________________
೬೭೦ | ಪಂಪಭಾರತಂ |
ವಗೆ ಅಂತೊಗೆದು ದಿಕ್ಕರಿಕರಾನುಕಾರಿ ಕರಪರಿಶೋತ್ತಂಸಿತ ತೋರಣೀಕೃತ ರೌದ್ರಗದಾದಂಡನುಂ ಪ್ರಚಂಡನುಮಾಗಿ ಸೆರಗಿಲ್ಲದೆ ಕೊಳದಿಂ ಪೊಆಮಟ್ಟು ಬರ್ಪ ದುರ್ಯೋಧನನಂ ಧರ್ಮಪುತ್ರ ನೋಡಿ
ಚoll ನಡಪಿದ ನಂಟರೆಯ ಪೂರದಾಳ್ ರಣರಂಗದೊಳುಳ್ಳರೆಲ್ಲರುಂ
ಮಡಿದೋಡಮುರ್ಕುಗುಂದದುಗುರಂತೆರಡುಂ ಕಡೆ ತಪ್ಪ ಕೂರ್ಪನೋ | ಗಡಿಸದೆ ತಾಳಿ ಮೆಯೊಳೆ ವೃಕೋದರನೊಂದ ಸರಕ್ಕೆ ಕಾಯೊಡಂ ಬಡ ಸಿಡಿಲೇಳೆಯಿಂ ಮಸಗಿ ಬಂದನಿದೇಂ ಕಲಿಯೋ ಸುಯೋಧನಂ || ೮೩ ವ|| ಎಂಬನ್ನೆಗಮೆಯ್ದವಂದು ದುರ್ಯೋಧನಂ ಪಾಂಡುತನೂಜರನಿಂತೆಂದಂಮllಎಳೆ ಮುಂ ದೈತ್ಯನ ಕೆಯ್ದೆ ಪೋಗೆ ತರಲೆಂದೀ ಚಕ್ರಿ ಮುನ್ನಂ ರಸಾ
ತಳಮಂ ಪೊಕ್ಕುದಮಿಾ ಮಹೋಗ್ರ ರಣದೊಳ್ ನಿಮ್ಮೊಂದು ಕೆಯ್ದಿದ್ದ ಭೂ | ತಳಮಂ ಮತ್ತೆ ತರಲ್ ವಿಶುದ್ಧ ನಿಯಮ ಪ್ರಾರಂಭದಿಂದಾನುಮಾ ಕೊಳನಂ ಪೊಕ್ಕುದುಮಾವ ದೋಷಮೆನಗಿಂ ಮಾಜಾಂಪರಾರ್ ತೋಡಿರೇ || ೮೪
ವರು ಎಂಬುದುಂ ಧರ್ಮಪುತ್ರನಿಂತೆಂದಂ
ಪಕ್ಕಗಳಿಗೂ ನೀರು ವಿಭಾಗವಾಯಿತು. ಗದೆಯ ಹೊಡೆತದಿಂದ ತುಳುಕಿದ ಸರೋವರವು ಅಲ್ಲಲ್ಲಿ ಬಗ್ಗಡವಾಯಿತು. ಭೀಮನ ಮಂದರಪರ್ವತದಂತಿರುವ ಬಾಹುಗಳ ಹೊಡೆತದಿಂದ ಬೇಗನೆ ಆಕ್ರಮಿಸಲು ಕಾಳಕೂಟವಿಷವು ಹುಟ್ಟುವಂತೆ ದುರ್ಯೋಧನನು ಹುಟ್ಟಿದನು. ವll ಹಾಗೆ ಹುಟ್ಟಿ ದಿಗ್ಗಜದ ಸೊಂಡಿಲನ್ನು ಹೋಲುವ ಪರಿಘದಂತಿರುವ ಕೈಗೆ ಆಭರಣಪ್ರಾಯವಾಗಿ ತೋರಣವಾಗಿ ಮಾಡಲ್ಪಟ್ಟ ಭಯಂಕರವಾದ ಗದಾ ದಂಡವನ್ನುಳ್ಳವನೂ ಬಹಳ ಕಾಂತಿಯುಕ್ತನೂ ಆಗಿ ಭಯವಿಲ್ಲದೆ ಕೊಳದಿಂದ ಹೊರಗೆ ಹೊರಟು ಬರುತ್ತಿರುವ ದುರ್ಯೋಧನನನ್ನು ಧರ್ಮರಾಜನು ನೋಡಿ ಹೀಗೆಂದನು. ೮೩. ತನ್ನನ್ನು ಸಾಕಿ ಸಲಹಿದ ಬಂಧುಗಳೂ ತಾನು ಚೆನ್ನಾಗಿ ಸಾಕಿದ ಆಳುಗಳೂ ಉಳಿದವರೆಲ್ಲರೂ ರಣರಂಗದಲ್ಲಿ ಸತ್ತರೂ ಉತ್ಸಾಹಶೂನ್ಯನಾಗದೆ ಉಗುರಿನ ಹಾಗೆ ಎರಡು ಕಡೆಯೂ ನಾಶಮಾಡುವ ತೀಕ್ಷ ತೆಯನ್ನೂ ಹೋಗಲಾಡಿಸಿಕೊಳ್ಳದೆ ತನ್ನ ಮೆಯ್ಯಲ್ಲಿ ಧರಿಸಿ ಭೀಮನ ಒಂದೇ ಗರ್ಜನೆಗೆ ಕೋಪವುಂಟಾಗಲು ಸಿಡಿಲಿನಂತೆ ರೇಗಿ ಬಂದಿದ್ದಾನೆ. ದುರ್ಯೋಧನನು ಎಂತಹ ಶೂರನೋ! ವ|| ಎನ್ನುವಷ್ಟರಲ್ಲಿ ದುರ್ಯೋಧನನು ಸಮೀಪಕ್ಕೆ ಬಂದು ಪಾಂಡವರಿಗೆ ಹೀಗೆಂದನು - ೮೪, ಹಿಂದೆ ಭೂಮಿಯು ರಾಕ್ಷಸನಾದ ಹಿರಣ್ಯಾಕ್ಷನ ಕೈಸೇರಲು ಈ ಕೃಷ್ಣನೇ ಮೊದಲು ಪಾತಾಳಲೋಕವನ್ನು ಪ್ರವೇಶ ಮಾಡಿದುದೂ ಈ ಮಹಾಭಯಂಕರವಾದ ಯುದ್ದದಲ್ಲಿ ನಿಮ್ಮ ಕೈಗೆ ಬಿದ್ದ ಭೂಮಂಡಲವನ್ನು ಪುನಃ ತರಲು ಶಾಸೋಕ್ತವಾಗಿ ನಾನು ಈ ಕೊಳವನ್ನು ಪ್ರವೇಶಿಸಿದುದೂ ಯಾವ ತಪ್ಪು? ಇನ್ನು ನನಗೆದುರಾಗುವವರು ಯಾರು ತೋರಿಕೊಡಿ ಎಂದನು. ವ|| ಧರ್ಮರಾಯನು ಹೀಗೆಂದನು :