________________
೫೮೬ | ಪಂಪಭಾರತಂ ಚಂ|| ಅನಲಶಿಖಾಕಳಾಪವನೆ ಭೋರ್ಗರೆದಾರ್ದುಗುಟ್ಟನ್ನಮಪ್ಪಗು
ರ್ವಿನ ಶರಸಂಕುಳಂಗಳೊಳೆ ಭೋರ್ಗರೆದಾರ್ದಿಸ ಭೀಮನಚ್ಚ ನ | ಚಿನ ಘನ ಬಾಣಜಾಳಮದು ಭೋಂಕನೆ ನೋಡುವೊಡಾಳಜಾಳವಾ
ಮೈನೆ ಕಡಿದೊಟ್ಟ ಸುಟ್ಟುವು ಪತಿಗಳು ಗುರುಪುತ್ರನಂಬುಗಳ್ || ೬೮
ವ|| ಅಂತು ಗುರುನಂದನಂ ಮರುನಂದನವಿರಚಿತ ನಿಶಾತ ವಿಶಿಖ ಪಂಜರಮನದು ಕಲಕುಲಂಮಾಡಿಯುಮನಿತಳ್ ಮಾಣದೆ
ಕಂtರ ತೇರಂ ಕುದುರೆಯನೆಸಗುವ
ಸಾರಥಿಯ ಪೂಡರ್ಪನಯು ಬಾಣದೊಳುಪಸಂ | ಹಾರಿಸಿ ತಟತಟ ತೋಳಗುವ ನಾರಾಚದಿನೆಚ್ಚನೂ ಭೀಮನ ನೊಸಲಂ || ಮಿಸುಗುವ ನೊಸಲಂ ನಟ್ಟ ರ್ವಿಸುವಿನೆಗಂ ತೂಗಿ ತೊನೆವ ನಾರಾಚಮದೇ | ನೆಸೆದುದೂ ತದ್ವದನಾಂಭೋ ಜ ಸೌರಭಾಕೃಷ್ಟ ಮಧುಪ ಮಾಲಾಕೃತಿಯಿಂ || ನಡೆ ನಾರಾಚದ ನೋವಿನ ನಡುಕಂ ಪಿರಿದಾಯ್ತು ಸರ್ಪಯೋನಿಯ ಸೆರೆಯಂ | ಬಿಡಿಸಿದವೊಲೆಚ್ಚು ಪಾಯ್ದ ತೊಡನೊಡನೆ ಕದು ಕೃಷ್ಣ ರುಧಿರ ಜಿಘಂ ||
ನಕ್ಕು ಇವನೂ ನಮ್ಮನ್ನು ಬಳಸುತ್ತಾನಲ್ಲವೆ ಎಂದು-೬೮. ಅಗ್ನಿಜ್ವಾಲೆಯ ಸಮೂಹವನ್ನೇ ಭೋರೆಂದು ಶಬ್ದಮಾಡಿ ಉಗುಳುವಂತಹ ಭಯಂಕರವಾದ ಬಾಣಸಮೂಹದಿಂದಲೇ ಆರ್ಭಟಿಸಿ ಶಬ್ದಮಾಡಿ ಅಶ್ವತ್ಥಾಮನನ್ನು ಹೊಡೆದನು. ಅವುಗಳಿಂದ ಭೀಮನು ಹೊಡೆದ (ಸಾರವತ್ತಾದ) ಆ ಬಾಣಸಮೂಹವು ನೋಡುತ್ತಿರುವ ಹಾಗೆಯೇ ನಿಸ್ಸಾರವಾದ ಹಂದರವಾಯ್ತು ಎನ್ನುವ ಹಾಗೆ ಅಶ್ವತ್ಥಾಮನ ಬಾಣಗಳು ಭೀಮನ ಬಾಣಗಳನ್ನು ಕಡಿದು ರಾಶಿ ಮಾಡಿ ಸುಟ್ಟು ಹಾಕಿದವು. ವ|| ಹಾಗೆ ಅಶ್ವತ್ಥಾಮನು ಭೀಮನಿಂದ ರಚಿತವಾದ ಹರಿತವಾದ ಬಾಣಜಾಲವನ್ನು ನಾಶಪಡಿಸಿ ಚದುರಿಸಿ ಅಷ್ಟಕ್ಕೇ ಬಿಡದೆ ೬೯. ಅವನ ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯ ಶಕ್ತಿಯನ್ನೂ - ಅಯ್ದುಬಾಣಗಳಿಂದ ನಾಶಮಾಡಿ ತಳತಳನೆ ಹೊಳೆಯುವ ಬಾಣದಿಂದ ಭೀಮನ ಮುಖವನ್ನು ನಾಟುವ ಹಾಗೆ ಹೊಡೆದನು. ೭೦, ಹೊಳೆಯುವ ಹಣೆಯಲ್ಲಿ ನಾಟಿಕೊಂಡು ವ್ಯಾಪಿಸುತ್ತ ಆ ಕಡೆಗೂ ಈ ಕಡೆಗೂ ತೂಗಾಡುತ್ತಿರುವ ಆ ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ ವಿಶೇಷ ಸುಂದರವಾಗಿದ್ದಿತು. ೭೧. ಬಾಣದ ನೋವಿನ ತುಡಿತವು ಹೆಚ್ಚಾಯಿತು. ವಿಸರ್ಪಿಣಿಯೆಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತಸಮೂಹವು ಒಡನೆಯೇ ಸೂಸಿ ಹರಿಯಿತು.