________________
೬೪೬ | ಪಂಪಭಾರತಂ ಕಂ|| ಮುಳ್ಳುಗಿಡ ತಾನೆ ತನ್ನಂ
ಕಟ್ಟಿಸಿಕೊಳ್ವಂತ ಬೀರವಟ್ಟಮನಾಗಳ್ | ಕಟ್ಟಿಸಿಕೊಂಡಂ ಶಲ್ಯಂ |
ಕಟ್ಟಿದುದಂ ಕಳೆಯಲಾರ್ಗಮೇ ತೀರ್ದಪುದೇ || ವ|| ಅನ್ನೆಗಮಿತ್ತ ತದ್ಧತ್ತಾಂತಮಂ ಸಂಚಳಿತ ಚಾರ ಚಕ್ಕುಗಳಿಂದಂ ಧರ್ಮಪುತ್ರನಳದು ನರಕಾಂತಕಂಗೆ ಬತಿಯನಟ್ಟಿ ಬರಿಸಿ ಪೇಡ ನಿಶಾಟ ರಾಜ ಕಿರೀಟ ಕೋಟಿ ತಾಟಿತ ಭುಜಂ ಚತುರ್ಭುಜನಿಂತೆಂದಂಮI ಅದಟುಂ ಕಾರ್ಮುಕವಿಯುಂ ಭುಜಬಳಾವಷ್ಟಂಭಮುಂ ಸಂದು ನಿಂ
ದುದು ಶಲ್ಯಂಗವನೊರ್ವನ ನಮಗಂ ಹೃಚ್ಚನಾತಂಗ ಕ || ಟ್ನದಿರೊಳ್ ನಿಲ್ಲೊಡ ನೀನೆ ನಿಲ್ವೆಯದಳಂ ನಿಶ್ಚಲಮಪ್ಪಂತು ನಿ ನೋದವಿಂ ಮಾಟ್ಟುದಗಾಧಸಾಗರಪರೀತಾಶೇಷ ಭೂಭಾಗಮಂ || ೩೧
ವ|| ಅದಲ್ಲದೆಯುಂ ಸಿದ್ದಿತ್ರಯಂಗಳ್ ನಿನಗಾಯಾಯತ್ತ ಸಿದ್ಧಿಯಾಗಿ ನಿಂದುದಂ ನೀನೆ ಬೀರವಟ್ಟಮಂ ತಾಳಿ ನಿಲ್ಲುದನ
ಆಂ ದಿಟವಾಗಿ ಶಲ್ಯನಳವಂ ನಟಿ ಮುನ್ನಡೆದಿರ್ದುಮನ್ನ ತ ಮ್ಮಂದಿರನೇಕೆ ಕಾದಿಸುವೆನಾನೆ ಮಹಾಜಿಯೊಳಾಂಪೆನಂತೆಗೆ | ಯ್ಯಂದು ಮುಕುಂದ ಕಟ್ಟಿನಗೆ ಪಟ್ಟಮನೆಂದು ಮುಕುಂದವೃಂದಮೋಂ ದೊಂದಳೊಂದಿ ಮಿಕ್ಕೆಸೆಯ ತಾಳಿದನಾ ವಿಭು ಬೀರವಟ್ಟಮಂ || ೩೨
ಧರಿಸಿದನು. ೩೦. ಇತರ ಸಲಕರಣಗಳೆಲ್ಲ ನಾಶವಾಗಿರಲು ತನಗೆ ತಾನೇ ಕಟ್ಟಿಸಿಕೊಳ್ಳುವ ಹಾಗೆ ಶಲ್ಯನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವಿಧಿಯ ನಿಯಮವನ್ನು ಕಳೆಯಲು ಯಾರಿಗಾದರೂ ಸಾಧ್ಯವಾಗುತ್ತದೆ ವ! ಅಷ್ಟರಲ್ಲಿ ಆ ಸಮಾಚಾರವನ್ನು ಸಂಚಾರಮಾಡುತ್ತಿರುವ ಗೂಢಚಾರರಿಂದ ಧರ್ಮರಾಯನು ತಿಳಿದು ಕೃಷ್ಣನಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು ಹೇಳಲು ರಾಕ್ಷಸರಾಜರ ಅನೇಕ ಕಿರೀಟಗ್ರಾದಿಂದ ಹೊಡೆಯಲ್ಪಟ್ಟ ತೋಳನ್ನುಳ್ಳ ಚತುರ್ಭುಜನಾದ ಕೃಷ್ಣನು ಹೀಗೆಂದನು. ೩೧, ಪರಾಕ್ರಮವೂ ಚಾಪವಿದ್ಯೆಯೂ ಬಾಹುಬಲದ ಅಹಂಕಾರವೂ ಶಲ್ಯನಲ್ಲಿ ಸೇರಿ ನಿಂತಿವೆ. ನಮಗೂ ಅವನೊಬ್ಬನೇ ಎದೆಗೆ ನಾಟಿದ ಈಟಿಯಂತಿರುವವಲ್ಲವೇ? ಅವನಿಗೆ ಸರಿಸಮನಾಗಿ ನಿಲ್ಲುವುದಾದರೆ ನೀನೊಬ್ಬನೇ ನಿಲ್ಲುವೆ. ಆದುದರಿಂದ ನೀನು ಆಳವಾದ ಸಾಗರಗಳಿಂದ ಸುತ್ತುವರಿಯಲ್ಪಟ್ಟ ಸಮಸ್ತಭೂಮಂಡಲವನ್ನೂ ನಿನ್ನ ಸಹಾಯದಿಂದ ಕಂಟಕವಿಲ್ಲದಂತೆ ಮಾಡುವುದು. ವ| ಅಷ್ಟೇ ಅಲ್ಲದೆ ಸಿದ್ದತ್ರಯಗಳಾದ ಪ್ರಭುಸಿದ್ದಿ ಮಂತ್ರಸಿದ್ದಿ ಮತ್ತು ಉತ್ಸಾಹ ಸಿದ್ದಿಗಳು ನಿನಗೆ ಅಧೀನವಾದ ಸಿದ್ದಿಯಾಗಿ ನಿಂತಿರುವುದರಿಂದ ನೀನೇ ಪಟ್ಟವನ್ನು ಧರಿಸಿ ನಿಲ್ಲುವುದು ಎನ್ನಲು ೩೨. ನಾನು ನಿಶ್ಚಯವಾಗಿಯೂ ಶಲ್ಯನ ಪರಾಕ್ರಮವನ್ನು ಸಂಪೂರ್ಣವಾಗಿ ಮೊದಲೇ ತಿಳಿದಿದ್ದ ನನ್ನ ತಮ್ಮಂದಿರನ್ನೇಕೆ ಕಾದಿಸಲಿ; ಮಹಾಯುದ್ಧದಲ್ಲಿ ನಾನೆ ಎದುರಿಸುತ್ತೇನೆ. ಕೃಷ್ಣನೇ ಹಾಗೆ ಮಾಡೆಂದು ನನಗೆ ಪಟ್ಟವನ್ನು