________________
೫೮೪) ಪಂಪಭಾರತಂ
ವll ಅಂತು ಕೌರವಬಲಪ್ರಧಾನನಾಯಕನಷ್ಟ ಚಿತ್ರನಂ ಕೃತವರ್ಮನ ಕಮ್ಮೊಳತೀತ ನಾದದುರ್ಕೇವೈಸಿಕಂil ಅತಿ ಚಿತ್ರಂ ಚಿತ್ರನವಿ
ಶ್ರುತ ಶೌರಮಿದೆನಿಸಿ ತಾಪ ಚಿತ್ರನನಂತಾ | ಪ್ರತಿವಿಂಧ್ಯಂ ವಿಂಧ್ಯಾಚಲ . ಪತಿಯವೊಲವಿಚಲಿತನಾತನಂ ಬಂದಾಂತಂ || ಆಂತನ ಮೇಲೆ ಶಿತ ಶರ ಸಂತತಿಯಂ ಸುರಿಯೆ ನೋಡಿ ಶರಪರಿಣತಿಯಂ | ತಾಂ ತೋರ್ಪನನಗೆನುತಿರ ದಂತನಿತುಮನೊಡನೆ ಕಡಿದನೆಡೆಯೋಳೆ ಚಿತ್ರಂ | ೬೩ ಕಡಿದೋಡ ಕಡುಪಿಂದಂ ಕಿಡಿ ಕಿಡಿಯಾಗಿ ಶಿತಾಸ್ತನಿಕರಮಂ ಪ್ರತಿವಿಂಧ್ಯಂ | ಕಡಿದವನ ರಥಮನೂರ್ಮಯ
ಕಡಿದಂ ತಲೆಯುಮನದೊಂದು ದಾರುಣಶರಧಿಂ || ವ|| ಅಂತು ಚಿತ್ರನಂ ಕೊಂದು ಕುರುಕ್ಷೇತ್ರದೊಳ್ ತನ್ನ ಮಾತ ಮಾತಾಗೆ ಕೌರವ ಬಲಮಲ್ಲಮಂ ಪ್ರತಿವಿಂಧ್ಯನವಂದ್ಯ ಕೋಪೋದ್ರೇಕದಿಂದಾಸ್ಪೋಟಿಸಿ ಕೊಲ್ದಾಗಳ್ಮll ಕುರುಸೈನ್ಯಾಂಭೋಧಿ ತೊಳೆಯುಗಿದಪುದಿದನಾರಿಲ್ಲಿ ಕೆಯೊಲ್ವರೀ ಸಂ
ಗರದೊಳ್ ನಿಲ್ಯನ್ನರಾರೆಂಬೆಡೆಯೊಳಿದಿರೊಳಾನಕ್ಕೆ ಬಂದಿರ್ದನಂದ | ಇರುಮಂ ಸಂತೈಸಿ ಕಣ್ಣಲ್ ಕಣಿ ಪೆಜ್ ನೊಸಲೊಳ್ ಚಂಡ
ದೋರ್ದಂಡದೊಳ್ ಕಂ ಧರದೊಳ್ ತನನುತ್ತಮಾಂಗಾಂತರದೊಳೆಸೆಯ ನಿಂದಾಂತನಾಚಾರಪುತ್ರಂ || ೬೫
ಭೂಮಿಗೇ ವಿಚಿತ್ರವಾಯಿತು. ವll ಹಾಗೆ ಕೌರವಸೈನ್ಯದ ಮುಖ್ಯ ಸೇನಾಧಿಪತಿಯಾದ ಚಿತ್ರಸೇನನು ಕೃತವರ್ಮನ ಕಯ್ಯಲ್ಲಿ ಸತ್ತುದಕ್ಕೆ ದುಃಖಪಟ್ಟು ೬೨. ಈ ಹಿಂದೆಂದೂ ಕೇಳದೆಯೇ ಇದ್ದ ಈ ಚಿತ್ರನ ಶೌರ್ಯವು ಬಹಳ ಆಶ್ಚರ್ಯಕರವಾದುದು ಎನ್ನಿಸಿಕೊಂಡು ಮೇಲೆಬೀಳುವ ಚಿತ್ರನನ್ನು ಶ್ರೇಷ್ಠವಾದ ವಿಂಧ್ಯಾಚಲ ಪರ್ವತದಂತೆ ಸ್ಥಿರವಾಗಿರುವ ಪ್ರತಿವಿಂಧ್ಯನು ಬಂದು ಎದುರಿಸಿದನು. ೬೩. ಅವನ ಮೇಲೆ ಹರಿತವಾದ ಬಾಣಗಳ ಸಮೂಹವನ್ನು ಸುರಿಯಲು ನೋಡಿ ತಾನು ತನ್ನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನನ್ನ ಮೇಲೆ ತೋರಿಸುತ್ತಾನೆಯಲ್ಲವೇ ಎನ್ನುತ್ತ ಸಾವಕಾಶ ಮಾಡದೆ ಆ ಅಷ್ಟನ್ನೂ ತಕ್ಷಣವೇ ಚಿತ್ರನು ಮಧ್ಯದಲ್ಲಿಯೇ ಕಡಿದುಹಾಕಿದನು. ೬೪. ವೇಗದಿಂದ . ಕಿಡಿಕಿಡಿಯಾಗಿ ಬರುತ್ತಿರುವ ಹರಿತವಾದ ಬಾಣಗಳ ಸಮೂಹವನ್ನು ಪ್ರತಿವಿಂಧ್ಯನು ಕತ್ತರಿಸಿ ಅವನ ತೇರನ್ನೂ ತಲೆಯನ್ನೂ ಒಂದು ಭಯಂಕರವಾದ ಬಾಣದಿಂದ ಒಂದೇ ಸಲ ಕತ್ತರಿಸಿ ಹಾಕಿದನು. ವ|| ಚಿತ್ರನನ್ನು ಕೊಂದ ಕುರುಕ್ಷೇತ್ರದಲ್ಲಿ ತನ್ನ ಮಾತೇ ಮಾತಾಗಿರಲು ಪ್ರತಿವಿಂಧ್ಯನು ಕೌರವಸೈನ್ಯವನ್ನೆಲ್ಲ ವ್ಯರ್ಥವಾಗದ ಕೋಪೋದ್ರೇಕದಿಂದ ಶಬ್ದಮಾಡಿ (ತೋಳನ್ನು ತಟ್ಟಿ)-೬೫. ಕೌರವಸೇನಾಸಮುದ್ರವು ನೂಕಲ್ಪಟ್ಟು