________________
೧೭೧
.
೬೨೦ / ಪಂಪಭಾರತಂ ಚoll ಮಗನಬಿಂದು ಭೂಪತಿಯ ತಮ್ಮನೂಳಾದಬಿಂದು ನೊಂದು ಬಿ
ನಗೆ ಮೊಗದಿಂದ ಕುಂದಿ ಫಣಿಕೇತನನಿರ್ದಬಿಂದು ತನ್ನನಾ | ವಗೆಯುರಿಯಬ್ಬವೋಲಳುರೆ ತನ್ನ ನೆಗಳಿಗೆ ಮುಯ್ಯನಾಂತು ಮುಂ ಪೊಗಟೆಸಿ ಬಟ್ಟುದು ನೆನೆದು ಕರ್ಣನಸಂಗೊಳೆ ಬಂದು ತಾಗಿದಂ II೧೭೦ ವ|| ಅಂತು ಬಂದು ತಾಗಿದಾಗಳುಭಯಸೈನ್ಯಸಾಗರಂಗಳೊಳ್ಕಂ|| ಬಧಿರಿತ ಸಮಸ್ತದಿಕ್ತಟ
ಮಧರಿತ ಸರ್ವಭಗರ್ವಿತಂ ಕ್ಷುಭಿತಾಂಭೋ | ನಿಧಿ ಸಲಿಲಂ ಪರೆದುದು ಧುರ ವಿಧಾನ ಪಟು ಪಟಹ ಕಹಳ ಭೇರೀ ರಭಸಂ || ೧೭೧ ಆದಿತ್ಯನ ಸಾರಥಿ ಬೆಲ್ಲ ಗಾದಂ ಮಾತಾಳಿ ಮಾತುಗೆಟ್ಟಂ ಧುರದೊಳ್ || ಚೋದಿಸೆ ಹರಿಯುಂ ಶಲ್ಯನು ಮಾದರದಿಂ ನರನ ದಿನಪತನಯನ ರಥಮಂ ||
೧೭೨ ವll ಅಂತಿರ್ವರುಮೊರ್ವರೊರ್ವರಂ ಮುಟ್ಟೆವಂದಲ್ಲಿ ವಿಕ್ರಾಂತತುಂಗನಂಗಾಧಿರಾಜನ ನಿಂತೆಂದಂಹರಿಣೀಪುತಂ || ಪಿರಿದು ಪೊರೆದಂ ನಿನ್ನಂ ದುರ್ಯೋಧನಂ ನಿನಗನ್ನೊಳಂ
ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತವೇಂ ಬೆಸಂ |
ಪಿರಿದು ನಿನಗಂ ರಾಗಂ ಮಿಕ್ಕಿರ್ದಗುರ್ವಿನ ಸೂನು ನಿ * ರ್ನರಮಣಿಯೆಯುಂ ನೋಡುತ್ತಿಂತಿರ್ದಯಿರ್ಪುದು ಪಾತಿಯೇ || ೧೭೩ ತುರುಕಬೇಕೆಂದಿದ್ದ ವಿಕ್ರಮಾರ್ಜುನನನ್ನು ನೋಡಿ ೧೭೦. ಮಗನ ದುಃಖವೊಂದು, ರಾಜನ ತಮ್ಮನಾದ ದುಶ್ಯಾಸನನ ದುಃಖವೊಂದು, ಚಿಂತಾಸಕ್ತನಾಗಿ ದೀನಮುಖದಿಂದ ಕುಂದಿಹೋಗಿರುವ ದುರ್ಯೊಧನನಿರುವ ಸ್ಥಿತಿಯೊಂದು ಈ ಮೂರೂ ತನ್ನನ್ನು ಕುಂಬಾರರ ಆವಗೆಯ ಬೆಂಕಿಯ ಹಾಗೆ ಸುಡುತ್ತಿರಲು ಪೌರುಷಕ್ಕೆ ಆಶ್ರಯವಿತ್ತು ಮೊದಲು ಹೊಗಳಿಸಿಕೊಂಡು ತಾನು ಬಾಳಿದುದನ್ನು ಜ್ಞಾಪಿಸಿಕೊಂಡ ಕರ್ಣನು ಅರ್ಜುನನ ಪ್ರಾಣವನ್ನು ಸೆಳೆಯುವಂತೆ ಬಂದು ತಾಗಿದನು. ವ|| ಹಾಗೆ ಬಂದು ತಾಗಿದಾಗ ಎರಡು ಸೇನಾಸಮುದ್ರದಲ್ಲಿಯೂ ೧೭೧. ಎಲ್ಲ ದಿಕ್ಷದೇಶಗಳೂ ಕಿವುಡಾಗುವಂತೆ ಆನೆಗಳ ಫೀಂಕಾರವನ್ನೂ ತಿರಸ್ಕರಿಸುವಂತೆ, ಕಲಕಿದ ಸಮುದ್ರದ ನೀರಿನಂತೆ, ಯುದ್ಧಕಾರ್ಯದಲ್ಲಿ ಸಮರ್ಥವಾದ ತಮಟೆ, ಕೊಂಬು ಮತ್ತು ನಗಾರಿಯ ಶಬ್ದಗಳ ರಭಸವು ಹರಡಿತು. ೧೭೨. ಯುದ್ಧದಲ್ಲಿ ಕೃಷ್ಣನೂ ಶಲ್ಯನೂ ಅರ್ಜುನ ಮತ್ತು ಕರ್ಣನ ತೇರುಗಳನ್ನು ಆದರದಿಂದ ನಡೆಸುತ್ತಿರಲು ಸೂರ್ಯನ ಸಾರಥಿಯಾದ ಅರುಣನು ಆಶ್ಚರ್ಯಚಕಿತನಾದನು. ಇಂದ್ರನ ಸಾರಥಿ ಮಾತಲಿಯೂ ಮೂಕನಾದನು. ವ|| ಹಾಗೆ ಇಬ್ಬರೂ ಒಬ್ಬೊಬ್ಬರನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ ವಿಕ್ರಾಂತತುಂಗನಾದ ಅರ್ಜುನನು ಕರ್ಣನಿಗೆ ಹೀಗೆ ಹೇಳಿದನು. ೧೭೩. ನಿನ್ನನ್ನು ದುರ್ಯೋಧನನು ವಿಶೇಷಗೌರವದಿಂದ ಸಾಕಿದನು. ನಿನಗೆ ನನ್ನಲ್ಲಿಯೂ ವಿಶೇಷವಾದ