________________
ಚoll
ತ್ರಯೋದಶಾಶ್ವಾಸಂ /೬೫೭ ಮರುಳೆನೆ ಲೋಕದೊಳ್ ನೆಗಟ್ಟು ಕೊಳ್ಳುಳದೊಳ್ ಮರುಳಾಟವಾಡುವಾಂ ಮರುಳೆನೊ ವಿಕ್ರಮಾರ್ಜುನನೊಳೊಲ್ಲದೆ ಸಂಧಿಯನುರ್ಕಿ ಕೆಟ್ಟ ನೀಂ | ಮರುಳಯೊ ಪೇಟೆ ಪೇಳಿದೊಡೆ ಪೋಗದಿರೀಶ್ವರನಾಣೆಯೆಂದು ಪು ಲರುಳಿನಿಸಾನುಮಂ ತೆಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ ||
99.9%
ವ|| ಆಗಳಾ ಮರುಳ ಕೆಯಕ್ಕೆ ದುರ್ಯೋಧನಂ ಮುಗುಳಗೆ ನಕ್ಕೆನ್ನಂ ವಿಧಾತ್ರ ಮರುಳಾಡಿದ ಕಾರಣದಿಂದೀ ಮರುಳ ಕಣ್ಣಾಂ ಮರುಳಾಗಿ ತೋಡೆದೆನೆಂದಲ್ಲಿಂ ತಳರ್ದು ಕಿಳದಂತರಮಂ ನಡೆದೊಂದೆಡೆಯೊಳನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಮುಭಯ ಪಕ್ಷಸ್ಥಿತೋಭಯಕುಲಶುನೃಪತಿಮಣಿಮಕುಟಮರೀಚಿಮೇಚಕಿತಮುಮಪ್ಪ ಸಂಗ್ರಾಮಭೂಮಿಯ ನಡುವೆ ದೃಷ್ಟದ್ಯುಮ್ನಕಚಗ್ರಹವಿಲುಳಿತವಳಿಯುಂ ತದೀಯ ಕೌಕ್ಷೇಯಕಧಾರಾವಿದಾರಿತ ಶರೀರನುವಾಗಿ ಬಿಟ್ಟೆರ್ದ ಶರಾಚಾರ್ಯರು ಕಂಡು
ಚಂ|| ನೆಗಟ್ಟುದು ಬಿಲ್ಲ ಬಿನ್ನಣಮಿಳಾವಳಯಕ್ಕೆ ಸಮಸ್ತ ಧಾತ್ರಿ ಕೆ
ಯುಗಿವುದು ನಿಮ್ಮದೊಂದೆ ಪೆಸರ್ಗಳೊಡ ನಿಮ್ಮ ಸರಲ್ಲಿ ದೇವರುಂ | ಸುಗಿವರಯೋನಿಸಂಭವರಿರೆನ್ನಯ ದೂಸಳನನ್ನ ಕರ್ಮದಿಂ ಪಗೆವರಿನಕ್ಕಟಾ ನಿಮಗಾಯಿರವಾದುದೆ ಕುಂಭಸಂಭವಾ |
೫೬
ಬಂದು ದುರ್ಯೋಧನನನ್ನು ಅಪಹಾಸ್ಯಮಾಡುವಂತೆ ಒಂದು ಮರುಳು ಮಾತನಾಡಿತು. ೫೫, ಲೋಕದಲ್ಲಿ ಮರುಳುಗಳು ಎನ್ನಿಸಿಕೊಂಡು ಪ್ರಸಿದ್ಧರಾಗಿ ಯುದ್ಧರಂಗದಲ್ಲಿ ಮರುಳುಗಳ ಆಟವನ್ನಾಡುವ ನಾವುಗಳು ಮರುಳುಗ (ಬುದ್ದಿಗೇಡಿಗಳೊ) ವಿಕ್ರಮಾರ್ಜುನನಲ್ಲಿ ಸಂಧಿಯನ್ನೊಲ್ಲದೆ ಉಬ್ಬಿ ಕೆಟ್ಟ ನೀನು ದಡ್ಡನೋ ಹೇಳು, ಹೇಳದಿದ್ದರೆ ಹೋಗಬೇಡ; ಈಶ್ವರನಾಣೆ ಎಂದು ಹುಲ್ಲಿನಂತೆ ಬಹು ಲಘುವಾದ ಒಂದು ಮರುಳು ಒಂದಿಷ್ಟು ತಡೆದು ದುರ್ಯೋಧನನನ್ನು ಹಿಂಸೆ ಮಾಡಿತು. ವll ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳಗೆ ನಕ್ಕು ನನ್ನನ್ನು ಬ್ರಹ್ಮನು ಮರುಳುಮಾಡಿದ ಕಾರಣದಿಂದ ಈ ಪಿಶಾಚದ ಕಣ್ಣಿಗೆ ನಾನು ಹುಚ್ಚನಾಗಿ ತೋರಿದೆನು ಎಂದು ಅಲ್ಲಿಂದ ಹೊರಟು ಸ್ವಲ್ಪ ದೂರ ನಡೆದು ಒಂದು - ಕಡೆಯಲ್ಲಿ ಅನೇಕ ಆನೆ, ಕುದುರೆ ಮನುಷ್ಯರ ದೇಹಗಳಿಂದ ತುಂಬಿದುದೂ ಎರಡು ವಂಶದ ಪಕ್ಷಗಳಲ್ಲಿಯೂ (ತಂದೆತಾಯಿಗಳ ಎರಡು ಕುಲದಲ್ಲಿಯೂ) ಶುದ್ಧರಾದವರ ರತ್ನಕಿರೀಟಗಳ ಕಾಂತಿಯಿಂದ ಕೂಡಿಕೊಂಡಿರುವ ಆ ಯುದ್ಧಭೂಮಿಯ ಮಧ್ಯಭಾಗದಲ್ಲಿ ಧೃಷ್ಟದ್ಯುಮ್ನನು ಜುಟ್ಟನ್ನು ಹಿಡಿದುದರಿಂದ ತಿರುಗಿಕೊಂಡಿರುವ ತಲೆಯುಳ್ಳವನೂ ಅವನ ಕತ್ತಿಯ ಅಲಗುಗಳಿಂದ ಸೀಳಲ್ಪಟ್ಟ ಶರೀರವುಳ್ಳವನೂ ಆಗಿ ಬಿದ್ದಿದ್ದ ದ್ರೋಣಾಚಾರ್ಯನನ್ನು ನೋಡಿದನು. ೫೬. ನಿಮ್ಮಚಾಪವಿದ್ಯಾಕೌಶಲವು ಭೂಮಂಡಲದಲ್ಲೆಲ್ಲ ಪ್ರಸಿದ್ಧವಾದುದು. ನಿಮ್ಮ ಒಂದು ಹೆಸರನ್ನು ಕೇಳಿದರೆ ಸಮಸ್ತ ಲೋಕವೂ ಕೈಮುಗಿಯುವುದು. ನಿಮ್ಮ ಬಾಣಗಳಿಗೆ ದೇವತೆಗಳೂ ಭಯಪಡುವರು. ನೀವು ಅಯೋನಿಜರಾಗಿದ್ದೀರಿ; ನನ್ನ ಕಾರಣದಿಂದ ನನ್ನ ದುಷ್ಕರ್ಮದಿಂದ ಅಯ್ಯೋ ದ್ರೋಣಾಚಾರ್ಯರೇ ಶತ್ರುಗಳಿಂದ ನಿಮಗೂ ಈ ದುಃಸ್ಥಿತಿಯುಂಟಾಯಿತೇ?