________________
೬೬೮) ಪಂಪಭಾರತಂ ಪೂರಿಸಿಯುಂ ಭೇರಿಯಂ ತಾಡಿಸಿಯುಮೇಗೆಯುಂ ಪೊಜಿಮಡದಿರೆ ಭೀಮಸೇನನನ್ನ ಸರಂಗಳಲ್ಲದೀ ಬೂತು ಪೊಜೆಮಡುವನಲ್ಲನೀತಂಗಾನ ಬಲ್ಲೆನುಸಿರದಿರಿಮೆಂದು ಸಕಳ ದಿಗ್ವಳಯ ಭರಿತ ಮಹಾಸಿಂಹನಾದದಿಂದಲ್ಲಿಯ ಜಳಚರಂಗಳೆರ್ದೆ ಪೌವನ ಪಾಜುವನ್ನೆಗಮಾರ್ದು
ಮಗ ಸl ಕಿತೆಯಂದಿಂದಿತ್ತ ದುರ್ಯೋಧನನೆನಿಸಿದ ವಿಕ್ರಾಂತಮೇನಾದುದಕ್ಕಿಂ
ದಿವುರ್ಕೆಲ್ಲಿತ್ತೊ ಪಾಂಚಾಳಿಯನೆವದಟೇನಾದುದೋ ಗಂಡ ಪೇಮ್ ಪೊ | ಚಳಿನಂತಾಮಾತುಮಿಂತೀಯಿರವನೆ ನಗೆಯಂ ಮಾಡಿದ್ದೆ ಬಂದನೀತಂ ಪಂನಲ್ಲಂ ದುರ್ಜಯಂ ಕೌರವಕುಳನಳಿನೀಕುಂಜರಂ ಭೀಮಸೇನಂ || ೭೭
ಕುಡಿದಂ ದುಶ್ಯಾಸನೋರಸ್ಥಳ ಎಗಳದಸ್ಯನ್ದಾರಿಯಂ ಕಂಡದಂ ಮು ನಡೆ ನೋಡುತ್ತಳ್ಳಿ ಮಾಸ್ಕೃ ನಿನಗಿಆವದಟಂ ಕೊಟ್ಟರಾರಿಂದು ಮಾಣ | ಲೈಡೆಯುಂಟೇ ಸಿಲ್ವಿದ್ಯೆ ಪೋ ಪೊಮಡು ಕೊಳದಿಂ ಸತ್ತೊಡಂ ಪುಟ್ಟ ನೀನೀ ಗಡೆ ದಲ್ ಕೊಂದಪ್ಪನೆನ್ನಂ ಮುಳಿಯಿಸಿ ನಿನಗಿಂ ದ್ರೋಹ ಬಾಬಾಸೆಯುಂಟೇ || ೭೮
ಅದರಲ್ಲೇನೂ ತಪ್ಪಿಲ್ಲ ಎಂದು ಕಳಕಳಶಬ್ದದಿಂದ ಆರ್ಭಟಮಾಡಿದರು. ಶಂಖಗಳನ್ನು ಪೂರೈಸಿದರು. ನಗಾರಿಗಳನ್ನೂ ಹೊಡೆಯಿಸಿದರು. ಏನೂ ಮಾಡಿದರೂ ಹೊರಗೆ ಹೊರಡದಿರಲು ಭೀಮಸೇನನು ಈ ಭೂತವು ನನ್ನ ಧ್ವನಿ ಕೇಳಿದಲ್ಲದೆ ಹೊರಟುಬರುವವನಲ್ಲ; ಇವನಿಗೇನು ಮಾಡಬೇಕೆಂಬದನ್ನು ನಾನು ಬಲ್ಲೆ. ನೀವು ಮಾತನಾಡಬೇಡಿ ಎಂದು ಸಕಲದಿಕ್ಕುಗಳ ಸಮೂಹದಲ್ಲಿ ವ್ಯಾಪಿಸಿರುವ ಮಹಾಸಿಂಹನಾದದಿಂದ ಅಲ್ಲಿಯ ಜಲಚರಗಳ ಎದೆಯು ಪವ್ವನೆ ಹಾರಿಹೋಗುವ ಹಾಗೆ ಆರ್ಭಟಮಾಡಿದನು. ೭೭. ಬಾಲ್ಯದಿಂದಲೂ ದುರ್ಯೊಧನನೆನಿಸಿಕೊಂಡ ನಿನ್ನ ಪೌರುಷವೇನಾಯಿತು? ಮೇಲೆ ಬಿದ್ದು ಯುದ್ದಮಾಡುವ ಗರ್ವವು ಎಲ್ಲಿ ಹೋಯಿತು ? ಬ್ರೌಪದಿಯನ್ನು ಎಳೆಯುವ ಶೌರ್ಯವೇನಾಯಿತು ? ಪೌರುಷಶಾಲಿಯೇ ಹೇಳು. ಆಗ ಆ ಗರ್ವದ ಮಾತನ್ನಾಡಿ ಈಗ ಈ ದುಃಸ್ಥಿತಿಯಲ್ಲಿದ್ದು ನಗುವನ್ನುಂಟುಮಾಡಿದೆಯಲ್ಲ; ಈಗ ಬಂದಿರುವವನು ಬೇರೆ ಯಾರೂ ಅಲ್ಲ: ಜಯಿಸುವುದಕ್ಕೆ ಅಸಾಧ್ಯನಾದ ಕೌರವಕುಲವೆಂಬ ಕಮಲಕ್ಕೆ ಆನೆಯಂತಿರುವ ಭೀಮಸೇನ. ೭೮, ದುಶ್ಯಾಸನನ ಹೃದಯಪ್ರದೇಶದಿಂದ ಹರಿಯುತ್ತಿದ್ದ ರಕ್ತವನ್ನು ಕುಡಿದೆನು. ಅದನ್ನು ಮೊದಲು ನೋಡಿ ಹೆದರಿ ನಿಂತೆಯಾ? ನನಗೆ ಯುದ್ಧ ಮಾಡುವ ಪರಾಕ್ರಮವನ್ನು ಕೊಟ್ಟವರಾರು? ಈ ದಿನ ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಅವಕಾಶವುಂಟೆ ? ಸಿಕ್ಕಿದೆ, ಚಿಃ ಕೊಳದಿಂದ ಹೊರಡು; ಸತ್ತರೂ ಹುಟ್ಟದೇ ಹೋಗುತ್ತೀಯಾ? ಈಗ ಕೊಂದುಹಾಕು ತೇನಲ್ಲವೇ, ನನ್ನನ್ನು ರೇಗಿಸಿಯೂ ದ್ರೋಹ, ನಿನಗೆ ಬಾಳುವಾಸೆಯುಂಟೆ!