________________
೬೨೪ | ಪಂಪಭಾರತಂ ಕಂ|| ಶರಸಂಧಾನಾಕರ್ಷಣ
ಹರಣಾದಿ ವಿಶೇಷ ವಿವಿಧ ಸಂಕಲ್ಪ ಕಳಾ | ಪರಿಣತಿಯಂ ಮಣಿದುದು ತರ ತರದೂಳೆ ಮುಳಿದರಿಗನಿಸುವ ಶರನಿಕರಂಗಳ್ ||
೧೪೬
ಮುನಿದಿಸುವಿನಜನ ಸರಲಂ ಮೊನೆಯಿಂ ಗಳವರೆಗಮಯ ಸೀಳುವು ಕಣಗಳ | ಘನ ಪಥವನಳುರ್ದು ಸುಟ್ಟಪು ವೆನೆ ನೆಗೆದುವು ಕೋಲ ಪೊಗೆಯುಮಂಬನ ಕಿಡಿಯುಂ 10 ೧೮೭ ಕೂಡ ಕಡಿವಂಬನಂಬೇಡ ಮಾಡದೆ ಬಿಡದೂರಸೆ ಪುಟ್ಟದುರಿಗಳಗುರ್ವಂ | ಮಾಡ ಕವಿದಳುರ್ವ ಬೆಂಕೆಯೊ ಳಾಡಿಸಿದರ್ ಮೊಗಮನಮರಸುಂದರಿಯರ್ಕಲ್ ||
೧೮೮ ಮೊನೆಯಂಬಿನ ತಂದಲೋಳ ರ್ಜುನನಂ ಕರ್ಣನುಮನಿನಿಸು ಕಾಣದಣಂ ಮ | ಲನೆ ಬಗಿದು ನೋಡಿ ಕುಡುಮಿಂ
ಚಿನಂತ ಮಗೂಗದು ನಾರದಂ ನರ್ತಿಸಿದಂ || ಚಂ|| ಕವಿವ ಶರಾಳಿಯಂ ನಿಜ ಶರಾಳಿಗಳಟ್ಟಿ ತೆರಳಿ ತೂಲ್ಲಿ ಮಾ
ರ್ಕವಿದು ಪಳಂಚಿ ಮಾಯೊರಸ ಪುಟದ ಕಿರ್ಚಳುರ್ದಬಿಜಾಂಡದಂ | ತುವರಮಗುರ್ವು ಪರ್ವಿ ಕರಮರ್ವಿಕ ದಳ್ಳುರಿ ಪರ್ಚಿ ಕಂಡು ಖಾಂ ಡವವನದಾಹಮಂ ನೆನೆಯಿಸಿತ್ತು ಗುಣಾರ್ಣವನಸ್ತಕೌಶಲಂ || ೧೯೦
ಆಕಾರವನ್ನು ಅಂಗೀಕರಿಸಿ ಕಾದಿದನು. ೧೮೬. ಅರಿಗನು ಕೋಪದಿಂದ ಹೊಡೆಯುವ ಬಾಣಸಮೂಹಗಳು ಶರಸಂಧಾನ (ಬಾಣವನ್ನು ತೊಡುವುದು) ಆಕರ್ಷಣ (ಎಳೆಯುವುದು) ಹರಣ (ಸೆಳೆದುಕೊಳ್ಳುವುದು)ವೇ ಮೊದಲಾದ ನಾನಾ ರೀತಿಯ ಕಲಾಪ್ರೌಢಿಮೆಯನ್ನು ಕ್ರಮಕ್ರಮವಾಗಿ ಮೆರೆದುವು. ೧೮೭. ಕೋಪಿಸಿಕೊಂಡು ಕರ್ಣನು ಪ್ರಯೋಗಿಸುವ ಬಾಣವನ್ನು ಅರ್ಜುನನ ಬಾಣಗಳು ತುದಿಯಿಂದ ಗರಿಯವರೆಗೆ ಸೀಳಿದುವು. ಆಕಾಶಮಾರ್ಗವನ್ನೂ ವ್ಯಾಪಿಸಿ ಸುಡುತ್ತವೆ ಎನ್ನುವ ಹಾಗೆ ಬಾಣಗಳ ಹೊಗೆಯೂ ಕಿಡಿಯೂ ಮೇಲಕ್ಕೆ ನೆಗೆದುವು. ೧೮೮. ಕೂಡಲೆ ಕತ್ತರಿಸುವ ಬಾಣಗಳನ್ನು ಬಾಣಗಳು ಅವಕಾಶಕೊಡದೆ ತಪ್ಪದೆ ಉಜ್ಜಲು ಹುಟ್ಟಿದ ಉರಿಯ ಜ್ವಾಲೆಗಳು ಭಯವನ್ನುಂಟುಮಾಡಲು ಆವರಿಸಿ ಸುಡುವ ಉರಿಯಲ್ಲಿ ದೇವಸುಂದರಿಯರು ತಮ್ಮ ಮುಖವನ್ನು ಅತ್ತ ಇತ್ತ ಅಲುಗಾಡಿಸಿದರು. ೧೮೯. ಮೊನಚಾದ ಬಾಣದ ತುಂತುರುಮಳೆಯಲ್ಲಿ ಅರ್ಜುನನೂ ಕರ್ಣನೂ ಸ್ವಲ್ಪವೂ ಕಾಣದಿರಲು ನಾರದನು ಸ್ವಲ್ಪವೂ ಸದ್ದಿಲ್ಲದೆ (ನಿಧಾನವಾಗಿ) ಭಾಗಮಾಡಿ ನೋಡಿ ಕುಡುಮಿಂಚಿನಂತೆ ಮೇಲಕ್ಕೆ ಹಾರಿ ಕುಣಿದಾಡಿದನು. ೧೯೦. ಕವಿಯುತ್ತಿರುವ ಬಾಣ ಸಮೂಹವನ್ನು ತನ್ನ ಬಾಣಸಮೂಹಗಳು ಆಕ್ರಮಿಸಿ ಓಡಿಸಿ ತಳ್ಳಿ ಪ್ರತಿಯಾಗಿ ಮುಚ್ಚಿ