________________
ದ್ವಾದಶಾಶ್ವಾಸಂ / ೬೨೧ ಕಂtt ಎನ್ನ ಪಸರ್ಗಳು ಸೈರಿಸ
ದನ್ನಯದಿಂತೀಗಳೆನ್ನ ರೂಪಂ ಕಂಡುಂ | ನಿನ್ನರಸನಣುಗದಮ್ಮನ ತನೊಬವನ ನಾವಗಂಡುಂ ಮಾಡ್ತಾ ||
೧೭೪ ಮಭಯಮೇಕಕುಮದಂತುಟೆಂದದಟುಮಂ ಪರ್ಮಾತುಮಂ ಭೂತ ಧಾ| ತ್ರಿಯೊಳೋರಂತೆ ನೆಗಟ್ಟಿ ಮುನ್ನೆ ಬಲಿಯಂ ಕಾನೀನ ನೀನೀ ಮಹಾ ! ಜಿಯೊಳಿಂತೇನನಗಂಜಿ ಮಾಡ್ಡ ಪೆಜತೇಂ ಪೋ ಮಾತು ಲೇಸಣ್ಣ ಸ ಟ್ವಿಯ ಬಳ್ಳಂ ಕಿದಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೆ || ೧೭೫ ಕಂ! ಪಸರಸೆಯ ಬೀರಮಂ ಪಾ
ಡಿಸಿಯುಂ ಪೊಗಟಿಸಿಯುಮುರ್ಕಿ ಬಾಹವದೊಳ್ | ಕುಸಿದು ಪಂಪಿಂಗಿ ಪೇಟ್ ಮಾ ನಸರೇನಿನ್ನೂರು ವರ್ಷಮಂ ಬಲ್ಡಪರೇ ||
೧೭೬ ವ|| ಎಂದು ನೃಪ ಪರಮಾತ್ಮನ ಪಾಳೆಯ ಪಸುಗೆಯ ನುಡಿಗೆ ಪರಮಾರ್ತನಾಗಿ ತನ್ನನುದ್ಘಾಟಿಸಿ ನುಡಿದೂಡುಮ್ಮಚದೊಳ್ ಮೆಚ್ಚದೆ ದರಹಸಿತವದನಾರವಿಂದನಾಗಿ ದಶಶತಕರ ತನೂಜನಿಂತೆಂದಂ
ದ್ವೇಷ, ಕರ್ಣನಿಗಾಗಿಯೇ ಭಾರತಯುದ್ಧವು ಪ್ರಾಪ್ತವಾದುದು. ಯುದ್ಧಕಾರ್ಯವು ನಿನಗೇನು ಮಹತಾದುದು ? ನಿನಗೆ ವಿಶೇಷಪ್ರೀತಿಪಾತ್ರನೂ ಪ್ರಚಂಡನೂ ಆದ ಮಗನು ನಿಷ್ಕಾರಣವಾಗಿ ಸತ್ತರೂ ನೋಡುತ್ತ ಹೀಗೆ ಇದ್ದೀಯೇ ? ಇರುವುದು ಕ್ರಮವೇ - ೧೭೪. ನನ್ನ ಹೆಸರನ್ನೂ ಕೇಳಿ ಅನ್ಯಾಯವಾಗಿ ಸೈರಿಸದ ನೀನು ಈಗ ನನ್ನ ರೂಪನ್ನು ಕಂಡೂ ನಿನ್ನ ರಾಜರ ಪ್ರೀತಿಯ ತಮ್ಮನ, ನಿನ್ನ ಮಗನ ಸಾವನ್ನು ನೋಡಿಯೂ ತಡಮಾಡುತ್ತೀಯಾ? ೧೭೫. ಭಯವೇಕಾಗುತ್ತದೆ, ಅದು ಎಂತಹುದು ಎಂದು `ಪರಾಕ್ರಮವನ್ನೂ ದೊಡ್ಡ ಮಾತುಗಳನ್ನೂ ಮೊದಲು ಲೋಕದಲ್ಲೆಲ್ಲ ಆಡಿ ಜಂಭ ಕೊಚ್ಚಿದ ಕಾನೀನ, ಈಗ ಈ ಮಹದ್ಯುದ್ದದಲ್ಲಿ ಹೀಗೆ ನನಗೆ ಹೆದರಿ ತಡಮಾಡುತ್ತಿದ್ದೀಯೆ. ಮತ್ತೇನು ಹೋಗಯ್ಯ ಮಾತನಾಡುವುದು ಸುಲಭ! 'ಸೆಟ್ಟಿಯ ಬಳ್ಳ ಕಿರಿದು' ಎಂಬ ಗಾದೆಯ ಮಾತನ್ನು ನೀನು ನಿಜವೆನಿಸಿಬಿಟ್ಟೆ. ೧೭೬. ಹೆಸರು ಪ್ರಖ್ಯಾತವಾಗುವಂತೆ ಶೌರ್ಯವನ್ನು ಹಾಡಿಸಿಯೂ ಹೊಗಳಿಸಿಯೂ ಉಬ್ಬಿ ಯುದ್ಧದಲ್ಲಿ ಸೋತು ಕುಸಿದು ಹಿಂಜರಿಯುವುದಕ್ಕೆ ಮನುಷ್ಯರು ಇನ್ನೂರು ವರ್ಷ ಬದುಕುತ್ತಾರೇನು ? ವll ಎಂಬುದಾಗಿ ಹೇಳಿದ ನೃಪಪರಮಾತ್ಮನಾದ ಅರ್ಜುನನ ಕ್ರಮಬದ್ಧವೂ ವಿವೇಕಯುತವೂ ಆದ ಮಾತಿಗೆ ಬಹಳ ದುಃಖಪಟ್ಟು ತನ್ನನ್ನು ಮರ್ಮಭೇದಕವಾದ ರೀತಿಯಲ್ಲಿ ಮಾತನಾಡಿಸಿದರೂ ಕೋಪಿಸಿಕೊಳ್ಳದೆ ಮುಗುಳಗೆಯಿಂದ ಕೂಡಿದ ಮುಖಕಮಲವುಳ್ಳವನಾಗಿ ಕರ್ಣನು ಹೀಗೆಂದನು