________________
೫೯೨/ ಪಂಪಭಾರತಂ
ವರ ಅನ್ನೆಗಂ ಸಂಸಪಕನಿಕಾಯಮನತಿ ನಿಶಿತ ಸಾಯಕನಿಕಾಯದಿಂ ನಿಶ್ಯಪಮಾಗೆ ಮಾಲ್ಪ ಸಾಮಂತಚೂಡಾಮಣಿ ಕೌರವಬಲದ ಕಳಕಳಮಂ ಕೇಳು ಮನಃಪವನವೇಗದಿಂ ಜವನೆ ಬರ್ಪಂತೆ ಬಂದು ತಾಗಿದಾಗಳಕ್ಕೋಹಿಣೀ ನಾಯಕಂ ದಂಡಧಾರಂ ಗಂಡಗುಣಕ್ಕಾಧಾರ ಮಾಗಿ ಮದಗಳಿತ ಗಂಡ ಪ್ರಚಂಡ ಮದವೇತಂಡಮನಗದು ಬಿಟ್ಟಿಕ್ಕಿದಾಗಉll ಕಾದಲಿದಿರ್ಚಿ ಬಂದ ಪಗೆ ಸಂಪಗೆಯಂತ ಶಿಳೀಮುಖಕ್ಕೆ ಗಂ
ಟಾದುದಿದಂದ ಸಿಂಧುರದೊಳಿಂತಿವನೊರ್ವನ ತಳನಾದೊಡೇ | ನಾದುದೋ ಬಲ್ಲೆನೆಂದು ಮುಳಿದೆಚೊಡ ಸೌಳನೆ ಸೀಳು ಪಚ್ಚವೋ
ಲಾದುದು ದಂಡಧಾರ ಗಜಮಾತನೊಡಲ್ವರಸಂದು ಪಾರ್ಥನಂ || ೮೭ ವll ಅಂತಾತಂ ಕೃತಾಂತನಿವಾಸಮನೆಯುವುದುಕಂil : ಇನ್ನಿನಿಸನಿರ್ದೋಡಾಜಿಯೊ
ಳನ್ನ ತನೂಜನುಮನ ಪಂ ನರನದನಿ | ಸ್ಟಾನ್ಲೋಡಲಾನೆಂಬವೊ ಲನ್ನೆಗಮಸ್ತಾಚಳಸ್ಥನಾದಂ ದಿನಪಂ |
eses ವ|| ಅಂತು ಪತಂಗಮಂಡಲಮಪರಗಿರಿತಟಮನೆಯುವುದುಮೆರಡುಂ ಪಡೆಗಳಪಹಾರ ತೋರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ ಪೊದುವಾಗಳ ರಾಜರಾಜನಲ್ಲಿಗಂಗರಾಜಂ ಬಂದು ಹಯೋಪಾಯಕುಶಲರಪ್ಪ ಗಾಂಗೇಯರಳಿಸಿದ ಮಾತನೇಕಾಂತದೊಳಚಿಪುವುದುಂ
ಅದ್ಭುತವನ್ನೂ ಜೊತೆಯಲ್ಲಿಯೇ ತೋರಿದನು. ವ|| ಅಷ್ಟರಲ್ಲಿ ಸಂಸಪ್ತಕಸಮೂಹವನ್ನು ಬಹಳ ಹರಿತವಾದ ಬಾಣಗಳ ಸಮೂಹದಿಂದ ಸ್ವಲ್ಪವೂ ಉಳಿಯದ ಹಾಗೆ ಮಾಡುವ ಸಾಮಂತಚೂಡಾಮಣಿಯಾದ ಅರ್ಜುನನು, ಕೌರವಸೈನ್ಯದ ಕಳಕಳಶಬ್ದವನ್ನು ಕೇಳಿ ಮನೋವೇಗ ವಾಯುವೇಗದಿಂದ ಯಮನೇ ಬರುವ ಹಾಗೆ ಬಂದು ತಾಗಿದನು. ಅಕ್ಟೋಹಿಣೀಸೈನ್ಯದ ಒಡೆಯನಾದ ದಂಡಧಾರನು ಪೌರುಷಗುಣಕ್ಕೆ ಆಶ್ರಯವಾಗಿ ಮದೋದಕವು ಸುರಿಯುತ್ತಿರುವ ಕಪೋಲವುಳ್ಳ ಮದ್ದಾನೆಯನ್ನು ತಿವಿದು ಭೂಬಿಟ್ಟನು. ೮೭. ಅರ್ಜುನನೊಡನೆ ಕಾದಲು ಎದುರಿಸಿ ಬಂದ ಶತ್ರುವು ದುಂಬಿಗೆ ಎದುರಾದ ಸಂಪಗೆಯ ಹೂವಿನಂತೆ ದೂರವಾಯಿತು. ಇದೊಂದೇ ಆನೆಯೊಡನೆ ಇವನೊಬ್ಬನೆ ಪ್ರತಿಭಟಿಸಿದರೇನಾಯಿತು. ಇದಕ್ಕೆ ಪರಿಹಾರವನ್ನು ನಾನು ತಿಳಿದಿದ್ದೇನೆ ಎಂದು ಕೋಪಿಸಿ ಹೊಡೆಯಲು ಅರ್ಜುನನಿಂದ ದಂಡಧಾರನ ಶರೀರದೊಡನೆ ಆ ಆನೆಯು ಸೌಳೆಂದು ಸೀಳಿ ವಿಭಾಗಿಸಿದ ಹಾಗಾಯಿತು. ವll ಹಾಗೆ ಅವನು ಯಮನ ಮನೆಯನ್ನು ಸೇರಲಾಗಿ ೮೮. ಇನ್ನು ಸ್ವಲ್ಪ ಕಾಲವಿದ್ದರೆ ಯುದ್ಧದಲ್ಲಿ ಅರ್ಜುನನು ನನ್ನ ಮಗನಾದ ಕರ್ಣನನ್ನೂ ಸಾಯಿಸುತ್ತಾನೆ. ಇದನ್ನು ನಾನು ನೋಡಲಾರೆ ಎನ್ನುವ ಹಾಗೆ ಅಷ್ಟರಲ್ಲಿ ಸೂರ್ಯನು ಮುಳುಗಿದನು. ವರ ಯುದ್ಧವನ್ನು ನಿಲ್ಲಿಸಲು ಸೂಚನೆಕೊಡುವ ವಾದ್ಯವನ್ನು ಬಾಜಿಸಲು ಎರಡು ಸೈನ್ಯಗಳೂ ತಮ್ಮತಮ್ಮಬೀಡುಗಳಿಗೆ ತೆರಳಿದುವು. ಆಗ ದುರ್ಯೊಧನನಲ್ಲಿಗೆ ಕರ್ಣನು ಬಂದು ಅಶ್ವಶಾಸ್ತ್ರವನ್ನು ಚೆನ್ನಾಗಿ ತಿಳಿದ ಭೀಷ್ಕರು ತಿಳಿಸಿದ ಮಾತನ್ನು ರಹಸ್ಯವಾಗಿ ತಿಳಿಸಿದನು. ಮುಕ್ಕಣ್ಣನಾದ ಈಶ್ವರನಲ್ಲಿ ಕಲಿತ