________________
ದ್ವಾದಶಾಶ್ವಾಸಂ | ೫೮೧
ವ|| ಎಂಬುದುಂ ಕುರುಪಿತಾಮಹನಹರ್ಪತಿಸುತನನಿಂತೆಂದಂ
ಅನವದ್ಯಂ || ನುಡಿವುದಂ ಪತಿಭಕ್ತಿಯ ಪಂಪಿಂ ನೀಂ ನುಡಿದ ಪೆಜತಂದದಿಂ ನುಡಿದೆಯ ಮದಾಯಮಮೋಘಂ ಸೂಳ್ಕೊಡೆಯನಗಕ್ಕುಮಿ | ನ್ನೆಡೆಯೊಳೆಂದಮದೆಂದುದದೇಂ ತಪ್ಪಾದುದೆ ನಮ್ಮೋವಜ ಜಸಂ ಬಡದ ಭಾರ್ಗವರಪುದಂದಂ ನಂಟರುಮಂಗಮಹೀಪತೀ ||
ವ|| ಅದಲ್ಲದೆಯುಂ ನೀನೆಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮನಿನ್ನನ ನಚ್ಚಿದಂ ಕುರುಮಹೀಪತಿ ನಿನ್ನ ಶರಾವಳಿಗಳ ಮು
ಉ||
ನನ್ನಡುಗುತ್ತುಮಿರ್ಪುದರಿಸಾಧನಸಂಪದಮಂತೆ ಶಸ್ತ್ರ ಸಂ | ಪನ್ನನೆ ಆಗಿ ಶಲ್ಯನನ ಸಾರಥಿಯಾಗಿರೆ ಮಾಡಿ ಕಾದು ನೀಂ
ನಿನ್ನಯ ಬಲ್ಲ ಮಾಯೊಳಿದಂ ನುಡಿದಂ ನಿನಗಂಗವಲ್ಲಭಾ || 982
ಕಂ
ಎನೆ ನೆಗಟ್ಟಿ ಕುಲದ ಚಲದೊ
ಜೈನ ಭೂಪನನನಗೆ ತೇರನೆಸಗೆಂದೊಡೆ ಸ |
ದ್ವಿನಯಮುಟ್ಟಿದುರ್ಕಿ ಕುಲಹೀ
ನನೆಂಬ ಪರಿವಾದಮಿಗಳೆನಗಾಗಿರದೇ II
ಆಯದ ಕಟ್ಟಾಳ್ ನೀಂ ಮೊದ
ಲೀ ಯುಗದೊಳ್ ಪರುಳರ ಸಾವಕ್ಕೆ ಜಯ | ಶ್ರೀಯಕ್ಕೆ ಧಾತ್ರನಿಂ ಕ
ಟ್ಯಾಯದ ಬಡೆಸಂದು ನಿಮ್ಮನಾಂ ಮೆಚ್ಚಿಸುವಂ
と
Res
೫೯
ನನ್ನ ಛಲವನ್ನೇ ಪ್ರಕಾಶಪಡಿಸುತ್ತೇನೆ. ವ|| ಎನ್ನಲು ಕುರುಪಿತಾಮಹನಾದ ಭೀಷ್ಮನು ಸೂರ್ಯಪುತ್ರನಾದ ಕರ್ಣನಿಗೆ ಹೀಗೆಂದನು. ೫೬. ಹೇಳುವುದನ್ನು ನೀನು ಸ್ವಾಮಿ ಭಕ್ತಿಯ ಆಧಿಕ್ಯದಿಂದ ಹೇಳಿದ್ದೀಯೆ, ಬೇರೆ ರೀತಿಯಿಂದ ನುಡಿಯಲಿಲ್ಲ: 'ನನ್ನ ಶಕ್ತಿಯು ಬೆಲೆಯಿಲ್ಲದ್ದು, ಸರದಿಯನ್ನು ಪಡೆಯುವುದಕ್ಕೆ ಈ ಸನ್ನಿವೇಶದಲ್ಲಿ ನನಗೂ ಅವಕಾಶವುಂಟು' ಎಂದು ಹೇಳುವುದು ತಪ್ಪಾದುದೇನು? ನಮ್ಮಿಬ್ಬರ ಉಪಾಧ್ಯಾಯರಾಗಿದ್ದವರು ಯಶಶಾಲಿಗಳಾದ ಪರಶುರಾಮರಾದುದರಿಂದ ಕರ್ಣ, ನಾವು ನಂಟರೂ ಆಗಿದ್ದೇವೆ. ವ|| ಅಷ್ಟೇ ಅಲ್ಲದೆ ನೀನು ನಮಗೆ ಕುಂತಿ ಮತ್ತು ಗಾಂಧಾರಿಯರ ಮಕ್ಕಳಾದ ಪಾಂಡವ ಕೌರವರ ಹಾಗೆಯೇ ಮೊಮ್ಮಗನಪ್ಪ. ೫೭. ಕೌರವ ಮಹಾರಾಜನು ನಿನ್ನನ್ನೇ ನಂಬಿದ್ದಾನೆ. ನಿನ್ನ ಈ ಬಾಣಗಳ ಸಮೂಹಕ್ಕೆ ಶತ್ರುಸಾಧನಸಂಪತ್ತೆಲ್ಲ ಮೊದಲೇ ನಡುಗುತ್ತಿದೆ. ಹಾಗೆಯೇ ಆಯುಧಸಂಪತ್ತುಳ್ಳವನಾಗಿ ಶಲ್ಯನನ್ನೇ ಸಾರಥಿಯನ್ನಾಗಿರುವಂತೆ ಮಾಡಿಕೊಂಡು ನಿನಗೆ ತಿಳಿದ ರೀತಿಯಲ್ಲಿ ಯುದ್ಧಮಾಡು ಕರ್ಣ, ಇದು ನನ್ನ ಸೂಚನೆ, ಅಷ್ಟೆ, ೫೮. ಎನ್ನಲು ಒಳ್ಳೆಯ ಕುಲವನ್ನೂ ಚಲವನ್ನೂ ಉಳ್ಳ ರಾಜನಾದ ಶಲ್ಯನನ್ನು ನನಗೆ ಸಾರಥಿಯಾಗಿರು ಎಂದು ಹೇಳಿದರೆ ಉಚಿತವಾದ ವಿನಯವನ್ನು ಬಿಟ್ಟು ಗರ್ವಿಸಿ ನುಡಿದ ಹೀನಕುಲದವನೆಂಬ ಅಪವಾದವು ಈಗ ನನಗೆ ತಟ್ಟುವುದಿಲ್ಲವೆ? ೫೯. ಈ ಯುಗದ ಶಕ್ತಿಯುತರಾದವರಲ್ಲಿ ನೀವು ಮೊದಲಿಗರು. ಬೇರೆಯವರಿದ್ದಾರೆಯೇ? ಸಾವಾಗಲಿ