________________
ದ್ವಾದಶಾಶ್ವಾಸಂ | ೫೯೧ ವll ಅಂತು ತನ್ನ ನಚ್ಚುವ ಕೆಯ್ತುಗಳನಿತು ಪೊಳೆಯೆ ಮಸೆದೊಟ್ಟಿ ಮತ್ತಹಸ್ತಿಯನಣೆದು ತೋಟಿಕೊಟ್ಟಾಗಳ್ಉlt ಈ ಮದದಂತಿಯಬ್ರರವುಮೀತನ ಶೌರ್ಯಮುಮೀ ಮಹೋಗ್ರ ಸಂ
ಗ್ರಾಮದೊಳೆನ್ನುಮಂ ಚಳಿಯಿಸಲ್ ಬಗದಪುದು ಪಾಂಡ್ಯನನ್ನನಿ | ನೀ ಮಹಿಯೊಳ್ ಪಳಂ ಕಲಿಯೆ ನೆಟ್ಟನಿದಿರ್ಚುವ ನಿಚ್ಚಟಕ್ಕೆಯೊಳ್ ಭೀಮನುಮಿನ್ನನನನೆ ಪೋಲೈಗಿವಂಗಣ ಗಂಡರೆಂಬರಾರ್ || ವ|| ಎಂಬನ್ನೆಗಂ ಪಾಂಡ್ಯನಶ್ವತ್ಥಾಮನ ರಥಮಂ ಮುಟ್ಟೆವಂದುಕಂ ವಿಳಯಾನಳ ವಿಳಸನ ವಿ
ಸುಳಿಂಗ ಸಂಘಾತದಿಂ ತಗುಳಡರ್ವನಿತೂಂ | ದಳವಿಯ ತೋಮರದಿಂದಿಡ ಪೊಳೆವಸ್ತದ ಗುರುತನೂಜನೆಡೆಯೊಳ ಕಡಿದಂ ||
೮೫ ವll ಅಂತದಂ ಕಡಿದು ಕೂರಿದುವುಂ ನೇರಿದುವುಮಪ್ಪಯ್ಯಮೋಘಾಸ್ತ್ರಂಗಳಂ ಬಾಣಧಿ ಯಿಂದುರ್ಚಿಕೊಂಡು ತನ್ನ ಮನದೊಳೆ ಸಮಕಟ್ಟಿಕೊಂಡೆಚ್ಚಾಗಳ್ಕoll ಕರಿಕರಮುಂ ಮಾವಂತನ
ಕರಮುಂ ತತ್ಸಾಂಡ್ಯರಮುಮೊಡನುರುಳ ಭಯಂ | ಕರಮುಮನುರ್ವಿಗಗುರ್ವುಮ
ನೆರಡುಂ ಪಡೆಗಳೆ ತೋಚಿದಂ ಗುರುತನಯಂ || ವl! ತಾನು ನಂಬಿದ್ದ ಆಯುಧಗಳೆಲ್ಲ ಹೊಸತಾಗಿ ಮಸೆಯಲ್ಪಟ್ಟು ರಾಶಿಯಾಗಿ ಹೊಳೆಯುತ್ತಿರಲು ಮದ್ದಾನೆಯನ್ನು ಅಂಕುಶದಿಂದ ತಿವಿದು ಪಾಂಡ್ಯನು ಅಶ್ವತ್ಥಾಮನ ಮೇಲೆ ಭೂಬಿಟ್ಟನು. ೮೪, ಈ ಮದ್ದಾನೆಯ ಬರುವಿಕೆಯೂ ಈತನ ಪರಾಕ್ರಮವೂ ಈ ಘೋರಯುದ್ದದಲ್ಲಿ ನನ್ನನ್ನು ಶಕ್ತಿಹೀನನನ್ನಾಗಿಮಾಡಲು ಯೋಚನೆ ಮಾಡುತ್ತಿದೆಯಲ್ಲವೇ ? ಪಾಂಡ್ಯನಂತಹವನೂ ಈ ಭೂಮಿಯಲ್ಲಿ ಇನ್ನೊಬ್ಬ ಶೂರನಿರುವನೇ? ನೇರವಾಗಿ ವೈರಿಯನ್ನು ಎದುರಿಸುವ ಸೈರ್ಯದಲ್ಲಿ ಭೀಮನು ಕೂಡ ಇಂತಹ ಶಕ್ತಿಯುಳ್ಳವನಲ್ಲ, ಎನ್ನುವಾಗ ಹೋಲಿಕೆಮಾಡಲು ಇವನಿಗೆ ಸಮಾನರಾದವರು ಯಾರು ಇದ್ದಾರೆ ? ವll ಎನ್ನುವಷ್ಟರಲ್ಲಿ ಪಾಂಡ್ಯನು ಅಶ್ವತ್ಥಾಮನ ತೇರಿನ ಸಮೀಪಕ್ಕೆ ಬಂದು ೮೫. ಪ್ರಳಯಾಗ್ನಿಯ ಪ್ರಕಾಶಮಾನವಾದ ಕಿಡಿಗಳ ಸಮೂಹದಿಂದ ಹಿಂಬಾಲಿಸಿ ಮೇಲೇರುವಷ್ಟು ಶಕ್ತಿಯುಳ್ಳ ತೋಮರವೆಂಬ ಆಯುಧ (ದೊಡ್ಡಗದೆ) ಹೊಡೆಯಲು ಅಶ್ವತ್ಥಾಮನು ಮಧ್ಯಮಾರ್ಗದಲ್ಲಿಯೇ ಅದನ್ನು ಕತ್ತರಿಸಿದನು. ವ|| ಹಾಗೆ ಅದನ್ನು ಕತ್ತರಿಸಿ ಹರಿತವೂ ಸರಳವೂ ಆದ ಬೆಲೆಯೇ ಇಲ್ಲದ ಅಯ್ದು ಬಾಣಗಳನ್ನು ಬತ್ತಳಿಕೆಯಿಂದ ಸೆಳೆದುಕೊಂಡು ತನ್ನ ಮನಸ್ಸಿನಲ್ಲಿಯೇ ಹೇಗೆ ಪ್ರಯೋಗಮಾಡಬೇಕೆಂದು ಸಿದ್ದಾಂತಮಾಡಿಕೊಂಡು ಹೊಡೆದನು. ೮೬, ಆನೆಯ ಸೊಂಡಿಲೂ ಮಾವಟಿಗನ ಕೈಯೂ ಆ ಪಾಂಡ್ಯನ ತಲೆಯೂ ಜೊತೆಯಾಗಿಯೇ ಉರುಳಲು ಅಶ್ವತ್ಥಾಮನು ಲೋಕಕ್ಕೆ ಭಯಂಕರತ್ವವನ್ನೂ
೮೬