________________
೬೪೮) ಪಂಪಭಾರತಂ
ಕರಿ ಮಕರಾಹತಹತಿಯಿಂ ಬರಿದಳಜುವ ಭೈತ್ರದಂತೆ ವಿವಿಧಾಯುಧ ದಂ | ತುರಿತಂಗಳಚಿದುವಾ ಸಂ ಗರ ಜಳನಿಧಿಯೊಳ್ ವರೂಥಕರಿನಿಕರಂಗಳ 1 ಒಂದಕ್ಕೂಹಿಣಿಬಲಮರ ಡುಂ ದೆಸೆಯೊಳಮುಂದುವನಿತೆ ಭಾರತಮಮ || ಗಿನ್ನಿಂದುಜ್ರವಣೆ ದಲೆಂದದ ಟೊಂದುತ್ತರಮಾಗೆ ಕಾದಿದರ್ ಕಟ್ಟಾಳ್ || ಸುರಿತಶರನಿಕರಪಾತಿತ ನರೋತ್ತಮಾಂಗಂ ಕಬಂಧ ನಾಟಕರಂಗಂ | ಸುರಿತನವರುಧಿರರಂಗ
ತರಂಗವೊಪ್ಪಿದುದು ವೀರಭಟರಣರಂಗಂ || ವ|| ಅಂತು ಮುಂಬಗಲ್ಬರಂ ತುಮು ಕಾದುವ ಸಮರಭರಂ ಮನೋರಾಗಮಂ ಮಾಡೆಯುಂ ಮುಮ್ಮಟಿಸಿ ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನನಾಯಕರ್ಕಳಮIು ಸll ಕಡಿಕೆಯೊಂದೂರ್ವರೊಳ್ ತವ ಬಯಕೆಯಿಂ ದಿವ್ಯ ಬಾಣಾದಿಗಳಂ
ಪೊಡೆವಟ್ಟುಂ ಸೂತರಂ ಚೋದಿಸಿಮೆನುತುಮಗುರ್ವುರ್ವೆ ಕೆಯಿಕ್ಕು ಕಾದಲ್ | ನಡತರ್ಪಾವೇಗದೂಳ್ ಮುಮ್ಮಣಿಸಿದ ಪಲವುಂ ರಾಜಚಿಹ್ನಂಗಳಂ ಚ ಲೊಡೆಗಳ ತಳ್ಕೊಯ್ದದೇಂ ಕಸ್ತೂಳಿಸಿದುದೂ ಏನಕ್ಷತ್ರಕಚತ್ರಪಿಂಡಂ || ೩೮
೩೭
ಸೈನ್ಯದ ಶೂರರೂ ಪರಸ್ಪರ ಕತ್ತರಿಸಿದರು. ೩೫. ನೀರಾನೆ ಮತ್ತು ಮೊಸಳೆಗಳ ಹೊಡೆತದಿಂದ ಬಿರಿದು ನಾಶವಾಗುವ ಹಡಗಿನಂತೆ ನಾನಾ ಆಯುಧಗಳು ವಿಶೇಷವಾಗಿ ನಾಟಿಕೊಂಡಿರುವ ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು. ೩೬. ಉಭಯಪಕ್ಷದಲ್ಲಿಯೂ ಒಂದಕ್ಟೋಹಿಣಿ ಸೈನ್ಯವು ಉಳಿಯಿತು. ಭಾರತಯುದವು ಇದಿಷ್ಟೇ ಸಂಖ್ಯೆಯುಳ್ಳದು; ಈ ದಿನ ನಮಗೆ ಉದ್ಯಾಪನೆ (ಮುಗಿಯುವುದೇ)ಯಿಲ್ಲವೇ ಎಂದು ಹೇಳುತ್ತ ಅಪಾರ ಪರಾಕ್ರಮದಿಂದ ವೀರಪುರುಷರು ಕಾದಾಡಿದರು. ೩೭. ಹೊಳೆಯುತ್ತಿರುವ ಬಾಣಗಳ ಸಮೂಹಕ್ಕೆ ಸಿಕ್ಕಿಬೀಳುತ್ತಿರುವ ಮನುಷ್ಯರ ತೆಲಗಳನ್ನುಳ್ಳದೂ, ಮುಂಡಗಳು ಕುಣಿದಾಡುವ ರಂಗಸ್ಥಳವಾದುದೂ ಹೊಸ, ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ ಆದ ವೀರಭಟರ ರಣರಂಗವು ಪ್ರಕಾಶಮಾನವಾಯಿತು. ವ|| ಹಾಗೆ ಮುಂಬಗಲವರೆಗೆ (ಮದ್ಯಾಹ್ನದವರೆಗೆ) ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಪಾಂಡವಕೌರವಬಲಪ್ರವೀಣರಾದ ಮುಖ್ಯ ನಾಯಕರುಗಳು ಕಾದಿದರು. ೩೮. ಬಹುವೇಗದಿಂದ ಕೂಡಿ ಪರಸ್ಪರ ತಗುಲಿ ಯುದ್ಧಮಾಡುವ ಅಪೇಕ್ಷೆಯಿಂದ ದಿವ್ಯಾಸ್ತಗಳಿಗೆ ನಮಸ್ಕಾರಮಾಡಿ ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು ಶಕ್ತಿಮೀರಿ ಯುದ್ಧಮಾಡಲು