________________
* ದ್ವಾದಶಾಶ್ವಾಸಂ | ೫೯೩ ತ್ರಿಣೇತ್ರನೊಳ್ ಕಲಶೃಹೃದಯದೊಳಂ ರಥಕಲ್ಪದೊಳಂ ಶಲ್ಯಂ ಮುರಾಂತಕಂಗಂ ಪ್ರವೀಣನಪ್ಪುದದೆಂದಾತನನೆಂತಾನುಮೊಡಂಬಡೆ ನುಡಿದು ನಿನಗೆ ಸಾರಥಿ ಮಾಡುವೆನೆಂದು ದಿನಕರತನೂಜನಂ ಬೀಡಿಂಗೆ ಪೋಗಲ್ವಟ್ಟು ಪೊನ್ನ ಹಣ್ಣುಗೆಯ ಪಿಡಿಯನೇಟಿ ದಿನಕರನ ಬಣಿದಪ್ಪಿದ ಕಿರಣಂಗಳ್ ಕುಲೆಯಂ ಕಂಡಳ್ಳಿ ತನ್ನ ಮತಯಂ ಪೊಕ್ಕಂತೆ ಕೆಯೀವಿಗೆಗಳ ಬೆಳಗೆ ಕಿಚಿದಾನುಂ ಮಾನಸರ್ವೆರಸು ರಾಜರಾಜಂ ಮದ್ರರಾಜನ ಮನೆಗೆ ಬರ್ಪುದುಮಾತನತ್ಯಂತ ಸಂಭ್ರಮಾಕ್ರಾಂತಹೃದಯನಾಗಿ ಬೇಗಮಿದಿರೇಟಿಮಲ್ಲಿಕಾಮಾಲೆ | ಅಂತೆ ಕುಳ್ಳಿರಿರಪೊಡಿಂ ನಿಮಗಾಣೆಯಂದಿರವೇನ್ಗಳಾ
ಕಾಂತನುಂ ತೊಡೆಗೊಂಕಿ ಕುಳ್ಳಿರೆ ಬಾಚಿಯುಳೋದೆ ನೀನೆ ಬ ರ್ಪಂತುಳಾದುದೆ ಪೇಟ ನೀಂ ಬಚಿಯಟ್ಟಲಾಗದೆ ಕೆಮ್ಮನಿ
ನ್ನೆಂತುಮೇಂ ಮನೆವಾಚಿಯಂ ಬೆಸಸಿ ಬಂದೆಯಿಳಾಧಿಪಾ || ಕಂll ಬೆಸಸೆನೆಯುಂ ನುಡಿಯಲ್ ಶಂ
ಕಿಸಿದವೆ ನಾನೆಂದೊಡೇಕೆ ಶಂಕಿಸುವೆ ನೀಂ | ಬೆಸವೇನೆ ಜಯವಧು ಕೂ
ರ್ತೊಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ || ೯೦ ಕ೦ll , ಪುಸಿಯನೆ ರಥಮಂ ಹರಿ ಚೋ
ದಿಸುವಂತವೊಲಿರ್ದದಂತು ನರನಂ ಗೆಲಿಪಂ | ವಿಸಸನದೊಳಂತೆ ನೀಮುಂ |
ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ || ಅಶ್ವಹೃದಯದಲ್ಲಿಯೂ ರಥಕಲ್ಪದಲ್ಲಿಯೂ ಶಲ್ಯನು ಶ್ರೀಕೃಷ್ಣನಿಗಿಂತಲೂ ಹೆಚ್ಚು ತಿಳಿದವನಾದುದರಿಂದ ಅವನನ್ನು ಹೇಗಾದರೂ ಮಾಡಿ ಒಪ್ಪುವ ಹಾಗೆ ಮಾಡಿ ನಿನಗೆ ಸಾರಥಿಯನ್ನಾಗಿ ಮಾಡುತ್ತೇನೆ ಎಂದು ಕರ್ಣನನ್ನು ಬೀಡಿಗೆ ಹೋಗಹೇಳಿದನು. ಚಿನ್ನದಿಂದ ಅಲಂಕಾರಮಾಡಿದ ಹೆಣ್ಣಾನೆಯನ್ನು ಹತ್ತಿಕೊಂಡು ಸೂರ್ಯನ ದಾರಿಯನ್ನು ತಪ್ಪಿದ ಕಿರಣಗಳು ಕತ್ತಲೆಯನ್ನು ಕಂಡು ಹೆದರಿ ತನ್ನ ಆಶ್ರಯವನ್ನು ಪ್ರವೇಶಿಸಿದ ಹಾಗೆ ಕೈದೀವಟಿಗೆಗಳು ಪ್ರಕಾಶಿಸಲು ಕೆಲವೇ ಪರಿಜನರೊಡನೆ ದುರ್ಯೋಧನನು ಮದ್ರರಾಜನಾದ ಶಲ್ಯನ ಮನೆಗೆ ಬಂದನು. ಅವನು ಅತ್ಯಂತ ಸಂಭ್ರಮದಿಂದ ಕೂಡಿದ ಮನಸ್ಸುಳ್ಳವನಾಗಿ ವೇಗದಿಂದ ಇದಿರಾಗಿ ಎದ್ದು ಬಂದನು- ೮೯. ಹಾಗೆಯೇ ಕುಳಿತುಕೊಳ್ಳಿ; ಇರದಿದ್ದರೆ ನಿಮ್ಮಮೇಲಾಣೆಯೆಂದು ಕುಳಿತುಕೊಂಡೇ ಇರಬೇಕೆಂದು ಹೇಳಿ ರಾಜನ ತೊಡೆಸೋಂಕಿನಷ್ಟು ಹತ್ತಿರ ಕುಳಿತುಕೊಂಡನು. “ಕಾರ್ಯವಿದ್ದರೆ ನೀನೇ ಬರುವ ಹಾಗಾಯಿತೇ ಹೇಳು, ನೀನು ದೂತರ ಮೂಲಕ ಹೇಳಿ ಕಳುಹಿಸ ಬಾರದಾಗಿತ್ತೇ? ಸುಮ್ಮನೆ ಇನ್ನು ನೀನೇ ಬಂದಮೇಲೆ ಹೇಗೆ? ರಾಜನೇ ಯಾವ ಗೃಹಕೃತ್ಯದ ಮಾತನ್ನು ತಿಳಿಸುವುದಕ್ಕೆ, ಆಜ್ಞೆ ಮಾಡುವುದಕ್ಕೆ ಬಂದಿರುವೆ”, ೯೦. ಹೇಳು, ಎಂದರೂ 'ನುಡಿಯುವುದಕ್ಕೆ ನಾನು ಸಂದೇಹಪಡುತ್ತೇನೆ' ಎನ್ನಲು ಏಕೆ ಶಂಕಿಸುತ್ತೀಯೆ. ಆಜ್ಞೆ ಮಾಡು' ಎನ್ನಲು, 'ಮಾವ, ಜಯಲಕ್ಷ್ಮಿಯು ನಿಮ್ಮದಯೆಯಿಂದ ನಮ್ಮನ್ನು ಪ್ರೀತಿಸಿ ಅನುರಾಗದಿಂದಿರುತ್ತಾಳೆ' ೯೧. ಕೃಷ್ಣನು ಅರ್ಜುನನ ತೇರನ್ನು