________________
ತ್ರಯೋದಶಾಶ್ವಾಸಂ |೬೪೭ ವ|| ಅಂತು ಯುಧಿಷ್ಠಿರ ನಿಮಿತಾಹವವ್ಯಾಪಾರನಾಗಿ ಮಧುಕೈಟಭಾರಾತಿಯಂ ಬೀಡಿಂಗ ಪೋಗಬ್ದಗ್ನಿಹೋತ್ರಶಾಲೆಗೆ ವಂದು ದರ್ಭಶಯನತಳದೊಳೊಅಗಿ ಬೆಳಗಪ್ಪ ಜಾವದೊಳ್
ಚಂll ಕಡಲುರಿಯಂತಕಾಲ ಘನ ಗರ್ಜನೆಯಂತೆ ಸಮಸ್ತ ದಿಕ್ತಟಂ
ಪಿಡುಗುವಿನಂ ರಣಾನಕರವಂಗಳಸುಂಗೊಳೆ ಪರ್ವಿ ಬೇಗದಿಂ | ಸಡಗರದೇಆಯುಂ ಕಳಕಳಧನಿಯುಂಬೆರಸಾಡುವಂತರ ದೃಡೆಯೊಳಮಾರ್ಗ ದಲೆ ಪಲ್ಲಣಮಿಕಿಪುದಲ್ಲಕಲ್ಲೋಳಂ ||
೩೩
ವ|| ಆಗಳಂತಕತನಯನುಂ ಧೃತರಾಷ್ಟತನಯನುಮಾರೂಢಮದಗಜರುಮುಪಾರೂಢ ವಿಶೇಷಕರುಮಾಗಿ ತಂತಮ್ಮ ಶಿಬಿರಗಳಿಂ ಚತುರ್ಬಲಂಗಳ್ ಪೊಣಮಟ್ಟು ಸಂಗ್ರಾಮರಂಗಕ್ಕವತರಿಸಿ ಕುರುಬಲಮಂ ಮದ್ರರಾಜನಭಿನವವೂಹಮನೊಡುವುದುಂ ವಿಬುಧವನಜವನಕಳಹಂಸನುಂ ಹಂಸವೂಹಮನೊಡಿ ಮಾರ್ವಲಕ್ಕೆ ಯಮಪಾಶಮಂ ಬೀಸುವಂತ ಕೆಯಿಸಿದಾಗ
ಕull ಚಯ್ ಚಡ್ಮಿಂಬಾಗಳ್ ಮಯ್
ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳಿವುರ್ಕಿ೦ || ಕೆಯ್ ಚಚ್ಚರಿಕೆಯ ಚಲದಿಂ ಕೆಯ್ ಚಳಿವಿನಮಿಳಿದರೆರಡು ಬಲದೊಳಮದಟರ್ ||
೩೪
ಕಟ್ಟು ಎಂದು ಮುಕುಂದವೆಂಬ ಮಂಗಳವಾದ್ಯ ಸಮೂಹವು ಒಂದರಲ್ಲೊಂದು ಸಮನ್ವಯವಾಗಿ ಕೂಡಿಕೊಂಡು ವಿಶೇಷವಾಗಿ ಪ್ರಕಾಶಿಸಲು ಆ ದೊರೆಯು ವೀರಪಟ್ಟವನ್ನು ತಾಳಿದನು. ವ|| ಹಾಗೆ ಧರ್ಮರಾಯನು ನಿಶ್ಚಿತವಾದ ಯುದ್ಧ ವ್ಯಾಪಾರೋದ್ಯೋಗವುಳ್ಳವನಾಗಿ ಕೃಷ್ಣನನ್ನು ಬೀಡಿಗೆ ಹೋಗ ಹೇಳಿ ತಾನು ಅಗ್ನಿಹೋತ್ರಶಾಲೆಗೆ (ಯಾಗಶಾಲೆಗೆ) ಬಂದು ದರ್ಭೆಯಿಂದ ಮಾಡಲ್ಪಟ್ಟ ಹಾಸಿಗೆಯಲ್ಲಿ ಮಲಗಿ ಬೆಳಗಾಗುವ ಜಾವದಲ್ಲಿ ೩೩. ಬಡಬಾನಲದಂತೆ ಅಕಾಲದ ಗುಡುಗಿನಂತೆ ಸಮಸ್ತ ದಿಕ್ಕುಗಳ ದಡಗಳೂ ಸಿಡಿಯುವಂತೆ ಯುದ್ಧವಾದ್ಯಗಳು ಭೋರ್ಗರೆಯುತ್ತಿರಲು ವೇಗದ ಸಂಭ್ರಮಾತಿಶಯವೂ ಕಳಕಳಧನಿಯೂ ಬೆರಸಿ ಆಡುವಂತೆ ಎರಡು ಸೈನ್ಯಗಳಲ್ಲಿಯೂ ಒಟ್ಟಿಗೆ ಅಲ್ಲಕಲ್ಲೋಲವಾಗಲು ಕುದುರೆಗಳಿಗೆ ಜೀನನ್ನು ಹಾಕಿದರು. ವll ಆಗ ಧರ್ಮರಾಯನೂ ದುರ್ಯೊಧನನೂ ಮದ್ದಾನೆಗಳನ್ನು ಹತ್ತಿ ಪಾಳೆಯಗಳಿಂದ ಹೊರಟು ಚತುರಂಗಸೇನಾಸಮೇತರಾಗಿ ಯುದ್ಧರಂಗದಲ್ಲಿ ಬಂದಿಳಿದರು. ಶಲ್ಯನು ಕೌರವಸೈನ್ಯವನ್ನು ಹೊಸದಾದ ರಚನಾವಿಧಾನದಿಂದ ಮುಂದೊಡ್ಡಲು ವಿದ್ವಾಂಸರೆಂಬ ಕಮಲದ ತೋಟಕ್ಕೆ ರಾಜಹಂಸದಂತಿರುವ ಧರ್ಮರಾಯನೂ ಹಂಸವ್ಯೂಹವನ್ನು ಚಾಚಿ ಪ್ರತಿ ಸೈನ್ಯಕ್ಕೆ ಯಮಪಾಶವನ್ನು ಬೀಸುವಂತೆ ಕೈಬೀಸಿದನು. ೩೪. ಶರೀರ ಶರೀರಗಳ ಚಯ್ಚಯ್ ಎಂದು ಘರ್ಷಣೆಮಾಡುತ್ತ ಸ್ಪರ್ಧೆಯಿಂದ ಹತ್ತಿರಕ್ಕೆ ಬಂದು ರಣೋತ್ಸಾಹದ ಕೈಚಟುವಟಿಕೆಯ ರಭಸದಿಂದ ಜೊತೆಜೊತೆಯಾಗಿ ಹೆಣಗಾಡಿ ಕೈಸೋತುಹೋಗುವವರೆಗೂ ಉಭಯ