________________
ತ್ರಯೋದಶಾಶ್ವಾಸಂ / ೬೫೫
ಮಾತಂಗ ಪದನಖಖರ್ವತೋರ್ವತಳಮುಂ ಪ್ರಚಂಡಮಾರ್ತಂಡಮರೀಚಿತೀವ್ರಜ್ಜಳನಾಸ್ಕಾರ
ಕರಾಳಕರವಾಳಭಾಮಂಡಳಪರೀತೋದತದೋರ್ದಂಡಚಂಡಪ್ರಚಂಡಸುಭಟಾರೂಢತುರಂಗಮ
ವೇಗಬಲಪತಿತಖರಖುರಟಂಕಪರಿಸ್ಕಲನಕಳಿತವಿಷಮಸಮರಭೇರೀ ನಿನಮುಮಾಕರ್ಣಕೃಷ್ಣ ವಿಕ್ರಮಾರ್ಜುನಕಾರ್ಮುಕವಿಮುಕ್ತನಿಶಿತಸಾಯಕಸಂಕುಳಶನಿಪತಿ ತಾನೇಕಕಳಕಳಾಕಳಿತಮುಂ ಪ್ರಕುಪಿಸೂತಹೂಂಕಾರ ಕಾತರಿತತರಳತರತುರಂಗದ್ರುತವೇಗಾಕೃಷ್ಣ ಧನಂಜಯರಥಚಟುಳ ಚಕ್ರನೇಮಿಧಾರಾಪರಿವೃತಸಂಘಟ್ಟನಸಮುಚ್ಚಳಿತ ಪಾಂಸು ಪಟಳಾಂಧಕಾರದುರ್ಲಕ್ಷಾಂತರಿಕ್ಷ ಕ್ಷಿತಿ ದಿಗಂತರಾಳಾಂತರಮುಮನವರತನಿಹತನರಕರಿತುರಗನಿಕುರುಂಬಕೀಲಾಲಕಲ್ಲೋಲಪ್ರವರ್ತನಾನೇಕ ನದನದೀಪ್ರವಾಹಬಾಹುಳ್ಯದುಸ್ತರಾವತರಣಮಾರ್ಗಮುಂನಿಶಿತಾಸಿಪತ್ರಪತಿತ ಪ್ರಚಂಡ ಸುಭಟಮಸ್ತಕೋಚ್ಚಳಿತಚಟಾಚ್ಛಾಟನದುರ್ನಿರೀಕ್ಷ ನರ್ತಿತಾನೇಕಕಬಂಧಬಂಧುರಮುಮಪ್ಪ ವಿಷಮ ಪ್ರದೇಶಂಗಳೊಳ್ ತೊಲಗಿ ತೊಲಗಿ ಪೋಗೆ ಸಂಜಯಂ ದುರ್ಯೋಧನನ ಮೊಗಮಂ ನೋಡಿ
ವಹಿಸಿರುವ ಭೀಮಸೇನನ ದೊಡ್ಡದಾದ ಗದೆಯ ಪೆಟ್ಟನ್ನು ಸಹಿಸಲಾಗದ ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ ಭೂಭಾಗವನ್ನುಳ್ಳದೂ ಬಹಳ ಕಾಂತಿಯಿಂದ ಕೂಡಿದ ಸೂರ್ಯನ ತೀವ್ರವಾದ ಕಿರಣಗಳಂತೆಯೂ ತೀವ್ರಾಗ್ನಿಯಂತೆಯೂ ಹೊಳೆಯುವ ಭಯಂಕರವಾದ ಕತ್ತಿಗಳ ಕಾಂತಿಯ ಪರಿವೇಷದಿಂದ ಸುತ್ತುವರಿಯಲ್ಪಟ್ಟು ಎತ್ತರವಾದ ಬಾಹುಗಳಿಂದ ಪ್ರಚಂಡವಾದ ಸುಭಟರು ಹತ್ತಿರುವ ಕುದುರೆಗಳ ಸೈನ್ಯದ ವೇಗದಿಂದ ಬೀಳಿಸಲ್ಪಟ್ಟ ಹೇಸರಗತ್ತೆಗಳ ತೀಕ್ಷ್ಮವಾದ ಗೊರಸಿನ ಲಾಳಗಳ ಜಾರುವಿಕೆಯಿಂದ ಉಂಟಾದ ಶಬ್ದವುಳ್ಳದ್ದೂ ಕಿವಿಯವರೆಗೂ ಸೆಳೆಯಲ್ಪಟ್ಟ ಅರ್ಜುನನ ಬಾಣದಿಂದ ಬಿಡಲ್ಪಟ್ಟ ಹರಿತವಾದ ಬಾಣಗಳ ಶಲ್ಯದಿಂದ (ಚೂರು) ಬೀಳಿಸಲ್ಪಟ್ಟ ಅನೇಕ ಕಳಕಳಶಬ್ದಗಳಿಂದ (ಕೂಡಿದುದೂ) ತುಂಬಿದುದೂ ಕೋಪಗೊಂಡ ಸಾರಥಿಗಳ ಗರ್ಜನೆಗಳಿಂದ ಸಂಭ್ರಮಗೊಂಡ ಚಂಚಲವಾದ ಕುದುರೆಯ ಓಟದ ವೇಗದಿಂದ ಸೆಳೆಯಲ್ಪಟ್ಟ ಅರ್ಜುನನ ಬಲಿಷ್ಠವಾದ ಚಕ್ರಗಳ ಸುತ್ತಲಿರುವ ಕಬ್ಬಿಣದ ಪಟ್ಟಿಗಳು ಹೊರಳಿದ ಹೊಡೆತದಿಂದ ಮೇಲಕ್ಕೆದ್ದ ಧೂಳುಗಳ ಪದರದಿಂದ ಕಾಣಲಾಗದ ಭೂಮ್ಯಾಕಾಶ ದಿಗ್ಗಾಗಗಳ ಒಳಭಾಗವನ್ನುಳ್ಳುದೂ ಯಾವಾಗಲೂ ಹೊಡೆಯಲ್ಪಟ್ಟ ಮನುಷ್ಯ, ಆನೆ, ಕುದುರೆಗಳ ಸಮೂಹದ ರಕ್ತಗಳ ಅಲೆಗಳ ಹೊರಳುವಿಕೆಯಿಂದ ಆದ ಅನೇಕ ನದನದೀ ಪ್ರವಾಹಗಳನ್ನು ದಾಟಲಸಾಧ್ಯವಾದ ದಾರಿಗಳನ್ನುಳ್ಳುದೂ, ಹರಿತವಾದ ಕತ್ತಿಯಿಂದ ಬೀಳಿಸಲ್ಪಟ್ಟ ಭಯಂಕರವಾದ ಸುಭಟರ ತಲೆಯಿಂದ ಮೇಲಕ್ಕೆದ್ದ ಜುಟ್ಟುಗಳ ಚಲನೆಯಿಂದ ಮರೆಯಾಗಿರುವ ಅನೇಕ ಅಟ್ಟೆಗಳ ನೃತ್ಯದಿಂದ ಮನೋಹರವಾಗಿರುವುದೂ ಆಗಿರುವ ಹಳ್ಳಕೊಳ್ಳಗಳ ಪ್ರದೇಶದಲ್ಲಿ ನಡೆದು ಹೋಗುತ್ತಿರುವ ದುರ್ಯೋಧನನ ಮುಖವನ್ನು ಸಂಜಯನು ನೋಡಿ