________________
೬೫೬ | ಪಂಪಭಾರತಂ ಚಂ|| ಎಗುವನೇಕ ವಂಶ ನರಪಾಲಕರತ್ನಕಿರೀಟಕೋಟಿಯೊಳ್
ಮಿಣುಗುವ ಪದರಾಗದ ಬಿಸಿಗಿವೀ ನಿಜ ತಾದಪದಮಾ | ಯಿದು ಸಿಡಿಲ್ಲ ಬಾಳ ಮೊನೆಯಂದಿನ ತಿಂತಿಣಿಯೊಳ್ ತಗುಳು ಕಿ ಕಿಚಿಗಿಳಿದಿರ್ದ ಕೊಳ್ಳುಳದೊಳಂ ನಡೆವೀ ನಡೆಗೆಂತು ನೋಂತೆಯೋ ೫೨
ವ|| ಎನುತುಂ ಕಿತದಂತರಮಂ ಬಂದುಚಂ|| ಇವು ಪವನಾತ್ಮಜಂ ಗದೆಯಿನೆಲ್ವಡಗಾಗಿರೆ ಮೋದ ಮೊಟ್ಟೆ ಬಿ.
ಇವು ಮದವಾರಣಂಗಳಿವು' ನೋಡ ಗುಣಾರ್ಣವನಂದಿನಿಂದುರು | ಳ್ಳುವು ಮನುಜೇಂದ್ರ ರುಂದ್ರ ಮಕುಟಾಳಿಗಳಿಗಳಿಂತಿವ ಗಾಂ ಡಿವಿಯ ವರೂಥಘಾತದೊಳೆ ನುರ್ಗಿದ ತುಂಗುರಂಗಕೋಟಿಗಳ್ || ೫೩
ವ|| ಎಂದು ನೆಣದ ಪಳ್ಳಂಗಳಂ ಪಾರುಂ ನೆತ್ತರ ತೊಳಿತಿಗಳಂ ಬಂಜಿಸಿಯುಮಡಗಿನಿಡುವುಗಳಂ ದಾಂಟಿಯುಂ ಪೆಣದ ತಿಂತಿಣಿಯಂ ನೂಂಕಿಯುಂ ರಥದ ಘಟ್ಟಣೆಗಳನೇಳೆ ಪಾಯುಂ ತೇರ ಪಲಗೆಯಂ ಮಟ್ಟಿಯುಂ ಪೋಗಿವೋಗಿ ಭೂತ ಪ್ರೇತ ಪಿಶಾಚ ನಿಶಾಚರನಿಚಯನಿಚಿತಭೂಭಾಗಮನೆಯೇ ವಂದಾಗಳ್ಉ: ಬೇಡ ವಿರೋಧಮೆಂತುಮರಿಕೇಸರಿಯೊಳ್ ಸಮಸಂದು ಸಂಧಿಯಂ
ಮಾಡೆನೆ ಮಾಡಲೊಲ್ಲದೆ ಸುಹೃದ್ದಲಮೆಲ್ಲಮನಿಕ್ಕಿ ಯುದ್ಧಮಂ | ಮಾಡಿದ ಜಾತಿಬೆಟ್ ನಿನಗದೇವಿರಿದೀಯೆಡಜತೆಂದು ಮುಂದೆ ಬಂ ದೇಡಿಸುವಂತಿರಾಡಿದುದದೋಂದು ಮರುಳ್ ಫಣಿರಾಜಕೇತುವಂ || ೫೪
೫೨. ನಮಸ್ಕಾರಮಾಡುವ ಅನೇಕ ಮನೆತನಗಳ ರಾಜರ ಕಿರೀಟದ ತುದಿಯಲ್ಲಿ ಪ್ರಕಾಶಿಸುತ್ತಿರುವ ಪದ್ಮರಾಗದ ಕಾಂತಿಗೂ ರತ್ನಗಳ ಪ್ರಕಾಶಕ್ಕೂ ಅಂಜುತ್ತಿದ್ದ ಈ ನಿನ್ನ ಪಾದಕಮಲಗಳು ಈಗತಾನೇ ಕತ್ತಲಿಸಲ್ಪಟ್ಟು ಸಿಡಿದು ಬಿದ್ದಿರುವ ಮೊನಚಾದ ಬಾಣಗಳ ಸಮೂಹದಲ್ಲಿ ಸೇರಿಕೊಂಡು ಒತ್ತಾಗಿ ಸೇರಿರುವ ಯುದ್ಧರಂಗದಲ್ಲಿಯೂ ನಡೆಯುವ ಈ ನಡೆಗೆ ಎಷ್ಟು ವ್ರತಮಾಡಿದ್ದೆಯೋ?- ವll ಎನ್ನುತ್ತ ಸ್ವಲ್ಪದೂರ ಬಂದು ೫೩. ಇವು ಭೀಮನು ಗದೆಯಿಂದ ಮೂಳೆ ಮಾಂಸಗಳಾಗುವಂತೆ ಹೊಡೆಯಲು ಕುಸಿದು ಬಿದ್ದ ಮದ್ದಾನೆಗಳು. ಇವು ನೋಡಪ್ಪ, ಅರ್ಜುನನ ಬಾಣದಿಂದ ಉರುಳಿಬಿದ್ದ ರಾಜರ ರಾಶಿಯಾದ ಕಿರೀಟಗಳ ಸಮೂಹಗಳು. ಇವು ಅರ್ಜುನನ ತೇರಿನ ಪೆಟ್ಟಿನಿಂದ ಜಜ್ಜಿಹೋದ ಎತ್ತರವಾದ ಕುದುರೆಗಳ ಸಮೂಹಗಳು ವl ಎಂಬುದಾಗಿ ಕೊಬ್ಬುಗಳ ಹಳ್ಳವನ್ನು ಹಾಯೂ ರಕ್ತಪ್ರವಾಹಗಳನ್ನು ತಪ್ಪಿಸಿಯೂ ಮಾಂಸದ ರಾಶಿಗಳನ್ನು ದಾಟಿಯೂ ನರಗಳ ಸಮೂಹವನ್ನು ತಳ್ಳಿಯೂ ತೇರಿನ ಸಂಘಟಣೆಗಳಿಂದಾದ ದಿಣ್ಣೆಹಳ್ಳಗಳನ್ನು ಹತ್ತಿ ಇಳಿದೂ ತೇರಿನ ಹಲಗೆಗಳನ್ನು ತುಳಿದೂ ನಡೆದು ಹೋಗಿ ಭೂತಪ್ರೇತಪಿಶಾಚರಾಕ್ಷಸಸಮೂಹದಿಂದ ತುಂಬಿದ ಪ್ರದೇಶವನ್ನು ಸೇರಿದರು. ೫೪. ಅರಿಕೇಸರಿಯಲ್ಲಿ ಹೇಗೂ ವಿರೋಧವು ಬೇಡ, ಸಮಾನವಾಗಿ ಕೂಡಿ ಸಂಧಿಯನ್ನು ಮಾಡು ಎಂದರೂ ಒಪ್ಪದೆ ಸ್ನೇಹಿತರನ್ನು ನಾಶಮಾಡಿ ಯುದ್ಧವನ್ನು ಮಾಡಿದ ಜಾತಿಮರುಳಾದ ನಿನಗೆ ಈ ಕಷ್ಟಗಳು ಏನು ದೊಡ್ಡದು ಎಂದು ಮುಂದೆ