________________
ತ್ರಯೋದಶಾಶ್ವಾಸಂ | ೬೬೯ ಕoll ಮಾನಸಿಕೆಯ ದೊರೆಗಿಡ ನೀಂ
ಮಾನಸನೆಗೆ ನೀರೊಳೆಲಿ ನೀನುಂ ಮಾನಂ | ಬೀ ನೆವದಿರ್ದೆಯಿದೇನಭಿ
ಮಾನದ ಕಲಿತನದ ಪರಮಪದಮೆಯಿದೆಯೋ || ೭೯ ಚoil ಅದಟನಳುರ್ಕೆಯಂ ನಿಳಿಸಿ ನಿನ್ನ ನಿಸೇಕದ ಪೊಟ್ಟು ತಪ್ಪಲೀ
ಯದೆ ಪೊಳವಟ್ಟು ಬಾ ತಡೆಯದೀಗ ನೀನಿನಿಸಿರ್ದೆಯಪೊಡೇ | ತೊದಳೊ ಸರೋವರಾಂಬುವನಿತಂ ತವ ತುಳ್ಳಿ ರಸಾತಳಂಬರಂ.
ಬೆದಕಿಯುಮೆಂತುಮಪ್ಪಳಿಸಿ ಕೊಂದವನೇಟ್ಟುದಿದೇಂ ಸುಯೋಧನಾ || ೮೦
ವ|| ಎಂದು ಎಳಯಕಾಳಜಳಧರನಿನಾದದಿಂ ಗಜಟೆ ಗರ್ಜಿಸಿದ ಜಟಾಸುರಾರಾತಿಯ ಗಳಗರ್ಜನೆಗೆ ಕರಿಕಳಭಗರ್ಜನೆಗೇಳ್ವ ಮೃಗರಾಜನಂತೆ ರಾಜರಾಜಂ ಸೈರಿಸದೆ ಚಿತ್ತಸ್ಥಲನೆಯಾಗೆ ಜಳಸ್ತಂಭಮಂತ್ರಮೆಲ್ಲಂ ಮಾಯಾಮಂತ್ರಮಾಗೆ
ಪಗೆವಂ ಬಂದುದಿಂತು ಮೂದಲಿಸೆಯುಂ ಮಾತಂ ಕಿವುಚೇಳು ಕೆ ಮಗೆ ನೀರೊಳ್ ಮುಲುಗಿರ್ದೊಡಟ್ಟು ಕಿಡುಗುಂ ಮಚ್ಚಾರ್ಯ ನೆಗೆದಾಗಳ್ ವಿಲಸತ್ಕರೀಟತಟರಾಂಶುಪ್ರಭಾರಾಜಿ ತೂ
ಟ್ರಗೆ ಕೆಯ್ದ ಸುರೇಂದ್ರಚಾಪರುಚಿಯಂ ಕೆಯ್ಯೋಂಡುದಾ ಪೂಗೊಳಂ || ೮೧ ಚಂ| ನಗೆಯೆ ಪೊದು ಬೊಬ್ಬುಳಿಕೆಗಳ ನೆಗೆದಂತೆರಡುಂ ಕೆಲಕ್ಕೆ ನೀ
ರುಗಿಯ ಗದಾಭಿಘಾತಪರಿಪೂರಿತತೋಯಜ ಪಂಡಮಲ್ಲಿಗ |
ಗೆ ಕದಡೇ ಭೀಮಭುಜಮಂದರಘಟ್ಟನೆಯಿಂದಮಲ್ಲಿ ತೊ ಟ್ಟಗೆ ಕೊಳೆ ಕಾಳಕೂಟಮೊಗೆವಂತೊಗೆದಂ ಫಣಿರಾಜಕೇತನಂ || ೮೨
೭೯. ಮನುಷ್ಯತ್ವದ ಯೋಗ್ಯತೆಯನ್ನು ಕಳೆದುಕೊಂಡ ಮೇಲೆ ನೀನು ಮನುಷ್ಯನೇ? ನೀನು ಮೀನಿನ ನೆವದಿಂದ ನೀರಿನಲ್ಲಿದ್ದೀಯೆ; ಆಹಾ! ಎಂತಹ ಆತ್ಮಗೌರವದ ಪರಾಕ್ರಮದ ಪರಮೋಚ್ಚ ಸ್ಥಾನವನ್ನು ಏರಿದ್ದೀಯೆ! ೮೦. ನಿನ್ನ ಪರಾಕ್ರಮಾತಿಶಯವನ್ನು ಸ್ಥಾಪಿಸಿ ನಿನ್ನ ಶಾಸ್ತ್ರೀಯ ಹೊತ್ತು ತಪ್ಪಿಹೋಗುವುದಕ್ಕೆ ಬಿಡದೆ ಸಾವಕಾಶಮಾಡದೇ ಈಗಲೇ ಹೊರಟು ಬಾ. ನೀನು ಸ್ವಲ್ಪ ತಡಮಾಡಿದರೆ ಸರೋವರದ ನೀರನ್ನೆಲ್ಲ ತುಳುಕಿ ಪಾತಾಳದವರೆಗೂ ಹುಡುಕಿ ಹೇಗೂ ಅಪ್ಪಳಿಸಿ ಕೊಂದುಹಾಕುತ್ತೇನೆ. ಏಳು ಸುಯೋಧನ ಇದೇನಿದು ? ವl ಎಂದು ಪ್ರಳಯಕಾಲದ ಗುಡುಗಿನ ಶಬ್ದದಿಂದ ಕೂಗಿ ಗರ್ಜನೆ ಮಾಡಿದ ಭೀಮನ ಆರ್ಭಟಕ್ಕೆ ಆನೆಯ ಮರಿಯ ಗರ್ಜನೆಯನ್ನು ಕೇಳಿದ ಸಿಂಹದ ಹಾಗೆ ಚಕ್ರವರ್ತಿಯಾದ ದುರ್ಯೋಧನನಿಗೆ ಮನಸ್ಸರ್ಯವು ಜಾರಿತು. ಜಲಸ್ಥಂಭ ಮಂತ್ರವೆಲ್ಲ ಮಾಯಾಮಂತ್ರವಾಯಿತು. ೮೧. ಶತ್ರುವು ಸುಮ್ಮನೆ ಹೀಗೆ ಹಿಯ್ಯಾಳಿಸಿದರೂ ಆ ಮಾತನ್ನು ಕಿವುಡರಂತೆ ಕಿವಿಗೆ ಹಾಕಿಕೊಳ್ಳದೆ ಸುಮ್ಮನೆ ನೀರಿನಲ್ಲಿ ಮುಳುಗಿದ್ದರೆ ನನ್ನ ಶೌರ್ಯವು ಮುಳುಗಿ ಹಾಳಾಗುತ್ತದೆ ಎಂದು (ಆತ್ಮಾಭಿಮಾನಿಯಾದ) ದುರ್ಯೋಧನನು ನೀರಿನಿಂದ ಮೇಲಕ್ಕೆ ನೆಗೆಯಲು ಪ್ರಕಾಶಮಾನವಾದ ಕಿರೀಟ ಪ್ರದೇಶದಲ್ಲಿರುವ ರತ್ನಗಳ ಕಾಂತಿಸಮೂಹವು ಇದ್ದಕ್ಕಿದ್ದ ಹಾಗೆ ಅಧಿಕವಾಗಲು ಆ ಸರೋವರವು ಕಾಮನ ಬಿಲ್ಲಿನ ಕಾಂತಿಯನ್ನು ಹೊಂದಿತು. ೮೨. ವ್ಯಾಪಿಸಿದ ನೀರು ಗುಳ್ಳೆಗಳು ಮೇಲಕ್ಕೆದ್ದವು. ಅವು ಬಂದ ಹಾಗೆ ಎರಡು