________________
೫೮೦ | ಪಂಪಭಾರತಂ ಕ೦ll ಉದಯಗಿರಿ ತಟದೊಳುದಯಿಸು
ವದಿತಿಪ್ರಿಯಪುತ್ರನಲ್ಲದಿತ್ತೊರ್ವಂ ಭಾ | ನು ದಿಗ್ದನೆನಿಪ ತೇಜದ
ಪೊದಚೆಯಿಂ ಜನದ ಮನಮನಲೆದಂ ಕರ್ಣಂ || ೫೩ ವ|| ಆಗಳಾ ಚತುರ್ವೇದ ಪಾರಗರಪ್ಪ ಧರಾಮರರ್ಗೆ ನಿತ್ಯದಾನಮಂ ಕೊಟ್ಟು ಸಿಡಿಲ ಬಳಗಮನೊಳಕೊಂಡಂತೆ ತಟತಟಿಸಿ ಪೊಳೆವ ಕೆಯ್ತುಗಳ ತೀವಿದ ನಾರುವದ ಚೋರಗುದುರೆಗಳೊಳ್ ಪೂಡಿದ ಹಸುರ್ವೊನ್ನ ರಥಮನೇಲೆ ಮುನ್ನೊರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿಟೆದು ಮೂಟು ಬಲವಂದು ತದೀಯ ಪಾದಪದ್ಮಂಗಳಂ ತಲೆಯೊಳಿಟ್ಟುಕೊಂಡು ಕಂn. ಆಮಾತಡೆಯದೆ ಮುಳಿದುಂ
ನಿಮಡಿಯಂ ನೋಯ ನುಡಿದನುಜದೇಳಿಸಲೇ | ನೆಮ್ಮಳವೆ ಮಜವುದಾ ಮನ ದುಮ್ಮಚ್ಚರಮಜ್ಜ ನಿಮ್ಮನೆರೆಯಲೆ ಬಂದಂ || ಧುರದೊಳ್ ನಿಮಡಿಯುಂ ಗೆಲ ಲರಿಯವುಮಾಪಾಂಡುಸುತರನೆಮಂದಿಗರ | ಚರಿಯಲ್ಲಿ ಗೆಲ್ವರೆಂಬುದು ಹರಿಗನೊಳಿದೆಂತುಮನ್ನ ಚಲಮನೆ ಮೆರೆವೆಂ || ೫೫
ರಾತ್ರಿಯನ್ನು ಕಳೆದನು. ೫೩. ಉದಯಪರ್ವತದ ದಡದಲ್ಲಿ ಹುಟ್ಟುವ ಅದಿತಿದೇವಿಯ ಪ್ರಿಯಪುತ್ರನಾದವನೇ ಅಲ್ಲದೆ ಈ ಕಡೆ ಬೇರೊಬ್ಬ ಸೂರ್ಯನು ಹುಟ್ಟಿದ್ದಾನಲ್ಲವೇ ಎನ್ನುವಂತಿರುವ ತೇಜಸ್ಸಿನ ವ್ಯಾಪ್ತಿಯಿಂದ ಜನರ ಮನಸ್ಸನ್ನು ಕರ್ಣನು ಆಕರ್ಷಿಸಿದನು. ವll ಆಗ ನಾಲ್ಕು ವೇದಗಳಲ್ಲಿ ಪಂಡಿತರಾಗಿರುವ ಬ್ರಾಹ್ಮಣರಿಗೆ ನಿತ್ಯದಾನವನ್ನು ಕೊಟ್ಟು ಸಿಡಿಲರಾಶಿಯನ್ನು ಒಳಗೊಂಡಿರುವ ಹಾಗೆ ಥಳಥಳಿಸಿ ಹೊಳೆಯುವ ಆಯುಧಗಳು ತುಂಬಿರುವ, ವಿವಿಧಜಾತಿಯ ಕುದುರೆಗಳನ್ನು ಹೂಡಿರುವ ಹಸುರು ಚಿನ್ನದ ರಥವನ್ನು ಏರಿ ಮೊದಲು ಒಬ್ಬನೇ (ಏಕಾಕಿಯಾಗಿ) ಬಾಣದ ಹಾಸಿಗೆಯಲ್ಲಿ ಮಲಗಿದ್ದ ಭೀಷ್ಮನ ಹತ್ತಿರಕ್ಕೆ ಬಂದು ತೇರಿನಿಂದಿಳಿದು ಮೂರುಸಲ ಪ್ರದಕ್ಷಿಣೆ ಮಾಡಿ ಅವನ ಪಾದಕಮಲಗಳನ್ನು ತನ್ನ ತಲೆಯಲ್ಲಿಟ್ಟು ಹೇಳಿದನು. ೫೪. 'ನಾನು ಮಾತನಾಡುವ ರೀತಿಯನ್ನು ತಿಳಿಯದೆ ಕೋಪಿಸಿಕೊಂಡು ನಿಮ್ಮ ಮನಸ್ಸು ನೋಯುವ ಹಾಗೆ ಮಾತನಾಡಿದೆ. ಸುಮ್ಮನೆ ನಿಮ್ಮನ್ನು ತಿರಸ್ಕಾರಮಾಡಲು ಸಾಧ್ಯವೇನು ? ಅಜ್ಜ, ಮನಸ್ಸಿನ ಆ ಹೆಚ್ಚಾದ ಕೋಪವನ್ನು ಮರೆತುಬಿಡುವುದು. ನಿಮ್ಮನ್ನು ಪ್ರಾರ್ಥಿಸುವುದಕ್ಕಾಗಿಯೇ ಬಂದಿದ್ದೇನೆ' ೫೫. ಯುದ್ದದಲ್ಲಿ (ನಿಮ್ಮ ಪಾದಗಳೂ) ನೀವೂ ಗೆಲ್ಲುವುದಕ್ಕೆ ಅಸಾಧ್ಯರಾದ ಆ ಪಾಂಡವರನ್ನು ನಮ್ಮಂತಹವರು ಗೆಲ್ಲುವರೆಂಬುದು ಆಶ್ಚರ್ಯವಲ್ಲವೇ? ಆದರೂ ಅರ್ಜುನನೊಡನೆ ಯುದ್ಧ ಮಾಡಿ