________________
೬೫೮ / ಪಂಪಭಾರತಂ
ವ|| ಎಂದು ಗುರುವಿನ ಪಾದಕಮಲಂಗಳಂ ತಲೆಯ ಮೇಲಿಟ್ಟು ಪೊಡೆವಟ್ಟಂತ ನಡೆತಂದು ವೃಕೋದರನಿಂ ನಿಶ್ಲೇಷ ಪೀತರುಧಿರನಪ್ಪ ದುಶ್ಯಾಸನನಂ ಕಂಡಾತನಂ ಮುತ್ತಿ ಸುತ್ತಿಗೆದ ಮುದುವರ್ದುಗಳುಮನಗಲ ಮೆಟ್ಟಿ ಪೋಟ್ಟು ಭೀಮಸೇನ ಮುನ್ನಂ ಕುಡಿದುದುಂ ನೆತ್ತರಂ ಪಡೆಯದಾಕಾಶಕ್ಕೆ ಬಾಯಂ ತಳದೂಲ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು ಸೋದರನಲಲೊಳ್ ಕಣ್ಣ ನೀರ್ಗಳಂ ಸುರಿದು
೫೭
ಕಂ ನಿನ್ನಂ ಕೊಂದನ ಬಸಿಲಿಂ
ನಿನ್ನಂ ತೆಗೆಯದೆಯುಮವನ ಕರುಳಂ ಪರ್ದಿ೦ || ಮುನ್ನುಂಗಿಸಿ ನೋಡದೆಯುಂ
ಮುನ್ನಮೆ ಯುವರಾಜ ನಿನ್ನನಾಗಿ ನೋಡಿದೆನೇ | ವ|| ಎಂಬುದುಂ ಸಂಜಯನಿಂತಪ್ಪ ವಿಪಳಾಪಂಗಳ ಶೌರ್ಯಶಾಲಿಗಳನುಚಿತ ಮತ್ತಮರ್ಪುದೆಂದು ತಳರ್ದು ಬಂದಮೋಘಾ ಧನಂಜಯ ಕರಪರಿಚ್ಚುತವಿಕರ್ಣ ವಿಶೀರ್ಣನಾಗಿರ್ದ ಕರ್ಣಸೂನುವಂ ವೃಷಸೇನನಂ ಕಂಡು ಕರ್ಣನಂ ನೆನೆದರ್ದದೆದು ದುರ್ಯೋಧನನ ಕೆಳೆಯನಪ್ಪ ನಿಮ್ಮಮ್ಮ ಕರ್ಣನಲ್ಲಿದನೆಂದು ತೆಕ್ಕನೆ ತೀವಿದ ಕಣ್ಣ ನೀರೊಳ ದೆಸೆಗಾಣದ ನಿಂದಿರ್ದ ಸುಯೋಧನನಂ ಸಂಜಯನಿಂತೆಂದಂ
ವ|| ಎಂದು ಗುರುವಿನ ಪಾದಕಮಲಗಳನ್ನು ತಲೆಯ ಮೇಲಿಟ್ಟು ನಮಸ್ಕಾರಮಾಡಿ ಹಾಗೆಯೇ ಮುಂದೆ ನಡೆದು ಬಂದು ಭೀಮಸೇನನಿಂದ ಸ್ವಲ್ಪವೂ ಉಳಿಯದಂತೆ ಕುಡಿಯಲ್ಪಟ್ಟ ರಕ್ತವನ್ನುಳ್ಳ ದುಶ್ಯಾಸನನನ್ನು ನೋಡಿ ಮುತ್ತಿ ಬಳಸಿಕೊಂಡಿದ್ದ ಮುದಿಹದ್ದುಗಳನ್ನು ಬಿಟ್ಟು ದೂರಹೋಗುವಂತೆ ಕಾಲಿನಿಂದ ಶಬ್ದಮಾಡಿ ಸೀಳಿ ಭೀಮನು ಮೊದಲೇ ಕುಡಿದುಬಿಟ್ಟಿದ್ದುದರಿಂದ ರಕ್ತವನ್ನು ಪಡೆಯದೆ ಆಕಾಶದ ಕಡೆ ಬಾಯಿಬಿಟ್ಟು ಕೂಗುತ್ತಿರುವ ಗುಳ್ಳೆನರಿಗಳನ್ನೂ ನರಗಳನ್ನೂ ಪಕ್ಕಗಳನ್ನೂ ಕಿತ್ತಳೆದು ಹಿಂದಕ್ಕೆ ಹೋಗುವ ನರಿಗಳನ್ನೂ ತಾನೇ ಅಟ್ಟಿ ತಮನ ದುಃಖದಿಂದ ಕಣ್ಣೀರನ್ನು ಸುರಿಸಿದನು. ೫೭. ನಿನ್ನನ್ನು ಕೊಂದವನ ಹೊಟ್ಟೆಯಿಂದ ನಿನ್ನನ್ನು ತೆಗೆಯದೆಯೂ ಅವನ ಕರುಳನ್ನು ಹದ್ದಿಗೆ ಮೊದಲು ನುಂಗಿಸಿ ನೋಡದೆಯೂ ಅದಕ್ಕೆ ಮುಂಚೆಯೇ ಯುವರಾಜನಾದ ದುಶ್ಯಾಸನನೇ ನಿನ್ನನ್ನು ನಾನು ನೋಡಿದೆನೇ? ವ|| ಸಂಜಯನು ಇಂತಹ ವಿಶೇಷವಾದ ಅಳುವಿಕೆಯು ಶೌರ್ಯಶಾಲಿಗಳಿಗೆ ಯೋಗ್ಯವಲ್ಲ, ಆ ಕಡೆ ಬರಬೇಕು ಎಂದು ಹೇಳಲು ಅಲ್ಲಿಂದ ಹೊರಟುಬಂದು ಅಮೋಘಾಸ್ತಧನಂಜಯ ನಾದ ಅರ್ಜುನನ ಕಯ್ಯಂದ ಬಿಡಲ್ಪಟ್ಟ ಬಾಣದಿಂದ ಸೀಳಲ್ಪಟ್ಟಿದ ಕರ್ಣನ ಮಗನಾದ ವೃಷಸೇನನನ್ನು ನೋಡಿ ಕರ್ಣನನ್ನು ಜ್ಞಾಪಿಸಿಕೊಂಡು ಎದೆಬಿರಿದು 'ದುರ್ಯೊಧನನ ಸ್ನೇಹಿತನಾದ ನಿಮ್ಮ ತಂದೆ ಕರ್ಣನಲ್ಲಿದ್ದಾನೆ ಎಂದು ಥಟಕ್ಕನೆ ತುಂಬಿದ ಕಣ್ಣೀರಿನಿಂದ ದಿಕ್ಕು ಕಾಣದೆ ನಿಂತಿದ್ದ ದುರ್ಯೋಧನನನ್ನು ಕುರಿತು ಸಂಜಯನು ಹೀಗೆಂದನು