________________
೧೯೧
ದ್ವಾದಶಾಶ್ವಾಸಂ | ೬೨೫ ವ|| ಆಗಳ್ ಮದ್ರರಾಜನಂಗಾಧಿರಾಜನನಿಂತೆಂದನೀಯಂಬುಗಳೊಳೇಂ ತೀರ್ದಪುದು * ದಿವ್ಯಾರ್ಸ್ತಗಳಿಂದೆಚ್ಚು ಪಗೆಯಂ ಸಾಧ್ಯಂ ಮಾಡೆಂಬುದುಂ ಕೊಂತಿಗೆ ತನ್ನ ನುಡಿದ ನುಡಿವಳಿಯಂ ನೆನೆದು ಪರಿಗಣೆಯ ದೊಳಗೆ ಕೆಯ್ಯಂ ನೀಡದೆ ರೌದ್ರಶರದ ದೊಣಗೆ ಕೆಯ್ಯಂ ನೀಡಿದಾಗಳ್ಕಂ|| ಮುಳಿಸಂ ನೆಪರ್ಧಾ
ವಳೀಕ ಶರರೂಪದಿಂದಸುಂಗೊಳೆ ದೊಣೆಯಿಂ | ಪೊಳೆದು ಬರೆ ಕೆಯ್ಯ ತಾಂ ವಿ ಸುಳಿಂಗ ಪಿಂಗಳಿತ ಭುವನ ಭವನಾಭೋಗಂil ತಿರಿಪಿದೊಡದನಳೆ ತಿನೆ ತಿರಿದುದು ತಿರುವಾಯೊಳಿದೆ ಸುರರ್ ಮೊಯಿಟ್ಟರ್ | ಭರದೆ ತೆಗೆನೆಯ ಮಯ್ದೆಗೆ
ದರವಿಂದೋದವನಿನೊಗೆದುದಾ ಬ್ರಹ್ಮಾಂಡಂ || ಕಂth ತುಡೆ ಕರ್ಣನದಂ ನಡನಡ
ನಡುಗಿ ಸುಯೋಧನನ ಸಕಲ ರಾಜ್ಯಶ್ರೀಯುಂ | ಸಡಿಲಿಸಿದ ತೋಳನಾಗಳ್ ಸಡಿಲಿಸಲಣ' ದಲದಗುರ್ವಂ ಪಿರಿದೊ ||
೧೨
೧೩
ತಗುಲಿ ನುಗ್ಗಿ ಉಜ್ಜಲು ಅಲ್ಲಿ ಹುಟ್ಟಿದ ಬೆಂಕಿಯು ಎದ್ದು ಮೇಲಕ್ಕೆ ನೆಗೆದು ಬ್ರಹ್ಮಾಂಡದ ಕೊನೆಯವರೆಗೆ ಭಯವು ಹಬ್ಬುವ ಹಾಗೆ ವಿಶೇಷವಾಗಿ ವ್ಯಾಪಿಸಿ ಹೆಚ್ಚಾಗಿ ಸುಡಲು ಆ ದಳ್ಳುರಿಯನ್ನು ನೋಡಿ ಅರ್ಜುನನ ಅಸ್ತಕೌಶಲವು ಖಾಂಡವವನವನ್ನು ಸುಟ್ಟುದನ್ನು ಜ್ಞಾಪಕಮಾಡಿತು. ವ|| ಆಗ ಶಲ್ಯನು ಕರ್ಣನಿಗೆ ಹೀಗೆಂದನು - ಈ ಬಾಣಗಳಿಂದ ಏನು ತೀರುತ್ತದೆ? ದಿವ್ಯಾಸಗಳನ್ನು ಪ್ರಯೋಗಿಸಿ ಹಗೆಯನ್ನು ಅಧೀನಮಾಡು ಎನ್ನಲು ಕುಂತೀದೇವಿಗೆ ತಾನು ಕೊಟ್ಟ ವಾಗ್ದಾನವನ್ನು ನೆನೆದು ದಿವ್ಯಾಸ್ತಗಳ ಬತ್ತಳಿಕೆಗೆ ಕೈಯನ್ನು ಚಾಚದೆ ರೌದ್ರಬಾಣಗಳ ಬತ್ತಳಿಕೆಗೆ ಕೈಯನ್ನು ನೀಡಿದಾಗ ೧೯೧. ಹಿಂದಿನ ಕೋಪವನ್ನು ತೀರಿಸಿಕೊಳ್ಳುವುದಕ್ಕಾಗಿ ಕಿಡಿಗಳಿಂದಲೂ ಹಳದಿ ಕಪ್ಪು ಮತ್ತು ಕೆಂಪುಮಿಶ್ರವಾದ ಕಾಂತಿಯಿಂದಲೂ ಕೂಡಿದ ಪ್ರಪಂಚವೆಂಬ ಮನೆಯಷ್ಟು ವಿಸ್ತಾರವಾದ ಅರ್ಧಾವಲೀಕವೆಂಬ ಅರ್ಧ ಉಳಿದಿದ್ದ ಸರ್ಪವು ಬಾಣದ ಆಕಾರದಲ್ಲಿ ಬತ್ತಳಿಕೆಯಿಂದ ಹೊಳೆಯುತ್ತ ಪ್ರಾಣಾಪಹಾರಮಾಡಲು ಕೈಗೆ ಬಂದಿತು. ೧೯೨. ಅದನ್ನು ತಿರುಗಿಸಲು ಭೂಮಿಯು ತಿರೊಂದು ತಿರುಗಿತು. ಬಿಲ್ಲಿನ ಹೆದೆಗೇರಿಸಲು ದೇವತೆಗಳು ಗಟ್ಟಿಯಾಗಿ ಕೂಗಿಕೊಂಡರು. ವೇಗದಿಂದ ಹೆದೆಯನ್ನು ಕಿವಿಯವರೆಗೆ ಸೆಳೆಯಲು ಮೈಯಿಳಿದ (ಗರ್ಭಾಸ್ರಾವವಾದ) ಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿತು. ೧೯೩. ಅದನ್ನು ಕರ್ಣನು ಪ್ರಯೋಗಮಾಡಲು ದುರ್ಯೋಧನನ ಸಮಸ್ತ ರಾಜ್ಯಶ್ರೀಯು ಗಡಗಡನೆ ನಡುಗಿ ಸಡಿಲಿಸಿದ್ದ ತನ್ನ ತೋಳನ್ನು ಸಡಿಲಿಸಲು ಆಗ ಶಕ್ತಳಾಗಲಿಲ್ಲವಲ್ಲವೇ? ಅದರ ಭಯಂಕರತೆ ಅತ್ಯದ್ಭುತವಾಗಿತ್ತು.