________________
೫೬೮ | ಪಂಪಭಾರತಂ
ವll ಮೆಯ್ಯರ್ಚಿ ಪೆರ್ಚದುಮ್ಮಚರದೊಳಚ್ಚರಿಯಾಗಚೂಡ ಪೂಣ್ಮರ್ತುಉll ಎನ್ನೊಳೆ ಮುನ್ನ ಮಚ್ಚರಿಪನೇ ಒಡನೋದಿದನೆಂಬ ಮೇಳದಿಂ
ದೆನ್ನನೆ ಮೆಚ್ಚನನ್ನೊಳಮಿವಂ ಸಮನೆಚ್ಚಪನಕುಮಾದೊಡೇ | ನಿನ್ನವನಂ ಪಡಲ್ವಡಿಹೆನೆಂದಿರದಾಗಳೆ ಭಾರ್ಗವಾಸ್ತದಿಂ
ದನ್ನೆದೆಚ್ಚನಾ ದ್ರುಪದರಾಜಶಿರೋಂಬುಜಮಂ ಘಟೋದ್ಭವಂ | ೨೩
ವ|| ಅಂತು ದ್ರುಪದನವಂ ಕಂಡಾತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಮಯ್ಯರ್ ಕೈಕಯರುಂ ಕುಂತಿಯ ಮಾವನಪ್ಪ ಕುಂತಿಭೋಜನುಂಬೆರಸು ಹದಿನಾಲ್ಕಾಸಿರ ರಥಂಬೆರಸು ಬಂದು ತಾಗಿದೊಡೆಮll ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದನೇಕೊಗ್ರ ಸಾ
ಯಕದಿಂದಂ ಚತುರಂಗ ಸಾಧನದ ಮಯ್ಯೊಳ್ ಜಿಗಿಲ್ಲಾಂತ ನಾ || ಯಕರಂ ಸುಂಟಗೆಯಾದಂತೆ ರಥದೊಳ್ ಜೋಲ್ಡನ್ನೆಗಂ ಕೋದು ಚಾ
ಪ ಕಲಾಕೌಶಳಮಂ ಜಗಕ್ಕೆ ಮದಂ ಮಯ್ಯರ್ಚಿ ಕುಂಭೋದ್ಭವಂ ||೨೪ - ವ|| ಅಂತು ದ್ರುಪದ ದ್ರುಪದಾನುಜ ವಿರಾಟ ವಿರಾಟಾನುಜ ಕೈಕಯ ಕುಂತಿ ಭೋಜದಿಗಳಪ್ಪ ನಾಯಕರೆಲ್ಲರುಮಂ ಪೇಟೆ ಪಸರಿಲ್ಲದಂತೆ ಕೊಂದು ಮುಂದಾಂಪರಾರುಮಿಲ್ಲದಿಕ್ಕಿ ಗೆಲ್ಲ ಮಲ್ಲನಿರ್ದಂತಿರ್ದಾಗಳ
ಹೊಡೆದು ಎದುರಿಗೆ ನಿಲ್ಲಬೇಡ ಓಡು ಸತ್ತೆ ಎನ್ನುತ್ತ ಪಾಂಚಾಳರಾಜಾಧೀಶ್ವರನಾದ ದ್ರುಪದನು ವ|| ಕೊಬ್ಬಿ ಹೆಚ್ಚಿದ ಕೋಪದಲ್ಲಿ ಆಶ್ಚರ್ಯವಾಗುವಂತೆ ಹೊಡೆಯಲು ದ್ರೋಣನು ಗಾಯಗೊಂಡು ೨೩. ಇವನು ಮೊದಲಿನಿಂದಲೂ ನನ್ನಲ್ಲಿ ಮತ್ಸರಿಸುತ್ತಾನೆ. ಜೊತೆಯಲ್ಲಿ ಓದಿದೆನು ಎಂಬ ಸಲಿಗೆಯಿಂದ ನನ್ನನ್ನು ಮೆಚ್ಚಲಾರ; ನನ್ನ ಸಮಾನನಾಗಿಯೇ ಯುದ್ದಮಾಡುವ ಶಕ್ತಿಯುಳ್ಳವನೇನೋ ಹೌದು; ಆದರೇನು ? ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ ಭಾರ್ಗವಾಸದಿಂದ ಕೂಡಿಕೊಂಡು ದ್ರುಪದ ರಾಜನ ತಲೆಯೆಂಬ ಕಮಲವನ್ನು ದ್ರೋಣನು ಕತ್ತರಿಸಿದನು. ವ| ಹಾಗೆ ದ್ರುಪದನ ಸಾವನ್ನು ನೋಡಿದ ಆತನ ತಮ್ಮಂದಿರಾದ ಶತಾನೀಕ ಶತಚಂದ್ರರೇ ಮೊದಲಾದ ಹನ್ನೊಂದು ಜನವೂ ಅಯ್ತು ಮಂದಿ ಕೈಕೆಯರೂ ಕುಂತಿಯ ಮಾವನಾದ ಕುಂತಿಭೋಜನೂ ಕೂಡಿ ಹದಿನಾಲ್ಕು ಸಾವಿರರಥದೊಡನೆ ಬಂದು ತಾಗಿದರು. ೨೪. ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ ಒಂದೊಂದು ಮೆಯ್ಯಲ್ಲಿಯೂ ಅಂಟಿಕೊಂಡು, ಪ್ರತಿಭಟಿಸಿದ ನಾಯಕರ, ಸೇನಾಪತಿಗಳ ಸುಟ್ಟಮಾಂಸವನ್ನು ಆರಲಿಟ್ಟಿರುವ ಹಾಗೆ ಜೋತು ಬೀಳುತ್ತಿರುವಂತೆ ರಥದಲ್ಲಿ ಪೋಣಿಸಿ (ನೇತುಹಾಕಿ-ಜೋಲುಬಿಟ್ಟು) ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಪ್ರದರ್ಶಿಸಿದನು. ವl1 ಹೀಗೆ ದ್ರುಪದ,. ದ್ರುಪದನ ತಮ್ಮ, ವಿರಾಟ, ವಿರಾಟನ ತಮ್ಮ ಕೈಕಯ, ಕುಂತೀಭೋಜನೇ ಮೊದಲಾದ ನಾಯಕರೆಲ್ಲರನ್ನೂ ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು