________________
೬೫೪ | ಪಂಪಭಾರತಂ
ವ|| ಎಂಬುದುಮೆನ್ನುಮನೇಕಾಕಿಯೆಂದೇಳಿಸಿ ನುಡಿದೆಯೆಂದು ಸಂಜಯನ ಮೊಗಮಂ ಮುನಿದು ನೋಡಿಚoll ವನ ಕರಿ ಕುಂಭ ಪಾಟನ ಪಟಪ್ಪ ಕಠೋರ ನಖ ಪ್ರಹಾರ ಭೇ |
ದನ ಗಳಿತಾಸ್ಕ ರಕ್ತ ನವ ಮೌಕ್ತಿಕ ಪವಿಳಾಸ ಭಾಸುರಾ | ನನನೆನೆ ಸಂದುದಗ್ರ ಮೃಗರಾಜನುಮಂ ಮದವದ್ವಿರೋಧಿ ಭೇ
ದನಕರನಪ್ಪ ಶೌರ್ಯಮದದೆನ್ನುಮನೊಂದೊಡಲೆಂಬ ಸಂಜಯಾ ೧ ೫೧
ವ| ಎಂಬುದುಂ ದೇವರ ಬಾಹುಬಳಮಜೇಯಮುಮಸಹಾಯಮುಮಪ್ಪುದಾದ ದೊಡಂ ದೇಶ ಕಾಲ ವಿಭಾಗಮುಮನಾಪತೀಕಾರಮುಮನಯದ ವಿವೇಕಿಗಳಂತೆ ದೇವರ್ ನೆಗಲಾಗದೇನಂ ನೆಗಡಂ ಕುರುಪಿತಾಮಹನೊಳಾಳೋಚಿಸಿ ನೆಗಟ್ಟುದೆಂದು ಮುಟಿಸಾಜಿತೆ ನುಡಿದು ಕಾಲವಂಚನೆಗೆಯ್ಯಲ್ ಬಗೆದು ಸಂಗ್ರಾಮರಂಗದೊಳಗನೆ ಮುಂದಿಟ್ಯೂಡಗೊಂಡನೇಕ ನೃಪಶಿರಃ ಕಪಾಳಶಕಳಜರ್ಜರಿತಮುಂ ಪರಸ್ಪರ ಸಮರರಭಸ ಸಮುತ್ಕಾರಿತಮುಂ ಸಕಲ ಸಾಮಂತಮಕುಟಬದ್ರಮೌಳಿಮಾಳಾವಿಗಳಿತಮಕುಟಕೋಟಿ ಸಂಘಟನೋಚ್ಚಳಿತ ಮಣಿಶಲಾಕಾ ಸಂಕುಳಮುಂ ಸಮರಭರ ನಿರ್ಭರ ಭೀಮಸೇನ ಘನಗದಾಪ್ರಹರಣನಿಸ್ಸಹಮದವದನೇಕ ಮತ್ತ
ಸಾಧ್ಯವಾಗಿದೆಯೆ? ನಿನ್ನ ಬಾಹುದಂಡದವರೆವಿಗೂ - ಅದಕ್ಕೆ ಸಮಾನರಾದ ಪೌರುಷಶಾಲಿಗಳು ಯುದ್ಧರಂಗದಲ್ಲಿದ್ದಾರೆಯೇ? ಶತ್ರುವನ್ನು ಕೊಲ್ಲುವ ಹಾಗೂ ಗೆಲ್ಲುವ ಹಾಗೆ ಕಾದಬೇಕು. ಸ್ವಾಮಿ; ಶತ್ರುರಾಜರುಗಳಲ್ಲಿ ಒಬ್ಬಂಟಿಗನೇ ಆಗಿ ಕಾದುತ್ತೀಯಾ? ವ|| ಎನ್ನಲು ನನ್ನನ್ನು ಏಕಾಕಿಯೆಂದು ಅಪಹಾಸ್ಯಮಾಡಿ ನುಡಿದೆಯಾ ಎಂದು ಸಂಜಯನ ಮುಖವನ್ನು ನೋಡಿ ಕೋಪಿಸಿಕೊಂಡು ೫೧. ಕಾಡಾನೆಯ ಕುಂಭಸ್ಥಳವನ್ನು ಭೇದಿಸುವುದರಲ್ಲಿ ಸಮರ್ಥವೂ ಕಠಿಣವೂ ಆದ ಉಗುರುಗಳ ಪೆಟ್ಟಿನಿಂದ ಬಿರಿದು ಅಲ್ಲಿಂದ ಸುರಿಯುತ್ತಿರುವ ಕೆಂಪಾದ ಹೊಸಮುತ್ತುಗಳ ಸಾಲುಗಳ ಶೋಭೆಯಿಂದ ಪ್ರಕಾಶಮಾನವಾದ ಮುಖವುಳ್ಳ ಮೃಗರಾಜನಾದ ಸಿಂಹವನ್ನೂ ಮದಿಸಿರುವ ಶತ್ರುಗಳನ್ನು ಸೀಳುವ ಪ್ರತಾಪದ ಸೊಕ್ಕಿನಿಂದ ಕೂಡಿದ ನನ್ನನ್ನು ಸಂಜಯಾ, ಏಕಾಕಿ ಎನ್ನುವೆಯಾ? ವರ ಸ್ವಾಮಿಯವರ ತೋಳಿನ ಬಲವು ಜಯಿಸುವುದಕ್ಕೆ ಆಗದುದೂ ಸಹಾಯವನ್ನಪೇಕ್ಷಿಸದುದೂ ಆಗಿದೆ. ಆದರೂ ದೇಶಕಾಲವಿಭಾಗವನ್ನು ಆಪತ್ತಿಗೆ ತಿಳಿಯದಿರುವ ವಿವೇಕಶೂನ್ಯರಾದವರ ಹಾಗೆ ಸ್ವಾಮಿಯವರು ಮಾಡಕೂಡದು. ಏನು ಮಾಡಬೇಕಾದರೂ ಕುರುಪಿತಾಮಹನಾದ ಭೀಷ್ಕರಲ್ಲಿ ಆಲೋಚಿಸಿ ಮಾಡತಕ್ಕದ್ದು ಎಂದು (ದುರ್ಯೊಧನನ) ಕೋಪವು ಕಡಿಮೆಯಾಗುವ ಹಾಗೆ ಮಾತನಾಡಿ ಸಮಾಧಾನಪಡಿಸಿದನು. ಕಾಲವಂಚನೆಮಾಡಲು ಯೋಚಿಸಿ ಯುದ್ಧರಂಗದಲ್ಲಿ ಒಳಭಾಗದಲ್ಲಿಯೇ ದುರ್ಯೊಧನನನ್ನು ಮುಂದಿಟ್ಟು ಕೊಂಡು ಅವನೊಡನೆ ಅನೇಕರಾಜರ ತಲೆ ಮತ್ತು ಕಪಾಲಗಳ ತಲೆಯೋಡು ಗಳಿಂದ ಕಿಕ್ಕಿರಿದಿದ್ದು ಒಬ್ಬೊಬ್ಬರ ಯುದ್ದರಭಸದಿಂದ ಹೊರಡಿಸಲ್ಪಟ್ಟುದೂ ಸಕಲ ಸಾಮಂತರಾಜರ ತಲೆಗಳ ಸಾಲುಗಳಿಂದ ಜಾರಿದ ಕಿರೀಟಗಳ ತುದಿಯ ತಗುಲುವಿಕೆ ಯಿಂದ ಮೇಲೆದ್ದ ರತ್ನಸಲಾಕಿಗಳ ಸಮೂಹವನ್ನುಳ್ಳುದೂ ಯುದ್ದಭಾರವನ್ನು