________________
ದ್ವಾದಶಾಶ್ವಾಸಂ /೫೮೩ ಸುರುಳುರುಳ ಧನುರ್ಧರರುಮಂ ಧನುರ್ಧರರೆಚ್ಚ ಶರನಿಕರಂಗಳಿಂ ನೆಟ್ ಪೇಲುವಂತಂಬನೆ ಪೇಟೆ ಪೆಡೆಗೆಡೆದ ತುರುಷ್ಕ ತುರಂಗಂಗಳುಮಂ ಕೆದಟ ಬೆದಲೆ ಬೆಂಕೊಂಡು ತೊತ್ತದುಟಿವ ಮದೇಭಂಗಳುಮಂ ಮದೇಭಂಗಳನಾರ್ದು ಬಿಟ್ಟಿಕ್ಕುವ ನಿಷಾದಿಗಳಟೆಯ ಪೊರಜೆವಿಡಿದು ಕೊರಲ ಬಳಿಗಳೊಳೆ ಕಾಲ್ಲೋದು ಪರಿಯಿಸುವ ರಸತ್ತಾರುಗರುಮಂ ಆ ರಸತ್ತಾರುಗರಿಡುವಿಟ್ಟಿಯ ಪಿಡಿಕುತ್ತಿನ ಕಕ್ಕಡೆಯ ಕೋಳೆ ಮರಪಟಲಂ ನಾಯ್ಡು ಕೆಡೆದನಾರೂಢದಿಂ ಪೇಸೇ ತುಳಿದು ಕೊಲ್ವ ಕರಿಗಳ ಕರ ವದನ ಗಾತ್ರ ಲಾಂಗೂಲ ಘಾತದಿಂದಮುಡಿದು ಕೆಡೆದ ರಥಂಗಳಂ ರಥಂಗಳಿನ್ನೆಡೆಯೊಳ್ ಕಿಂಕೊಯಾಗಿ ಪತ್ತ ಕೆನ್ನೆತ್ತರೊಳ್ ಮೆತ್ತಿ ರೂಪಡೆಯಲಾಗದಂತಿರ್ದ ವೀರಭಟರಗುರ್ವ೦ ಪಡೆಯೆ ಕರ್ಣನನೇಕ ವಿಕರ್ಣಕೋಟಿಗಳಿಂ ಪಾಂಡವ ಬಲಮನಸುಂಗೊಳ ಕಾದುವಲ್ಲಿ ಪಾಂಡವ ಬಲದೊಳೆ ಸರಟಿಕೆಯ ನಾಯಕಂ ಕೃತವರ್ಮಂ ಕೌರವಬಲದ ನಾಯಕಂ ಚಿತ್ರಸೇನನನಗುರ್ವಾಗೆ ತಾಗಿ
ಕಂ ಚಿತ್ರ ಪತತ್ರಿಯೊಳೆಯಪ ಪ
ತತ್ರಿಗಳಂ ಕಡಿದು ಚಿತ್ರಸೇನನಾಗಳ್ |
ಚಿತ್ರವಧಮಾಗ ಕೊಂದೊಡ
ಧಾತ್ರಿಗೆ ತಾಂ ಚಿತ್ರಮಾಯ್ತು ಭುಜಬಲಮವನಾ ||
೬೧
ಸುರಿಯುತ್ತಿರುವ ರಕ್ತಧಾರೆಗಳು ಪ್ರವಾಹವಾಗಿ ಹರಿದುವು. ಆ ಕಡೆ ಈ ಕಡೆ ಭೇದಿಸಿ ಹೋಗುವ ಸಣ್ಣ ಬಾಣಗಳಿಂದ ಸುರುಳಿಗೊಂಡು ಉರುಳಿಬಿದ್ದಿರುವ ಬಿಲ್ದಾರ ರಿಂದಲೂ ಬಿಲ್ದಾರರು ಹೊಡೆದ ಬಾಣಗಳ ಸಮೂಹದಿಂದ ಮುಳ್ಳುಹಂದಿಗಳನ್ನು ಹೇರುವಂತೆ ಬಾಣವನ್ನು ಹೇರಿ ಹಿಂದೆಬಿದ್ದ ತುರುಕದೇಶದ ಕುದುರೆಗಳಿಂದಲೂ ಚೆಲ್ಲಾಪಿಲ್ಲಿಯಾಗಿ ಹೆದರಿ ಹಿಂಬಾಲಿಸಿ ಅಜ್ಜುಗುಜ್ಜಾಗಿ ತುಳಿದು ಹಾಕುವ ಮದ್ದಾನೆಗಳಿಂದಲೂ ಮದ್ದಾನೆಗಳನ್ನು ಕೂಗಿಕೊಂಡು ಭೂಬಿಡುವ ಮಾವಟಿಗರು ನಾಶವಾಗಲು ಹಗ್ಗವನ್ನೇ ಹಿಡಿದುಕೊಂಡು ಕತ್ತಿನ ಪಕ್ಕದಲ್ಲಿಯೇ ತಮ್ಮ ಕಾಲನ್ನು ಪೋಣಿಸಿ ಹರಿಯಿಸುವ ಹೊಸ ಮಾವಟಿಗರಿಂದಲೂ ಆನೆಯ ಮೇಲೆಯೇ ಕುಳಿತು ಯುದ್ಧಮಾಡುವವರಿಂದಲೂ ಆ ಗಜಾರೋಹಕರು ಎಸೆಯುತ್ತಿರುವ ಈಟಿಯ ಹೊಡೆತಕ್ಕೆ ಚಿಮ್ಮಿ ಕೆಳಗೆ ಬಿದ್ದವರನ್ನು ತುಳಿಯುತ್ತಿರುವ ಆನೆಗಳಿಂದಲೂ ಆನೆಗಳ ಸೊಂಡಿಲು, ಮುಖ, ಶರೀರ ಮತ್ತು ಬಾಲಗಳ ಪೆಟ್ಟಿನಿಂದ ಒಡೆದು ಕೆಳಗೆ ಬಿದ್ದ ತೇರುಗಳಿಂದಲೂ ತೇರಿನ ಇಕ್ಕಟ್ಟುಗಳಲ್ಲಿ ಕೆಸರಿನ ಹಳ್ಳವಾಗಿ ಹೆತ್ತು ಹೆಪ್ಪುಗೊಂಡಿರುವ ಕೆಂಪುರಕ್ತದಲ್ಲಿ ಅಂಟಿಕೊಂಡು ಆಕಾರವನ್ನು (ರೂಪನ್ನು) ತಿಳಿಯುವುದಕ್ಕಾಗದಂತೆ ವಿರೂಪವಾಗಿದ್ದರಿಂದಲೂ ಭಯವನ್ನು ಉಂಟುಮಾಡುವಂತೆ ಕರ್ಣನು ಅನೇಕ ಬಾಣಸಮೂಹಗಳಿಂದ ಪಾಂಡವಸೈನ್ಯದೊಡನೆ ಪ್ರಾಣಾಪಹಾರಮಾಡುವ ರೀತಿಯಲ್ಲಿ ಯುದ್ಧಮಾಡುತ್ತಿರಲು ಪಾಂಡವಸೈನ್ಯದ ಪ್ರಖ್ಯಾತನಾದ ಕೃತವರ್ಮನೂ ಕೌರವಬಲ ನಾಯಕನಾದ ಚಿತ್ರಸೇನನೂ ಭಯಂಕರವಾದ ರೀತಿಯಲ್ಲಿ ಕಾದಲು ತೊಡಗಿದರು. ೬೧. ವಿವಿಧರೀತಿಯಲ್ಲಿ ಮೇಲೆಬೀಳುವ ಬಾಣಗಳನ್ನು ಅಂತಹ ಬಾಣಗಳಿಂದಲೇ ಕಡಿದು ಚಿತ್ರಸೇನನನ್ನು ವಿಚಿತ್ರವಾದ ರೀತಿಯಲ್ಲಿ ಕೊಲ್ಲಲು ಅವನ ಭುಜಬಲವು