________________
೬೨೬ | ಪಂಪಭಾರತಂ
ಆಕರ್ಣಾಂತಂ ತಗೆನೆ ದಾ ಕರ್ಣನಿಸಿ ಬಗೆದೊಡುಡುಗುಡುಗಿಸಲೀ | ಭೀಕರ ಬಾಣಮನಾದವಿ ವೇಕದಿನುರದೆಡೆಗೆ ತುಡದೆ ತಲೆಗೆಯ ತುಡುವಾ || ೧೯೪ ಉರದೆಡೆಗೆ ತುಡೆ ಜಯಶ್ರೀ ಗಿರಲೆಡ ನಿನಗಪುದಾ ಸುಯೋಧನನೂ ಶ್ರೀ ಗಿರಲೆಡೆಯಪುದು ಮೇಣ್ ದಿನ
ಕರಸುತ ತೊದಳುಂಟೆ ಬಗೆಯ ಸಂದೆಯಮುಂಟೇ ॥ ೧೯೫ ವ|| ಎಂಬುದುಂ ಶಲ್ಯನ ನುಡಿದ ನುಡಿಯನವಧಾರಿಸಿ ತನ್ನ ಮನದೊಳೆ ಕರ್ಣನಿಂತೆಂದಂಮll ಎನಿತುಂ ಶಲ್ಯನ ಪೇಟ್ಟ ಪಾಂಗೆ ತೂದಳಿಲ್ಲಿಂತಾದೊಡಾ ಶಕ್ರಪು
ತ್ರನನಾಂ ಕೊಂದೊಡ ಧರ್ಮಪುತ್ರನಟಿಗುಂ ತಾಯಂದೆ ಮುಂ ಕೊಂತಿ ಬಂ | ದಿನಿಸಂ ಪ್ರಾರ್ಥಿಸಿ ಪೋದಳೆನ್ನನದನಾಂ ಮಾಣ್ಣರ್ದನಿರ್ದಾಗಳೂ ಛಿನ ಪರ್ಮಾತಿನ ನನ್ನಿ ಬನ್ನದೊಳೊಡಂಬಟ್ಟಿರ್ಪುದಂ ಮಾನೇ || ೧೯೬ ಚಂ ತನಗುಳುವಂತುಟಾಗೆ ಕಡು ನನ್ನಿಯ ಪಂಪುಮನಾಂತು ಭೂಭುಜರ್
ತನಗಿನಿತೂನಮಾಗ ಮದಾ ಭುಜವೀರ್ಯಮನಾಂತು ಮಾಣುದೇಂ | ತನಗುಜುವೊಂದು ನನ್ನಿಯನೆ ಪೂಣ್ಣು ಕರಂ ಪಿರಿದುಂ ಬಲಸ್ಯನ ಪ್ರನನೆ ಕುತ್ತು ಕಾದಿ ನೆಗಾತನೆ ನನ್ನಿಯ ಬೀರದಾಗರಂ || ೧೯೭
೧೯೪, ಕಿವಿಯವರೆಗೂ ಪೂರ್ಣವಾಗಿ ಸೆಳೆದು ಕರ್ಣನು ಹೊಡೆಯಲು ಮನಸ್ಸು ಮಾಡುತ್ತಿದ್ದ ಹಾಗೆಯೇ ಹಿಂದಕ್ಕೆ ತೆಗೆ, ಹಿಂದಕ್ಕೆ ತೆಗೆ; ಹೊಡೆಯಬೇಡ; ಈ ಭಯಂಕರವಾದ ಬಾಣವನ್ನು ವಿವೇಕದಿಂದ ಎದೆಯ ಪ್ರದೇಶಕ್ಕೆ ಗುರಿಯಿಡದೆ ತಲೆಗೆ ಗುರಿಯಿಡುತ್ತೀಯಾ? ೧೯೫. ಎದೆಯ ಪ್ರದೇಶಕ್ಕೆ ಗುರಿಯಿಟ್ಟು ತೊಟ್ಟರೆ ಜಯಲಕ್ಷ್ಮಿಯು ನಿನ್ನಲ್ಲಿರಲು ಅವಕಾಶವಾಗುತ್ತದೆ. ಆ ದುರ್ಯೋಧನನಲ್ಲಿ ಜಯಲಕ್ಷ್ಮಿಯಿರಲೂ ಅವಕಾಶವಾಗುತ್ತದೆ. ಕರ್ಣಾ ಈ ಮಾತು ಸುಳ್ಳಲ್ಲ ಸಂಶಯಪಡಬೇಡ ವಎನ್ನಲು, ಶಲ್ಯನು ನುಡಿದ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿಯೇ ಕರ್ಣನು ಹೀಗೆಂದುಕೊಂಡನು. ೧೯೬. ಹೇಗೂ ಶಲ್ಯನು ಹೇಳಿದ ಹಾಗೆಯೇ (ಸರಿ) ಸುಳ್ಳಿಲ್ಲ. ಆದರೆ ಆ ಇಂದ್ರಪುತ್ರನಾದ ಅರ್ಜುನನನ್ನು ನಾನು ಕೊಂದರೆ ಧರ್ಮರಾಜನು ಸಾಯುತ್ತಾನೆ. ನನ್ನ ತಾಯಿಯೆಂದೇ ಕುಂತಿ ಬಂದು ನನ್ನಲ್ಲಿ ಇದನ್ನೇ ಬೇಡಿಹೋದಳು. ಅದನ್ನು ನಾನು ತಪ್ಪಿ ನಡೆಯುವುದಾದರೆ ಆ ಒಳ್ಳೆಯ ಸತ್ಯವಾಕ್ಕಿನ ಭಂಗವಾದುದನ್ನು ನಾನು ಮಾಡುವೆನೇ ? (ಮಾಡಲೇ) ೧೯೭. ಸಾಮಾನ್ಯರಾಜರಾದವರು ತಮಗೆ ಸಾಧ್ಯವಾದಷ್ಟು ಸತ್ಯವನ್ನೂ ಪರಾಕ್ರಮವನ್ನೂ ತಾವು ಪ್ರದರ್ಶಿಸಬಹುದು. ಆದರೆ ಪೂರ್ಣವಾದ ಭುಜಶಕ್ತಿಯನ್ನು ಪಡೆದಿದ್ದೂ ಅದನ್ನು ತಪ್ಪುವುದೆಂದರೇನು? ತನಗೆ ಸಾಧ್ಯವಾದಷ್ಟು ಸತ್ಯಪ್ರತಿಜ್ಞೆಮಾಡಿ,