________________
ದ್ವಾದಶಾಶ್ವಾಸಂ | ೫೮೫ ವ|| ಆಗಳ್ ಪ್ರತಿವಿಂಧ್ಯನಂ ವಿಂಧ್ಯಾಚಲಮನ್ನೆಡಗಲಿಸಿದಗಸ್ತನಂತ ಭೀಮಸೇನಂ ತಡೆಯದಡಗಲಿಸಿ ರುದ್ರಾವತಾರನ ರಥಕ್ಕದಿರದೆ ತನ್ನ ರಥಮಂ ಪರಿಯಿಸಿಚಂtು ನಿನಗುಂದೇನುಮಲದಲಿಗಂಡರಿದಿರ್ಚುವರಲ್ಲರನ್ನನಾಂ
ಪವಿತಳವುಳ್ಳೂಡಿತ್ತ ಮಗುಂದು ಶರಾವಳಿಯಿಂದ ಪೂಆಡಂ | ಬಿನ ಸರಿ ಸೋನ ತಂದಲಿದು ದಲ್ ಪೊಸತಾಯ್ತನ ಕಂಡರೆಲ್ಲಮಂ ಬಿನ ಮಳಗಾಲವಾಯ್ತು ಕುರುಭೂಮಿಗೆ ಭೀಮನಂ ಪ್ರತಾಪಿಯೋ || ೬೬
ಚಂ|| ಗದೆಯೊಳ ಜಟ್ಟಿಗಂ ಪವನನಂದನನೆಂಬರ ಮಾತು ಮಾತದ
ಅದು ಸುರಸಿಂಧುಪುತ್ರ ಗುರು ಕರ್ಣ ಕೃಪ ಪ್ರಮುಖರ್ಕಳಿಂತು ತೇ | ರಿದರೆ ಶರಾಸನಾಗಮದೊಳಂಬಿನಮಂಬರದೊಳ್ ಸುರರ್ಕಣೀಂ ಪುದಿದನೊ ಬಾಣಜಾಲದ ಗುರುಪ್ರಿಯನಂದನನಂ ಮರುತ್ತುತಂ || ೬೭
ವ|| ಆಗಳಶ್ವತ್ಥಾಮಂ ಭೀಮೋದ್ಧಾಮ ಶ್ಯಾಮ ಜಳಧರ ವಿಮುಕ್ತ ಶರಾವಳಿಯ ಬಳಸಂ ಕಂಡು ಮುಗುಳಗೆ ನಕ್ಕುಮೀತನುಮಮ್ಮಂ ಬಳಸಿದಪ್ಪನೆಂದು
ವಿಶೇಷವಾಗಿ ಸೆಳೆಯಲ್ಪಡುತ್ತಿದೆ. ಇದನ್ನು ಕಾಯುವವರಾರು, ಯುದ್ದದಲ್ಲಿ ನಿಲ್ಲುವಂತಹವರು ಯಾರು ಎನ್ನುವ ಸಮಯಕ್ಕೆ ಸರಿಯಾಗಿ ಆಚಾರ್ಯಪುತ್ರನಾದ ಅಶ್ವತ್ಥಾಮನು ಆ ಕಾರ್ಯಕ್ಕೆ ಇದೋ ನಾನು ಬಂದಿದ್ದೇನೆ ಎಂದು ಎಲ್ಲರನ್ನೂ ಸಮಾಧಾನಮಾಡಿ ಬಂದು ಮುಖದಲ್ಲಿ ಕಣ್ಣೂ, ಪ್ರಚಂಡವಾದ ದೋರ್ದಂಡದಲ್ಲಿ ಬಿಲ್ಲೂ ಕತ್ತಿನಲ್ಲಿ ಕರೆಯೂ (ವಿಷದ ಗುರುತು) ತಲೆಯಲ್ಲಿ ಚಂದ್ರನೂ ಪ್ರಕಾಶಿಸುತ್ತಿರಲು ನಿಂತು ಎದುರಿಸಿದನು. ವ|| ಆಗ ವಿಂಧ್ಯಪರ್ವತವನ್ನು ದಾಟಿದ ಅಗಸ್ಯಋಷಿಯ ಹಾಗೆ ಭೀಮನು ಸಾವಕಾಶಮಾಡದೆ ದಾಟಿ (ಅವರಿಬ್ಬರ ಮಧ್ಯೆ ಹಾರಿ ಬಂದು) ಅಶ್ವತ್ಥಾಮನ ತೇರಿಗೆ (ಎದುರಾಗಿ) ಹೆದರದೆ ತನ್ನ ರಥವನ್ನು ಹರಿಯಿಸಿದನು. ೬೬. ಶಕ್ತಿಯಿಲ್ಲದ ಸಾಮಾನ್ಯ ಶಕ್ತಿಹೀನರನ್ನು ನೀನು ಎದುರಿಸಬಲ್ಲೆ. ನನ್ನನ್ನು ಪ್ರತಿಭಟಿಸುವಷ್ಟು ನಿನಗೆ ಸಾಮರ್ಥ್ಯವಿದ್ದರೆ ಈ ಕಡೆ ತಿರುಗು ಎಂದು ಭೀಮನು ಬಾಣಗಳ ಸಮೂಹದಿಂದ ಅವನನ್ನು ಹೂಳಲು ಬಾಣದ ಮಳೆ, ಜಡಿಮಳೆ, ತುಂತುರುಮಳೆಗಳು ಹೊಸತಾಯಿತು ಎಂದು ಕಂಡವರೆಲ್ಲರೂ ಹೇಳುವ ಹಾಗೆ ಕುರುಭೂಮಿಗೆ ಹೊಸ ಮಳೆಗಾಲವನ್ನು ಭೀಮನು ಉಂಟುಮಾಡಿದನು. ಭೀಮನು ಅದೆಂತಹ ಪ್ರತಾಪಶಾಲಿಯೋ! ೬೭, ಭೀಮನು ಗದಾಪ್ರಯೋಗದಲ್ಲಿ ಮಾತ್ರ ಗಟ್ಟಿಗ ಎನ್ನುವವರ ಮಾತು ಮಾತಲ್ಲ; ಭೀಷ್ಮ ದ್ರೋಣ, ಕರ್ಣ, ಕೃಪನೇ ಮೊದಲಾದ ಪ್ರಮುಖರು ಹೀಗೆ ಬಿಲ್ವಿದ್ಯೆಯಲ್ಲಿ ಪಂಡಿತರಾಗಿರಲಾರರು ಎಂದು ದೇವತೆಗಳು ಆಕಾಶದಲ್ಲಿ ಹೊಗಳುವ ಹಾಗೆ ಭೀಮನು ಅಶ್ವತ್ಥಾಮನನ್ನು ಬಾಣಗಳ ಸಮೂಹದಿಂದ ಪೂರ್ಣವಾಗಿ ಮುಚ್ಚಿಬಿಟ್ಟನು. ವ|| ಆಗ ಅಶ್ವತ್ಥಾಮನು ಭೀಮನೆಂಬ ವಿಸ್ತಾರವಾದ ನೀಲಮೇಘದಿಂದ ಬಿಡಲ್ಪಟ್ಟ ಬಾಣಸಮೂಹದ ವಿಸ್ತಾರವನ್ನು ಕಂಡು ಹುಸಿನಗೆ