________________
ದ್ವಾದಶಾಶ್ವಾಸಂ | ೫೬೯ ಮll ಸಕಲಾರಾತಿ ನರೇಂದ್ರಮೌಳಿಗಳುರುಳ್ಳಾ ದೀಪ್ತ ರತ್ನಾಂಶು ಮಾ
ಆಕೆಯಿಂದಾ ರಣರಂಗಮಂ ಬೆಳಗೆ ಕಾರ್ಚೆಂದು ಭೂತಾಂಗನಾ | ನಿಕರಂ ಶೋಣಿತವಾರಿಯಂ ಕುಡಿದಗುರ್ವಪನ್ನೆಗಂ ಸೂಸೆ ನೋ
ಡ ಕವಿಲಿರ್ದುದು ಕೂಡ ಸಂಜೆಗವಿದಂತಾ ದ್ರೋಣನಿಂ ಕೊಳ್ಳುಳಂ | ೨೫
ವ|| ಆಗಳ್ ಯುಧಿಷ್ಠಿರಂ ನಾರಾಯಣಂ ಪೇಟ್ಟಿ ಕಪಟೋಪದೇಶದಿಂ ದ್ರೋಣನಂ ಕೆಯ್ಕೆ ಮಾಡಲೆಂದು ಪಾಂಡ್ಯ ಗಜಘಟೆಗಳನಿದಿರೊಳ್ ತಂದೊಡ್ಡಿದಾಗಕಂಗ ನಿಶಿತ ವಿಶಿಖಂಗಳಿಂದೂಂ
ದಶನಿಯ ಗಿರಿಕುಲಮನಳಚುವಂತೆ ಮದೇಭ | ಪ್ರಸರ ಸಹಸ್ರಂ ಕೆಡುವು ಎಸಸನದೊಳ್ ದೊಣನಿದಿರ್ಗೆ ಮಾರ್ವಲಮೋಳವೇ ||
ವಗ ಅಂತು ತನಗೆ ಮಾಜಾಂತ ಮದಾಂಧಸಿಂಧುರಂಗಳಂ ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ ಕೊಲೆಕಂl ಸಾಮಜಮಶ್ವತ್ಥಾಮಂ
ನಾಮದಿ ನೊಂದಣಿದೊಡಲ್ಲಿ ಕಂಡು ಹತೋಶ್ವ | ತಾಮಾ ಎನೆ ನೃಪನಶ್ವ ತ್ಥಾಮನೆ ಗೆತ್ತೊಣರ್ದನೊವಜನೊರ್ವೆಸರಿಭಮಂ 11
ಪ್ರತಿಭಟಿಸುವವರಾರೂ ಇಲ್ಲದಂತೆ ಸಂಹರಿಸಿ ಗೆದ್ದ ಜಟ್ಟಿಯಿದ್ದಂತೆ ಇದ್ದನು. ೨೫. ಸಮಸ್ತ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಸಮೂಹದಿಂದ ಆ ರಣರಂಗವು ಕೆಂಪಗೆ ಪ್ರಕಾಶಮಾನವಾಯಿತು. ಅದು ಕಾಡಿಚ್ಚೆಂದು ಪಿಶಾಚಸ್ತ್ರೀಯರ ಸಮೂಹವು ಬಂದು ರಕ್ತಜಲವನ್ನು ಕುಡಿದು ಭಯಂಕರವಾಗುವ ಹಾಗೆ ಚೆಲ್ಲಾಡಿತು. ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪುಬಣ್ಣದಿಂದ ಕೂಡಿದ್ದಿತು. ವ| ಆಗ ಧರ್ಮರಾಜನು ಕೃಷ್ಣನು ಹೇಳಿದ ಕಪಟೋಪದೇಶದಿಂದ ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು ಪಾಂಡ್ಯರ ಆನೆಗಳ ಸಮೂಹವನ್ನು ಎದು ರಾಗಿ ತಂದೊಡ್ಡಿದನು. ೨೬. ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಕೆಡೆದುಬಿದ್ದುವು. ದ್ರೋಣನಿಗಿದಿರಾಗುವ ಪ್ರತಿಬಲವುಂಟೇ? ವll ಹಾಗೆ ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು ಸಿಂಹವು ಕೊಲ್ಲುವ ಹಾಗೆ ಕೊಂದನು. ೨೭. ಅಶ್ವತ್ಥಾಮನೆಂಬ ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಧರ್ಮರಾಯನು ನೋಡಿ 'ಹತೋಶ್ವತ್ಥಾಮ' (ಅಶ್ವತ್ಥಾಮ ಹತನಾದನು) ಎಂದು ಘೋಷಿಸಿದನು. ಗುರುವಾದ ದ್ರೋಣನು ಒಂದೇ ಹೆಸರಿನ ಆನೆಯನ್ನು