________________
೫೯೪ | ಪಂಪಭಾರತಂ
ವೋಗಿ
ವ|| ಎಂಬುದುಂ ಮದ್ರರಾಜನುಮಚ್ಚರದೊಳುಮ್ಮನೆ ಬೆಮರ್ತು ಕಿನಿಸಿ ಕಿಂತಿದೆ
ಚoll
ಕಲಿಯನೆ ಪಂದೆ ಮಾಲ್ಪ ಕಡುವಂದೆಯನೊಳಲಿ ಮಾಳಿ ತಕ್ಕನಂ ಪೊಲೆಯನೆ ಮಾಲ್ಪ ಮುಂ ಪೊಲೆಯನಂ ನೆ ತಕ್ಕನೆ ಮಾಲ್ಪ ತಮ್ಮೊಳ | ಗ್ಗಲಿಸಿ ಪೊದಟ್ಟ ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂ ಚಲಮದಚೆಂದಮೋಲಗಿಸಿ ಬಾಳ್ವುದೆ ಕಷ್ಟಮಿಳಾಧಿನಾಥರಂ ||
೯೨
ಅನುಪಮ ವಿಕ್ರಮಕ್ರಮಮುದಾರಗುಣಂ ಋತವಾಕ್ಯವೆಂಬ ಪೆಂ ಪೆನಲಿವು ಮೂಜಿ ನಾಲೆ ಗುಣಮತ್ತ ಮದಾನ್ವಿತರಾಜಬೀಜಸಂ | ಜನಿತಗುಣಂ ಮದಂ ಮದಮನಾಳವಿವೇಕತೆಯಿಂದಮಲೆ ತೊ ಅನ ಮೊಲೆವಾಲನುಂಡ ಗುಣಮಿಂತಿವನಾರ್ ಕಿಡಿಪರ್ ನರೇಂದ್ರರೊಳ್ || ೯ ೩
ell ಪಿಂದೆ ಕಡಂಗಿ ತೇರನೆಸಗೆಂಬವನಂಬಿಗನಾಜಿ ರಂಗದೊಳ್
ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಲುಕಾಳನಾಗ ಮ | ತಂದನಚೋದನಕ್ರಮಮದುಂ ಪೊಲೆಯಂಗಮರ್ದಿಕರ್ುಮಂತುಟಂ ನೀಂ ದಯೆಗೆಯ್ದು ಪೇಟೆಯಿದನಾರ್ ಪಡೆವರ್ ಫಣಿರಾಜಕೇತನಾ | ೯೪
ನಡೆಸುವವನಂತೆ ನಟಿಸಿಕೊಂಡಿದ್ದು ಅರ್ಜುನನು ಗೆಲ್ಲುವಂತೆ ಹೇಗೆ ಮಾಡುವನೋ ಹಾಗೆಯೆ ಯುದ್ಧರಂಗದಲ್ಲಿ ನೀವೂ ಕೂಡ ಕರ್ಣನಿಗೆ ಹೆಸರನ್ನುಂಟುಮಾಡಿ ಗೆಲುವನ್ನು ಸಂಪಾದಿಸಿ ಕೊಡಬೇಕು' ವ| ಎನ್ನಲು ಶಲ್ಯನು ಕೋಪದಿಂದ ಬಿಸಿಬಿಸಿಯಾಗಿ ಬೆವರಿ ಕೆರಳಿ ಕಿಡಿ ಕಿಡಿಯಾದನು. ೯೨. ಶೂರನನ್ನು ಹೇಡಿಯಾಗಿ ಮಾಡುವ, ಪೂರ್ಣಹೇಡಿಯನ್ನು ಉತ್ತಮಶ್ವರನನ್ನಾಗಿ ಮಾಡುವ, ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ, ಮೊದಲು ಹೊಲೆಯನಾಗಿದ್ದವನನ್ನು ಪೂರ್ಣಯೋಗ್ಯನನ್ನಾಗಿ ಮಾಡುವ, ತಮ್ಮಲ್ಲಿ ಅತ್ಯಧಿಕವಾಗಿ ಹಬ್ಬಿರುವ ಅವಿವೇಕತೆಯಿಂದ ರಾಜರ ಮನಸ್ಸಿನ ಸ್ಥಿತಿ ಬಹಳ ಚಂಚಲವಾದುದು. ಆದುದರಿಂದ ರಾಜರನ್ನು ಸೇವೆ ಮಾಡಿ ಬಾಳುವುದೇ ಕಷ್ಟ. ೯೩. ಅಸಮಾನವಾದ ಪರಾಕ್ರಮದ ರೀತಿ, ಔದಾರ್ಯಗುಣ, ನೇರವಾದ ಸತ್ಯವಾಕ್ಕು, ಇವು ಮೂರು ನಾಲ್ವೇ ಗುಣಗಳು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಾಜವಂಶದಲ್ಲಿ ಹುಟ್ಟಿದ ಗುಣ (ವಂಶಮದ) ಅಹಂಕಾರ, ಅಹಂಕಾರದಿಂದ ಕೂಡಿದ ಅವಿವೇಕತೆ, ಇದರೊಡನೆ ಕೂಡಿದ ದಾದಿಯ ಮೊಲೆಹಾಲನ್ನು ಕುಡಿದ ಗುಣ ಇವುಗಳಲ್ಲವೇ? ೯೪. ಹಿಂದುಗಡೆ ಉತ್ಸಾಹದಿಂದ ಕೂಡಿ ತೇರನ್ನು ನಡೆಸು ಎನ್ನುವವನು ಅಂಬಿಗ, ಯುದ್ಧದಲ್ಲಿ ಮುಂಭಾಗದಲ್ಲಿ ನನಗೆ ಸಮಾನನಾಗಿ (ಸಾರಥಿಯಾಗಿ) ಕೆಲಸದಲ್ಲಿರುವವನು ದನಕಾಯುವವನು (ಗೋವಳಿಗ), ರಥವನ್ನು ನಡೆಸುವ ನನ್ನ ರೀತಿಯದು ಹೊಲೆಯನಿಗೆ ಸರಿಯಾದುದಾಗಿ ಒಪ್ಪಿರಲು ಅಷ್ಟನ್ನು ನೀನು ದಯಮಾಡಿ ಹೇಳಿದೆಯಲ್ಲ ದುರ್ಯೋಧನ ಇಂತಹ ಅದೃಷ್ಟವನ್ನು ಯಾರು ತಾನೆ ಪಡೆಯುತ್ತಾರೆ?