________________
ದ್ವಾದಶಾಶ್ವಾಸಂ | ೬೧೯ ಎನೆ ಪರಶುರಾಮನಿಂ ಕ ರ್ಣನೆ ಬಲ್ಲಂ ಚಾಪವಿದೆಯಂ ಕರ್ಣನಿನೀ | ತನೆ ಬಲನಿವನ ಸರಿನಿ
ತನಿತುಮನೆಡೆವಿಡದ ತಳೆದು ತಲೆಯಂ ತಳೆಯಾ . ೧೬೭ ವ|| ಎಂಬುದುಮಳವಿಗತಿಯ ಬಳೆದು ಪುದುಂಗೊಳಿಸಿದ ಬಿದಿರ ಸಿಡುಂಬನೆಡೆಗೂಳೆ ಕಡಿವ ಪೊಡುಂಗಾಜನಂತ ಪರಶು ಚಕ್ರಾಸಿಧೇನುಗಳಿಂದ ತನ್ನ ತೋಡು ಬೀಡಿಂಗಂ ರಥಮನಸಗುವ ಮುರಾಂತಕನ ಕೆಯ್ದಮೆಡೆಮಾಡಿಚಂತನಗೆ ವಿನಾಯಕಂ ದಯೆಯಿನಿತ್ತ ಜಯಾಸ್ತಮನುರ್ಚಿಕೊಂಡು ಭೋಂ
ಕೆನೆ ದೊಣೆಯಿಂ ಶರಾಸನದೊಳಂತದನಾಗಡೆ ಪೂಡಿ ಧಾತ್ರಿ ತಿ | ಆನೆ ತಿರಿವನ್ನೆಗಂ ತೆಗೆದು ಕಂಧರಸಂಧಿಯನೆಮ್ಮೆ ನೋಡಿ ತೊ
ಟ್ಟನೆ ನರನೆಚೂಡುಚ್ಚಳಿಸಿ ಬಿಟ್ಟುದು ವೈರಿಶಿರಸ್ಸರೋರುಹಂ || ೧೬೮ ಕಂt ಅಂತ ಪರಿದ ತಲೆಯನ
ದಂ ತಂದಟ್ಟೆಯೊಳಮರ್ಚಿ ಸುರ ಗಣಿಕೆಯರ | ಭ್ರಾಂತರದೊಳೆ ತಮ್ಮ ವಿಮಾ
ನಾಂತರದೊಳಗಿಟ್ಟು ಕರ್ಣತನಯನನುಯ್ದರ್ || , ೧೬೯ ವ|| ಅಂತು ನೋಡಿ ನೋಡಿ ತನ್ನ ಹಿರಿಯ ಮಗನಪ್ಪ ವೃಷಸೇನನನಂತಕನಣಲೊಳಡಸಿ ತನ್ನುಮನಣಲೊಳಡಸಲೆಂದಿರ್ದ ವಿಕ್ರಮಾರ್ಜುನನಂ ನೋಡಿ
ಬೆರಗಾಗಿದ್ದೇನೆ. ಮುಂದೇನು ಮಾಡಬೇಕೆಂಬುದನ್ನು ತಿಳಿಸು ಕೃಷ್ಣಾ, ೧೬೭. ಎನ್ನಲು ಬಿಲ್ವಿದ್ಯೆಯಲ್ಲಿ ಕರ್ಣನು ಪರಶುರಾಮನಿಗಿಂತ ಸಮರ್ಥನಾದವನು. ಇವನು ಕರ್ಣನಿಗಿಂತ ಸಮರ್ಥನು. ಇವನ ಬಾಣಗಳಷ್ಟನ್ನೂ ಒಂದೇಸಮನಾಗಿ ಕತ್ತರಿಸಿ ತಲೆಯನ್ನು ಕತ್ತರಿಸಯ್ಯ. ವ|| ಎನ್ನಲು ಅಳತೆಮೀರಿ ಸೊಂಪಾಗಿಯೂ ದಟ್ಟವಾಗಿಯೂ ಬೆಳೆದಿರುವ ಬಿದುರಿನ ಮಳೆಯನ್ನು ದಾರಿಮಾಡುವುದಕ್ಕಾಗಿ (ಬಿಡಿಸುವ) ಕತ್ತರಿಸುವ ಕಾಡನ್ನು ತರಿಯುವವನ ಹಾಗೆ ಕೊಡಲಿಕತ್ತಿಗಳಿಂದ ತನ್ನ ಬಾಣಸಂಧಾನ ಮತ್ತು ಮೋಚನಗಳಿಗೆ ಹೊಂದಿಕೊಳ್ಳುವುದಕ್ಕೂ ರಥವನ್ನು ನಡೆಸುವ ಕೃಷ್ಣನ ಕೈಗಳನ್ನಾಡಿಸುವುದಕ್ಕೂ ಅನುಮಾಡಿಕೊಂಡು ೧೬೮, ವಿನಾಯಕನು ತನಗೆ ಕೃಪೆಯಿಂದ ಕೊಟ್ಟ ಜಯಾಸ್ತ್ರವನ್ನು ರಭಸದಿಂದ ಬತ್ತಳಿಕೆಯಿಂದ ಸೆಳೆದುಕೊಂಡು ಅದನ್ನು ಆಗಲೇ ಬಿಲ್ಲಿನಲ್ಲಿ ಹೂಡಿ ಭೂಮಿಯು ತಿರೊಂದು ತಿರುಗುವ ಹಾಗೆ ಹೆದೆಯನ್ನು ಸೆಳೆದು ಕತ್ತಿನ ಸಂಧಿಭಾಗವನ್ನೇ ಚೆನ್ನಾಗಿ ನೋಡಿ ಗುರಿಯಿಟ್ಟು ಬೇಗನೆ ಅರ್ಜುನನು ಹೊಡೆಯಲಾಗಿ ವೈರಿಯಾದ ವೃಷಸೇನನ ತಲೆಯೆಂಬ ಕಮಲವು ಮೇಲಕ್ಕೆ ಹಾರಿ ಬಿದ್ದಿತು. ೧೬೯. ಆ ಕಡೆ ಹಾರಿದ ತಲೆಯನ್ನು ತಂದು ಶರೀರದೊಡನೆ ಕೂಡಿಸಿ ಅಪ್ಸರೆಯರು ಮೋಡಗಳ ಮಧ್ಯದಲ್ಲಿ ತಮ್ಮ ವಿಮಾನದೊಳಗಡೆ ಇಟ್ಟು ಕರ್ಣನ ಮಗನನ್ನು ತೆಗೆದುಕೊಂಡು ಹೋದರು. ವ|| ಹಾಗೆ ನೋಡಿ ನೋಡಿ ತನ್ನ ಹಿರಿಯಮಗನಾದ ವೃಷಸೇನನನ್ನು ಯಮನ ಗಂಟಲಿನಲ್ಲಿ ತುರುಕಿ ತನ್ನನ್ನು ಗಂಟಲಿನಲ್ಲಿ