________________
೫೭೮ / ಪಂಪಭಾರತಂ
ಕಂ
ನೋಡಿ
ನೆಗಟ್ಟಿ ಕಲಿತನದ ಜಾಗದ ಬಗೆ ತನ್ನೊಳ್ ನೆಗಟಿವತ್ತು ನೆಗಟ್ಟಿರೆ ಸಂದಂ | ಗಗಣಿತ ಗುಣಂಗೆ ಕರ್ಣಂ
ಗೊಗಸುಗುಮೇ ಕಟ್ಟು ಬೀರವಟ್ಟಮನರಸಾ ||
ಚಂ।।
೪೯
ರಥ ಯಾನಪಾತ್ರದಿಂ ಪರ
ರಥಿನೀ ಜಳನಿಧಿಯ ಪಾರಮಂ ಸಲ್ವ ಜಗ | ತಥಿತ ಭುಜದರ್ಪದಿಂದತಿ
ರಥಮಥನಂ ಕರ್ಣಧಾರನಲ್ಲನೆ ಕರ್ಣಂ ||
ವ|| ಎಂದು ನುಡಿದ ಕೃಪನ ಮಾತಂ ನೃಪಂ ಮನದಗೊಂಡು ಕರ್ಣನ ಮೊಗಮಂ
೫೦
ನಡುಗುವುದುಂತೆ ಪಾಂಡವ ಬಲಂ ನಿನಗರ್ಜುನನೆಂಬನೆಂದುಮು ಕುಡುಗಿ ಸುರುಳನೀಯೆಡೆಗೆ ಪೇ ಪೆರಾರ್ ದೊರೆ ವೀರಪಟ್ಟಮಂ | ತಡೆಯದೆ ಕಟ್ಟಿ ವೈರಿಗಳ ಪಟ್ಟನೆ ಪಾಕಿಸಿ ಕಾವುದನ್ನ ಬೆ
ಳೊಡೆಯುಮನೆನ್ನ ಪಟ್ಟಮುಮನನ್ನುಮನಂಗಮಹೀತಳಾಧಿಪಾ || ೫೧
ವ|| ಎಂಬುದುಮಂಗಾಧಿರಾಜಂ ನಿನ್ನಾಳಳೊಳಾನಾರ ದೊರೆಯೆನಗೆ ಕಾರುಣ್ಯಂ ಗೆಯ್ದೆಯಾಗಿ ಬೆಸಸಿದ ನಿನ್ನ ದಯೆಗೆಯ್ದ ವೀರವಟ್ಟಮೆಂಬುದನಗೆರಲ ಪಟ್ಟಮೆಂಬುದುಂ ಬದ್ದವಣಂ ಬಾಜಿಸಿ ಕರ್ಣನಂ ಕನಕಪೀಠದೊಳ್ ಕುಳ್ಳಿರಿಸಿ
ಮಲ್ಲಯುದ್ಧದಲ್ಲಿ ಹಿಡಿದು ಕಾಲಿನ ಕೆಳಕ್ಕೆ ಅಮುಕಿದ ಭುಜಬಲವನ್ನುಳ್ಳ ಭೀಮನನ್ನು ಗೆದ್ದ ಸಾಹಸವೂ ನಮ್ಮ ಸೈನ್ಯವನ್ನೆಲ್ಲ ತುಳಿದು ತುಳಿದು ಕೊಲ್ಲುತ್ತಿದ್ದ ಘಟೋತ್ಕಚನೆಂಬ ಕ್ರೂರರಾಕ್ಷಸನನ್ನು ಕೊಂದ ವೀರ್ಯವೂ ಲೋಕದ ಒಳಗೂ ಹೊರಗೂ ಪ್ರಸಿದ್ಧವಾಗಿವೆ. ೪೯. 'ಪ್ರಸಿದ್ಧವಾದ ಶೌರ್ಯದ ತ್ಯಾಗದ ರೀತಿಗಳೆರಡೂ ಅವನಲ್ಲಿ ಖ್ಯಾತಿಗೊಂಡಿವೆ. ಅಸಂಖ್ಯಾತಗುಣಗಳಿಂದ ಕೂಡಿದ ಕರ್ಣನಿಗೆ ಇದು ಅತಿಶಯವೇ ? ರಾಜನೇ ಅವನಿಗೆ ವೀರಪಟ್ಟವನ್ನು ಕಟ್ಟು. ೫೦. ರಥವೆಂಬ ನಾವೆಯಿಂದ ಶತ್ರುಸೇನಾಸಮುದ್ರದ ಆಚೆಯ ದಡವನ್ನು ತನ್ನ ಭುಜಬಲದಿಂದ ದಾಟಿಸಬಲ್ಲ ಶೂರನಾದ ಕರ್ಣಧಾರನಲ್ಲವೇ ಕರ್ಣ! ವ|| ಎಂದು ಹೇಳಿದ ಕೃಪನ ಮಾತನ್ನು ರಾಜನು ಒಪ್ಪಿ ಕರ್ಣನ ಮುಖವನ್ನು ನೋಡಿ-೫೧ 'ಕರ್ಣಾ! ಪಾಂಡವಸೈನ್ಯವು ಸುಮ್ಮನೆ ನಿನಗೆ ನಡುಗುತ್ತದೆ. ಅರ್ಜುನನೆಂಬುವನು ಯಾವಾಗಲೂ ಉತ್ಸಾಹಶೂನ್ಯನಾಗಿ ಮುದುರಿಕೊಳ್ಳುತ್ತಾನೆ. ಈ ಸ್ಥಾನಕ್ಕೆ ಮತ್ತಾರು ಅರ್ಹರು ? ಹೇಳು. ವೀರಪಟ್ಟವನ್ನು ತಡಮಾಡದೆ ಕಟ್ಟಿಕೊಂಡು ವೈರಿಗಳನ್ನು ಪಟ್ಟನೆ ಹಾರಿಹೋಗುವಂತೆ ಮಾಡಿ ನನ್ನ ಶ್ವೇತಚ್ಛತ್ರವನ್ನೂ ನನ್ನ ರಾಜಪಟ್ಟವನ್ನೂ ನನ್ನನ್ನೂ ಕಾಪಾಡಬೇಕು.' ವ|| ಎನ್ನಲು ಕರ್ಣನು ದುರ್ಯೋಧನಾ! ನಿನ್ನ ಸೇವಕರಲ್ಲಿ ನಾನು ಯಾರಿಗೆ ಸಮಾನ ? ನೀನು ಕರುಣೆಯಿಂದ ದಯಮಾಡಿ ಆಜ್ಞೆಮಾಡಿಕೊಟ್ಟ ಈ ವೀರಪಟ್ಟವೆಂಬುದು ನನ್ನ ಎಂಟುಬೆರಳಿನಗಲವಿರುವ ನನ್ನ ಹಣೆಗೆ ಕಟ್ಟುವ ಪಟ್ಟ ಎಂದನು. ಮಂಗಳವಾದ್ಯವನ್ನು ಬಾಜಿಸಿ ಕರ್ಣನನ್ನು ಚಿನ್ನದ