________________
38
ಕಂll
ದ್ವಾದಶಾಶ್ವಾಸಂ /೫೮೭
ನಡುಗಲೆರ್ದ ಬೆಮರಲ್ ತನು
ತೊಡರಲ್ ನಾಲಗೆ ತಗುಳುದಾ ಮಾರ್ಗಣದಿಂ | ಗಡ ಮತ್ತುಟೆದರನೆಂತುಂ
ಮಡಿಪದ ಗುರುತನಯನೆಚ್ಚ ಶಿತ ನಾರಾಚಂ ||
ವ|| ಅಂತು ಭೀಮಸೇನಂ ನಾರಾಚಘಾತದಿಂ ಪುರ್ತು ಬಸವದುಸಿರಲಡ ಮಾಡದೆ ಬಿಲ್ಲ ಕೊಪ್ಪಂ ಪಿಡಿದಾಗಿ ಕಿಟದಾನುಂ ಬೇಗಮಿರ್ದು ನೊಸಲೊಳ್ ನಟ್ಟ ನಾರಾಚಮನಂತಾನುಂ ಕಿಟ್ಟು ತನ್ನಂ ತಾನೆ ಚೇತರಿಸಿ ಸಿಂಹನಾದದಿನಾರ್ದು
ಚoll
29
ಪೆಜವುಟದ ಮೂಲ ಮಿರಮಿ
ಮಿರುವ ಶಿತಾಸ್ತ್ರಂಗಳಿಂ ದ್ವಿಜನ್ಮನ ನೊಸಲಂ | ನೆಗೊಳ್ಳಿನಮೆಸ್ಕೊಡೆ ಕ
ಖರಕರಬಂಬದಿಂ ಕಿರಣಸಂತತಿಗಳ್ ಪೋಪೊಣಿದಪ್ಪುವೆಂ
ಬರ ನುಡಿ ಪೋಲ್ವೆವೆತ್ತುದೆನೆ ಬಾಣಧಿಯಿಂದಿರದುಚಿಕೊಂಡು ವಿ| ಸುರಿತ ಶರಂಗಳೆಂಟನವರೊಳ್ ಪೊಳವನ್ನು ಶರಂಗಳಿಂ ಸುರು ಳುರುಳಿನಮೆಚ್ಚನಾ ದ್ವಿಜನ ಸೂತ ವರೂಥ ತುರಂಗಮಂಗಳಂ || 20
ಸ್ಥದವೊಲಾಯ್ತದಟುಮಳವುಮಾ ಮಾರುತಿಯಾ |
ವ|| ಆಗಳಶ್ವತ್ಥಾಮಂ ಹೇಮಪುಂಖಾಂಕಿತ ಭೀಮಸಾಯಕನಿರ್ಘಾತದಿಂದಲೆಯೆ ನೊಂದು ಭೋರೆಂದು ಕವಿವ ಬಸುನೆತ್ತರ್ ಕಣ್ಣಂ ಕವಿಯ ಸೀಂಟಿಕಳೆದು ನಡುಕೋಲ್ವರಂ ನಟ್ಟ ಕೂರ್ಗಣೆಗಳಂ ಗಳವೆರಸು ತೊರೆದು ಕಳೆದು
24
೭೨. ಆ ಬಾಣದಿಂದ (ಭೀಮನ) ಎದೆ ನಡುಗುವುದಕ್ಕೂ ಮೈ ಬೆವರುವುದಕ್ಕೂ ನಾಲಗೆ ತೊಡರುವುದಕ್ಕೂ ಪ್ರಾರಂಭವಾಯಿತು. (ಎಂದ ಮೇಲೆ) ಅಶ್ವತ್ಥಾಮನು ಪ್ರಯೋಗಿಸಿದ ಹರಿತವಾದ ಬಾಣವು ಇನ್ನುಳಿದವರನ್ನು ಕೊಲ್ಲದಿರುತ್ತದೆಯೇ? ವ|| ಭೀಮಸೇನನು ಬಾಣದ ಪೆಟ್ಟಿನಿಂದ ಗಾಯಗೊಂಡು ಶಕ್ತಿಗುಂದಿ ಉಸಿರಾಡು ವುದಕ್ಕೂ ಆಗದೆ ಬಿಲ್ಲಿನ ತುದಿಯನ್ನು ಹಿಡಿದು ಊರಿಕೊಂಡು ಸ್ವಲ್ಪ ಕಾಲವಿದ್ದು ಹಣೆಯಲ್ಲಿ ನಾಟಿದ್ದ ಬಾಣವನ್ನು ಹೇಗೋ ಕಿತ್ತು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸಿಂಹಧ್ವನಿಯಿಂದ ಆರ್ಭಟಿಸಿದನು. ೭೩. ಸೂರ್ಯಬಿಂಬದಿಂದ ಕಿರಣಗಳು ಹೊರಕ್ಕೆ ಹೊರಟು ಬರುತ್ತಿರುವ ಹಾಗೆ ಬತ್ತಳಿಕೆಯಿಂದ ಪ್ರಕಾಶಮಾನವಾದ ಎಂಟುಬಾಣಗಳನ್ನು ಸೆಳೆದುಕೊಂಡು ಅವುಗಳಲ್ಲಿ ಹೊಳೆಯುತ್ತಿರುವ ಅಯ್ದುಬಾಣಗಳಿಂದ ಆ ಬ್ರಾಹ್ಮಣನಾದ ಅಶ್ವತ್ಥಾಮನ ಸಾರಥಿ, ತೇರು ಮತ್ತು ಕುದುರೆಗಳು ಸುರುಳಿಕೊಂಡು ಉರುಳುವ ಹಾಗೆ ಹೊಡೆದನು. ೭೪. ಇನ್ನುಳಿದ ಮೂರು ಮಿರುಮಿರುಗುವ ಹರಿತವಾದ ಬಾಣಗಳಿಂದ ಬ್ರಾಹ್ಮಣನ ಹಣೆಗೆ ಮರ್ಮವನ್ನು ಭೇದಿಸುವಂತೆ ಹೊಡೆಯಲು ಆ ಭೀಮಸೇನನ ಪರಾಕ್ರಮವೂ ಶಕ್ತಿಯೂ ಕಣ್ಣು ಬಿಟ್ಟಂತಾಯಿತು. ವ|| ಆಗ ಅಶ್ವತ್ಥಾಮನು ಚಿನ್ನದ ಗರಿಗಳಿಂದ ಗುರುತುಮಾಡಲ್ಪಟ್ಟ ಹಿಂಭಾಗವನ್ನುಳ್ಳ ಭೀಮನ ಬಾಣಗಳ ಪೆಟ್ಟಿನಿಂದ ಸಾಯುವಷ್ಟು ವ್ಯಥೆಪಟ್ಟು ಭೋರೆಂದು ಸುರಿಯುತ್ತಿರುವ