________________
ದ್ವಾದಶಾಶ್ವಾಸಂ | ೫೭೧ ವಗ ಅಂತು ದ್ರೋಣನೆಳೆಗೋಣ ಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮನೊಂದು ತಲೆಯಾಗೊಡುವ ಕೌರವಧ್ವಜಿನಿಯುಮಂ ಚೇತೋಂದು ಮೊನೆಯೊಳ್ ಕಾದುತಿರ್ದಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಕ್ಕೋಪಲಕ್ಷಿತ ನಿಜ ಪಿತೃ ಸೂತ ಕೇತನ ಕಥಿತಮಾಗಿರ್ದ ರಥಮನುಪಲಕ್ಷಿಸಿ ನೋಡಿ ತಮ್ಮಯ್ಯನತೀತನಾದುದನಳೆದುಚಂll ಒಳಿತುಗುತರ್ಪ ಕಣ್ಣನಿಗಳಂ ಬರಲೀಯದೆ ಕೋಪ ಪಾವಕಂ
ನಿಸಿ ಕನಲು ರೋಷದಿನಪಾಂಡವಮಾಗಿರೆ ಮಾಡದಂದು ಬಿ | ಛತೆಯನ ಪುತ್ರನನೆನುತುಂ ಗುರುಪುತ್ರನಿದಿರ್ಚೆ ಭೀತಿಯಿಂ
ಮುಗಿ ತೆರಳು ತೂಲ್ಲಿ ಸುಟೆಗೊಂಡುದು ಪಾಂಡವ ಸೈನ್ಯಸಾಗರಂ || ೩೧
ವ|| ಆಗಳುರಿಯುರುಳಿಯಂತಪ್ಪ ತನ್ನ ನೊಸಲ ಕಣ್ಣಂ ತೋಟಿ ತನ್ನ ಸಾಹಸಮಂ ತೋಜಲೆಂದು ನಾರಾಯಣಾಸ್ತಮಂ ತೊಟ್ಟೆಚ್ಚಾಗಳ- ಚಂದೆಸೆ ಮಸುಳ್ಳು ವಾರ್ಧಿ ತಳರ್ದತ್ತು ನೆಲಂ ಪಿಡುಗಿತ್ತು ತೊಟ್ಟನಾ
ಗಸರೊಡೆದತ್ತಜಾಂಡಮಳಕಿನುತಿರ್ದೆಡೆಯಲ್ಲಿ ಲೋಕಮಂ | ಬಸಿನೊಳಗಿಟ್ಟು ಕಾದಳವನಾರಳವೊಡ್ಡಿಸೆ ಕಾದನಾಗಳ ರ್ವಿಸೆ ತೆಗೆದಚ್ಚ ವೈಷ್ಣವಮನೊಡ್ಡಿಸಿ ವೈಷ್ಣವದಿಂ ಮುರಾಂತಕಂ || ೩೨ |
ಹೊಡೆದನು. ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು? ವll ಹಾಗೆ ದ್ರೋಣನು ಎಳೆದು ತಂದ ಕೋಣನ ಸಾವಿನ ಮಾದರಿಯ ಸಾವನ್ನು (ಎಳಗೋಣಸಾವು) ಸಾಯಲಾಗಿ ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ ಒಂದೇದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿದನು. ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ ತೇರನ್ನು ದೃಷ್ಟಿಸಿ ನೋಡಿ ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದನು. ೩೧. ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು ಕೋಪಾಗ್ನಿಯು ಉಜ್ವಲವಾಗುತ್ತಿರಲು ರೇಗಿ ಕೋಪದಿಂದ 'ಪ್ರಪಂಚ ವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ ನಾನು ಚಾಪಾಚಾರ್ಯನ ಮಗನೇ ಅಲ್ಲ' ಎನ್ನುತ್ತ ಅಶ್ವತ್ಥಾಮನು ಎದುರಿಸಲು ಪಾಂಡವಸೇನಾಸಮುದ್ರವು ಭಯದಿಂದ ದುಃಖಪಟ್ಟು ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು. ವ|| ಆಗ ಉರಿಯ ಉಂಡೆಯ ಹಾಗಿದ್ದ ತನ್ನ ಹಣೆಗಣ್ಣನ್ನು ತೋರಿ ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತವನ್ನು ಪ್ರಯೋಗಿಸಿದನು. ೩೨. ದಿಕ್ಕುಗಳು ಮಾಸಲಾದುವು, ಸಮುದ್ರಗಳು ಚಲಿಸಿದುವು, ಭೂಮಿಯು ಸಿಡಿಯಿತು, ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು ಎನ್ನುತ್ತಿದ್ದ ಸಮಯದಲ್ಲಿ ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ ಶ್ರೀಕೃಷ್ಣನು, ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು