________________
೨೮
೫೭೦) ಪಂಪಭಾರತಂ
ಒಗದ ಸುತಶೋಕದಿಂದಾ ವಗೆಯಂತೂಳಗುರಿಯ ಭೋಂಕನೆರ್ದೆ ತಯಲ್ ಹಾ | ಮಗನೇ ಎಂದಶ್ರುಜಲಾ
ರ್ದಗಂಡನಾ ಗಂಡಿನೊಡನೆ ಬಿಸುಟಂ ಬಿಲ್ಲಂ ವ|| ಅಂತು ಬಿಸುಟು ವಿಚ್ಚಿನ್ನ ವೀರರಸನುಮುತ್ತನ್ನ ಶೋಕರಸನುಮಾಗಿ ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕುಯ್ದು ಮಗನ ಮಾತಂಚ೦ll ಬೆಸಗೊಳೆ ಕುಂಜರಂ ಮಡಿದುದೆಂದು ಮಹೀಭುಜನುಳ್ಳ ಮಾಚಿಯಿಂ
ಪುಸಿಯದ ಪೇಡಂ ಕಿಟೆದು ನಂಬದೆಯುಂ ರಣದಲ್ಲಿ ಮುನ್ನ ಬಿ | ಲೈಸುಟೆನಿದೆಂತು ಪೇಯ್ ಪಿಡಿವನಿನ್ನಿದನೆಂದಿರದಾತ್ರಯೋಗಿ ತ
ಸುವನುದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ || ೨೯ ವ ಅಂತು ಭಾವಿತಾತನಧ್ಯಾತ್ಮ ವಿಶಾರದನಾಗಿ ಪರಮಾತ್ಮನೋಳ್ ಕೂಡಿದನಾಗಳ್ ಹೆಣನನಿದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ ತಮ್ಮಯ್ಯಂ ಸತ್ತ ಮುಳಿಸಿಕೊಳ್ ಕಣ್ಣಾಣದೆ ಧೃಷ್ಟದ್ಯುಮ್ಮಂ ಧರ್ಮತನೂಜಂ ಬಾರಿಸೆ ವಾರಿಸೆಕoll ಕರವಾಳಂ ಘರವಟ್ಟಿಸಿ
ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂ | ತಿರ ಪಿರಿದು ಪೊಯ್ಯನೆಂತ ಪ್ಲರೊಳಂ ಮುಳಿಸಳವನಾಗಲೇನಿತ್ತಪುದೇ ||
(ನಾಮಸಾದೃಶ್ಯದಿಂದ) ಮಗನಾದ ಅಶ್ವತ್ಥಾಮನೆಂದೇ ಭಾವಿಸಿ ದುಃಖಿಸಿದನು. ೨೮. ಉಂಟಾದ ಪುತ್ರಶೋಕದಿಂದ ಕುಂಬಾರರ ಆವುಗೆಯ ಒಲೆಯಂತೆ ಮನಸ್ಸು ಉರಿಯಲು ಇದ್ದಕ್ಕಿದ್ದ ಹಾಗೆ ಎದೆಯು ಬಿರಿಯಲು “ಅಯ್ಯೋ ಮಗನೆ' ಎಂದು ಕಣ್ಣೀರಿನಿಂದ ತೊಯ್ದು ಕೆನ್ನೆಯುಳ್ಳವನಾಗಿ ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು. ವ! ಕತ್ತಿಯನ್ನೆಸೆದು ವೀರರಸವಿರಹಿತನಾಗಿ ದುಃಖರಸದಿಂದ ಕೂಡಿ ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ ಮಾತನ್ನು ೨೯. (ವಾಸ್ತವಾಂಶವೇನೆಂದು) ಪ್ರಶ್ನೆಮಾಡಲು ಆನೆಯು ಸತ್ತಿತೆಂದು ರಾಜನು. (ಸತ್ಯವಾಗಿ) ಇರುವ ರೀತಿಯಲ್ಲಿಯೇ ಹುಸಿಯದೆ ಹೇಳಿದರೂ ಸ್ವಲ್ಪವೂ ನಂಬದೆ “ಯುದ್ದದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನಃ ಅದನ್ನು ಹೇಗೆ ಹಿಡಿಯಲಿ ಹೇಳು” ಎಂದು ಆತ್ಮಯೋಗಿಯಾದ ದ್ರೋಣನು ಸಾವಕಾಶಮಾಡದೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು. ವ|| ಹಾಗೆ ಆತ್ಯಧ್ಯಾನಪರನಾದ ದ್ರೋಣನು ಅಧ್ಯಾತಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದನು. ಆಗ 'ಹೆಣವನ್ನು ಕತ್ತರಿಸಿ ಹಗೆಯನ್ನು ತೀರಿಸಿಕೊಂಡರು' ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ ತಮ್ಮಯ್ಯನಾದ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ ಧೃಷ್ಟದ್ಯುಮ್ಮನು ಧರ್ಮರಾಜನು ಬೇಡವೆಂದು ತಡೆದರೂ-೩೦. ಕತ್ತಿಯನ್ನು ಬೀಸಿ ಕೂದಲನ್ನು ಹಿಡಿದೆಳೆದು ಗುರುವನ್ನು ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ