________________
ದ್ವಾದಶಾಶ್ವಾಸಂ | ೬೨೭ ಮ|| ಅಳಿಯ ಪಾಂಡವರನ್ನನಿನ್ನುಮಪಲ್ ನೀಮಂದದಂ ಚಕಿಗಾ
ನಳಪಿರ್ದಂ ಪೃಥೆಯುಂ ಮದೀಯ ಸುತರೊಳ್ ವೈಕರ್ತನಂ ನನ್ನಿಯಂ ನಿಜಸಲ್ಮಾರ್ಕುಮಮೋಘಮಂದು ಮನದೊಳ್ ನಂಬಿರ್ದಳಿಲ್ಲಿ ಪಂ ಪೆಕಂಬೆರೆ ಕಾವನನ್ನ ನುಡಿಯಂ ಕಲ್ಗೊಂಡ ಕಟ್ಟಾಯಮಂ || ೧೯೮
ಕoll ಎಂಬುದನೆ ಬಗೆದು ಪಣತನ
ಣಂ ಬಗೆಯದೆ ಮದ್ರಪತಿಯನೆಂದಂ ಮುಂ ತೊ । ಟ್ರಂಬನದನುಗಿದು ಕುಂದಿಸಿ ದಂ ಭಯದಿಂ ಕರ್ಣನೆಂದು ಲೋಕಂ ನಗದೇ ||
೧೯೯
ಕಂ|
ಉಡುಗುಡುಗುಡುಗಂದಿಸ ಬಜ ಸಿಡಿಲೆಜಪಂತಜಪ ಸರಲ ಬರವಂ ಕಂಡಾ | ಗಡ ಚಕ್ತಿ ನೆಲನೊಳಕ್ಟರ ಲಡಂಗ ನರರಥಮನೊತ್ತಿದಂ ನಿಪುಣತೆಯಿಂ ||
೨೦೦
ಒತ್ತುವುದುಂ ಶರಮಿರದ ಯುತ್ತ ಕಿರೀಟಿಯ ಕಿರೀಟಮಂ ಕೊಆದೊಡೆ ಪ | ರ್ವಿತ್ತು ಭಯಮಿಂದ್ರನಂ ಮು ತಿತ್ತಬಲೀಶ್ವರನನಾಗಳಾ ಸಂಕಟದೊಳ್ ||
೨೦೧
ವಿಶೇಷ ಶೌರ್ಯಶಾಲಿಯಾದವನನ್ನೆ ಗುರಿಯಿಟ್ಟು ಕಾದಿ ಪ್ರಸಿದ್ಧಿಪಡೆದವನೇ ಸತ್ಯ ಮತ್ತು ಪರಾಕ್ರಮದ ಆವಾಸಸ್ಥಾನನಾಗುವನು. ೧೯೮. ಪಾಂಡವರು ನನ್ನನ್ನು ಇನ್ನೂ (ಯಾರೆಂದು ತಿಳಿಯರು. ನೀವು ತಿಳಿಸಬೇಡಿ ಎಂದು ನಾನು ಕೃಷ್ಣನನ್ನು ಪ್ರಾರ್ಥಿಸಿದ್ದೆ. ಕುಂತಿಯೂ ನನ್ನ ಮಕ್ಕಳಲ್ಲಿ ಕರ್ಣನು ಸತ್ಯವನ್ನು ಸ್ಥಾಪಿಸುವುದಕ್ಕೆ ಪೂರ್ಣವಾಗಿ ಸಮರ್ಥನೆಂದು ಮನಸ್ಸಿನಲ್ಲಿ ನಂಬಿದ್ದಾಳೆ. ಇಂತಹ ವೈಭವವು ನನ್ನಲ್ಲಿ ಎರಕ ಹೊಯ್ದಿರಲು ನನ್ನ ಭಾಷೆಯನ್ನೂ ನಾನು ಅಂಗೀಕರಿಸಿರುವ ನನ್ನ ತೀವ್ರವಾದ ಶೌರ್ಯವನ್ನೂ ರಕ್ಷಿಸುತ್ತೇನೆ. ೧೯೯. ಎಂಬುದಾಗಿಯೇ ಯೋಚಿಸಿ ಬೇರೆ ಯಾವ ರೀತಿಯನ್ನೂ ಯಾವ ರೀತಿಯಲ್ಲಿಯೂ ಯೋಚಿಸದೆ ಶಲ್ಯನಿಗೆ ಹೇಳಿದನು. 'ಕರ್ಣನು ಮೊದಲು ಪ್ರಯೋಗಿಸಿದ ಬಾಣವನ್ನು ಭಯದಿಂದ ಹಿಂದಕ್ಕೆ ಸೆಳೆದು ಕುಗ್ಗಿಸಿದನು ಎಂದು ಮುಂದೆ ಲೋಕವು ನಗುವುದಿಲ್ಲವೇ? ೨೦೦. ಎನ್ನುತ್ತ ಕುಗ್ಗಿಸು,ಕುಗ್ಗಿಸು, ಕುಗ್ಗಿಸು ಎಂದು ಹೊಡೆಯಲು ಬರಸಿಡಿಲೆರಗುವಂತೆ ಎರಗುವ ಬಾಣದ ಬರುವಿಕೆಯನ್ನು ಕಂಡು ಆಗಲೆ ಕೃಷ್ಣನು ಅರ್ಜುನನ ತೇರನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ ಕೌಶಲದಿಂದ ಒತ್ತಿದನು. ೨೦೧. ಒತ್ತಟ್ಟಾಗಿ ಬಾಣವು ಸುಮ್ಮನಿರದೆ ಬರುತ್ತ ಅರ್ಜುನನ ಕಿರೀಟವನ್ನು ಕತ್ತರಿಸಲು ಆಗ ಇಂದ್ರನನ್ನು ಭಯವಾವರಿಸಿತು. ಆ ಸಂಕಟದಲ್ಲಿ ದುಃಖವು ಈಶ್ವರನನ್ನು ಆವರಿಸಿಕೊಂಡಿತು.