇಗೆ ಸಾಧ್ಯವಾಗುತ್ತದೆ? ಈಗ ನಾನಾದೆನು ಮತ್ತು ಇವನಾದನು, ಏಕೆ ತಡೆಯುತ್ತಿದ್ದೀರಿ; ಕೈತಟ್ಟಿದ್ದೇನೆ. ಇನ್ನು ನೀವು ಸೋದರತನಕ್ಕೆ ಕೋಪಿಸಿಕೊಳ್ಳುವುದಾದರೆ ನೀವಿಷ್ಟು ಜನವೂ ಯುದ್ಧಮಾಡಿ; ನಾನು ಎದುರಿಸುತ್ತೇನೆ. ವll ಎನ್ನುವಷ್ಟರಲ್ಲಿ ತೀರ್ಥಯಾತ್ರೆಯಲ್ಲಿ ಸಿಕ್ಕಿ ತಡ ಮಾಡಿದ ಬಲರಾಮನು ದುರ್ಯೋಧನನಿಗೆ ಆಯಸ್ಸು ಬರುವಂತೆ ಹೆಗಲಲ್ಲಿ ನೇಗಿಲನ್ನು ಧರಿಸಿ ಚಲಿಸುವ ಬೆಟ್ಟವೇ ಬರುವ ಹಾಗೆ ಬಂದನು. ತನಗೆ ನಮಸ್ಕಾರಮಾಡಿದ ದುರ್ಯೋಧನನನ್ನು ಆಶೀರ್ವದಿಸಿ ಹಿರಿದಾಗಿ ಆಲಂಗಿಸಿಕೊಂಡು ಆತನಿಗಾದ ಅವಸ್ಥೆಯನ್ನು ಕಂಡು ದುಃಖದಿಂದ ಗದಗದಿಕೆಯಿಂದ ಧ್ವನಿ ಹೊರಡದ ಕಂಠವುಳ್ಳವನಾದನು. ತನಗೆ ನಮಸ್ಕಾರ ಮಾಡಿದ ಕೃಷ್ಣನಿಗೂ ಪಾಂಡವರಿಗೂ ಹರಸಲು ಇಷ್ಟ ಪಡದೆ ಇದೇನನ್ನು ಮಾಡಿದಿರಿ ಎಂದನು. ಕೃಷ್ಣನು ಅಣ್ಣನ ಕೋಪದಿಂದ ಕೂಡಿದ ಮುಖವನ್ನು ಅರ್ಥಮಾಡಿಕೊಂಡು ಹೀಗೆಂದನು. ೮೯. ಕೋಪಿಸಿ ಕೊಳ್ಳುವುದಾದರೆ ಚೆನ್ನಾಗಿ ಕೇಳಿ ವಿಚಾರ ಮಾಡಿ ಕೋಪಿಸಿಕೊ. ಪಾಂಡವರು ಮೊದಲು ಆಳಿದ ಭೂಮಿಯನ್ನು ಏನುಮಾಡಿದರೂ ಕೊಡದೆ ದುರ್ಯೋಧನನು ಗರ್ವದಿಂದ ಮಿತ್ರಸೈನ್ಯಗಳೆಲ್ಲ ಸತ್ತು ನಾಶವಾಗುವ ಹಾಗೆ ಕಾದಿ ಕೂಡಿ ಬಾಳುವುದಕ್ಕೆ ಒಪ್ಪಿಕೊಳ್ಳದೆ ಇನ್ನೂ ಮೇಲೆ ಬೀಳುತ್ತಿದ್ದಾನೆ. ಈಗ ಅವನನ್ನೇ ನೀನು ಕೇಳು; ದುರ್ಯೋಧನನು ಹುಸಿಯಾಡುವುದಿಲ್ಲ. ವ|| ಎನ್ನಲು ನೀನು ದಡ್ಡತನವನ್ನೇಕೆ ಮಾಡಿದೆ ಎಂದು ತನ್ನ