________________
೫೨
ದ್ವಾದಶಾಶ್ವಾಸಂ | ೫೭೯ ಹರಿಣಿ |ಮೋರೆಯ ಪಣಿಗಳ ಭೋರೆಂದೂರಂತ ಮಂಗಳಗೀತಿಗಳ
ನೆರೆಯ ಗಣಿಕಾನೀಕಂ ಬಂದಾಡ ಪುಣ್ಯಫಲಂಗಳಿಂ | ತರಿಸಿ ಮಿಸಿಸುತ್ತಾಗಲ್ ತಾಂ ತನ್ನ ಕೆಯ್ಯೋಳೆ ಕಟ್ಟಿದಂ ಕುರುಪರಿವೃಢಂ ಕರ್ಣಂಗಾ ವೀರವಟ್ಟದ ಪಟ್ಟಮಂ ||
ವಗ ಅಂತು ವೀರವಟ್ಟಮಾ ವೀರನ ನೊಸಲೋಳಸದಳಮಸದುಪಾಶ್ರಯಂಬಡೆಯೆ ಕಟ್ಟಿ ನಿಜಾಂತಃಪುರ ಪರಿವಾರಂಬೆರಸು ಸೇಸೆಯಿಕ್ಕಿ ತನ್ನ ತುಡುವ ತುಡಿಗೆಗಳೆಲ್ಲಮಂ ನೆಯ ತುಡಿಸಿ ದೇವಸಬಳದ ಪದಿನೆಂಟು ಕೋಟಿ ಪೊನ್ನುಮಂ ತರಿಸಿಕೊಟ್ಟು ಮಣಿಮಯ ಮಂಡನಾಯೋಗದೊಳ್ ನಟಿಯ ಪಣ್ಯದ ಮದಾಂಧಸಿಂಧುರಮನೇಜಲ್ ತರಿಸಿಕೊಟ್ಟು ಬೀಡಿಂಗೆ ಪೊಗನ ಪೋಗೆ ಹಸಿಯ ಬೆಂಗವಂದು ಸುತ್ತಿದು ಪಗಲ೦ ತಡವಿಕಿದಂತೆ ಬೆಳಗುವ ಕೆಯೀವಿಗೆಗಳ ಬೆಳಗೆ ಬೆಳಗಾಗೆ ತಲೆಯೊಳ್ ನಾಲಗೆಯುಳ್ಳ ಬೂತುಗಳೆಲ್ಲ ಮಿಲ್ಲೆನ್ನದೀಯುತ್ತುಂ ನಿಜನಿವಾಸಕ್ಕೆ ತಂದು ನಿತ್ಯದಾನಕ್ಕೆಂದು ನಿಯೋಗಿಗಳ ತಂದು ಪುಂಜಿಸಿದ ಪಂಚರತ್ನದ ಪೊನ್ನರಾಶಿಗಳನರ್ಥಿ ಜನಕ್ಕೆ ಗೋಸನೆಯಿಟ್ಟು ಕುಡುವೆಟ್ಟು ನಾಯಕರ್ಗೆಲ್ಲಮುಡಲು ತುಡಲುಂ ಕೊಟ್ಟು ನೇಸಮ್ ಮೂಡುವಾಗ ತಮ್ಮ ಪಡೆಯನೀ ಮಾಯೆಯೊಳೊಡ್ಡಿಯೆಂದು ಪಡವಳರ್ಗ ಬೆಸಸಿ ನಿಜವಿಜಯತುರಗರಥಂಗಳನರ್ಚಿಸಿ ಪೊಡೆವಟ್ಟು ದರ್ಭಾಸರಣ ದೂಳಾಯಿರುಳಂ ಕಳೆದಾಗ
ಪೀಠದಲ್ಲಿ ಕುಳ್ಳಿರಿಸಿ ೫೨. ತಮಟೆಗಳು ಭೋರೆಂದು ಒಂದೇ ಸಮನಾಗಿ ಶಬ್ದಮಾಡುತ್ತಿರಲು ಮಂಗಳಗೀತೆಗಳು ಕೂಡಿರಲು ವೇಶೈಯರ ಸಮೂಹವು ಬಂದು ನೃತ್ಯಮಾಡುತ್ತಿರಲು ಕೌರವಶ್ರೇಷ್ಠನಾದ ದುರ್ಯೋಧನನು ಪುಣ್ಯತೀರ್ಥಗಳನ್ನು ತರಿಸಿ ಕರ್ಣನಿಗೆ ಸ್ನಾನಮಾಡಿಸಿ ಆಗ ತಾನೆ ತನ್ನ ಕಮ್ಮಿಂದಲೆ ವೀರಪಟ್ಟವನ್ನು ಹಣೆಗೆ ಕಟ್ಟಿದನು. ವ|| ಹಾಗೆ ಆ ವೀರಪಟ್ಟವು ಆ ವೀರನ ಹಣೆಯಲ್ಲಿ ಅತಿಶಯವಾಗಿ ಪ್ರಕಾಶಿಸಿ ವಿಶೇಷಾಶ್ರಯವನ್ನು ಪಡೆಯುವಂತೆ ಕಟ್ಟಿ ತನ್ನ ಅಂತಃಪುರ ಪರಿವಾರದೊಡನೆ ಕೂಡಿ ಅಕ್ಷತೆಯಿಂದ ಹರಸಿ ತಾನು ತೊಡುವ ಆಭರಣಗಳನ್ನೆಲ್ಲವನ್ನೂ ಅವನಿಗೆ ತುಂಬ ತೊಡಿಸಿದನು. ದೇವತೆಗಳ ಅಳತೆಯಲ್ಲಿ ಹದಿನೆಂಟುಕೋಟಿ ಸುವರ್ಣವನ್ನು ತರಿಸಿಕೊಟ್ಟನು. ರತ್ನಖಚಿತವಾದ ಅಲಂಕಾರಗಳಿಂದ ಪೂರ್ಣವಾಗಿ ಸಿದ್ಧಪಡಿಸಿದ ಮದ್ದಾನೆಯನ್ನು ಏರುವುದಕ್ಕೆ ತರಿಸಿಕೊಟ್ಟು ಬೀಡಿಗೆ ಹೋಗು ಎಂದು ಕಳುಹಿಸಿ ಕೊಟ್ಟನು. ಕರ್ಣನು ಆನೆಯ ಬೆನ್ನಿಗೆ ಸುತ್ತಲೂ ವ್ಯಾಪಿಸಿ ಹಗಲನ್ನು ದೊಡ್ಡದು ಮಾಡಿದ ಹಾಗೆ ಬೆಳಗುತ್ತಿರುವ ಕೈದೀವಟಿಗೆಗಳ ಬೆಳಕೇ ಬೆಳಕಾಗಿರಲು ತಲೆಯಲ್ಲಿ ನಾಲಗೆಯಿರುವ ಎಲ್ಲ ಪ್ರಾಣಿಗಳಿಗೂ ಇಲ್ಲ ಎನ್ನದೆ ದಾನಮಾಡುತ್ತ ತನ್ನ ಮನೆಗೆ ಬಂದನು. ನಿಯೋಗಿಗಳು ತಂದು ರಾಸಿ ಹಾಕಿಸಿದ ಪಂಚರತ್ನದ ಮತ್ತು ಚಿನ್ನದ ರಾಶಿಗಳನ್ನು ಬೇಡುವವರಿಗೆ ಕೂಗಿ ಕರೆದು ದಾನಮಾಡಹೇಳಿ ನಾಯಕರುಗಳಿಗೆಲ್ಲ ಉಡುವುದಕ್ಕೂ ತೊಡುವುದಕ್ಕೂ ಕೊಟ್ಟು ಸೂರ್ಯೊದಯವಾದಾಗ ನಮ್ಮ ಸೈನ್ಯವನ್ನು ಈ ರೀತಿಯಲ್ಲಿ ರಚಿಸಿ ಎಂದು ನಾಯಕರಿಗೆ ಆಜ್ಞೆ ಮಾಡಿ ತನ್ನ ವಿಜಯಶಾಲಿಯಾದ ಕುದುರೆ ಮತ್ತು ತೇರುಗಳನ್ನು ಪೂಜೆ ಮಾಡಿ ನಮಸ್ಕರಿಸಿ ದರ್ಭಾಸನದಲ್ಲಿ ಆ