________________
:
೫೭೨) ಪಂಪಭಾರತಂ
ವll ಅಂತಶ್ವತ್ಥಾಮನೆಚ್ಚ ನಾರಾಯಣಾಸ್ತಮಂ ನಾರಾಯಣನುಪಾಯದೊಳೆ ಗೆಲ್ಲನನ್ನೆಗಂಚಂ|| ಕವಿದೆರಡುಂ ಪತಾಕಿನಿಗಳಾಗಡುಮನ್ನನೆ ಸಕ್ಕಿ ಮಾಡಿ ಕಾ
ದುವುದನಿಲ್ಲಿ ಸತ್ತರಸುಮಕ್ಕಳ ಪಾಪಮಿದಲ್ಲಮನ್ನನೆ ! ಯುವುದುಪವಾಸದಿಂ ಜಪದಿನಾನದನೊಡಿಸಿ ಶುದ್ದನಪ್ಪೆನೆಂ ಬವೊಲಪರಾಂಬುರಾಶಿಗಿಳಿದಂ ನಳಿನೀವರಜೀವಿತೇಶ್ವರಂ || ೩೩
ವ|| ಅಂತೆರಡುಂ ಪಡೆಗಳೊಂದಿರುಳುಮೆರಡುಂ ಪಗಲುಮೋರಂತೆ ಕಾದಿ ಚಳಿತಪಹಾರ ತೂರ್ಯಂಗಳಂ ಬಾಜಿಸೆ ತಂತಮ್ಮ ಬೀಡುಗಳ ಪೊದರಾಗಲ್ಚಂ|| ಗುರುವಿನ ಶೋಕದಿಂದ ರಥಮಧ್ಯದೊಳೊಯ್ಯನೆ ಜೋಲ್ಲು ಬಿದ್ದನಂ
ಗುರುಸುತನಂ ಕೃಪಂ ಕೃಪೆಯಿನಾತವಿಳಾಸದೊಳಾಳಸುತ್ತುಮಂ | ತಿರೆ ಗುರುಶೋಕಮಗಳಿಗೆ ತಾತವಿಯೋಗಮುಮಕ್ಕುಮಾಗಡುಂ ಗುರುವೆನೆ ಪೇಟಿಮಾ ಗುರುವಿಯೋಗಭರಂ ಗುರುವಾಗದಿರ್ಕುಮೇll ೩೪
ವ| ಅನ್ನೆಗಂ ಪನ್ನಗಕೇತನಂ ಶೋಕಮನಾಸಲೆಂದು ಕರ್ಣ ಶಲ್ಕ ಸೌಬಲ ಸಮೇತಂ ಬಂದಶ್ವತ್ಥಾಮನನಿಂತೆಂದಂಮll ಪುದಿದೌರ್ವಾನಳನಬ್ಬಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರ ಕೋ
ಪದಿನುದ್ವತ್ ಬಳಾಬ್ಬಿಯಂ ಸುಡ ಕರಂ ಬೆಂಬಿಟ್ಟು ದುರ್ಯುಕ್ತಿಯಿಂ | ದಯಂ ಧರ್ಮಜನಿಕ್ಕಿದಂ ಗುರುವನಿನಾತನಂ ಬೇಗಮಿ
ಕದೆ ಕಣ್ಣೀರ್ಗಳನಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ || ೩೫ ವೈಷ್ಣವಾಸ್ತದಿಂದ ಎದುರಿಸಿ ಲೋಕವನ್ನು ರಕ್ಷಿಸಿದನು- ವll ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತವನ್ನು ನಾರಾಯಣನಾದ ಕೃಷ್ಣನು ಉಪಾಯದಿಂದಲೇ ಗೆದ್ದನು. ಅಷ್ಟರಲ್ಲಿ ೩೩. ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿಮಾಡಿ ಯುದ್ದಮಾಡುವುದರಿಂದ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ದನಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು. ವ! ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಕಾದಿ ಬಲಗುಂದಿದ್ದ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು ತಮ್ಮ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ ೩೪. ತಂದೆಯು ಸತ್ತ ದುಃಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ ಅಶ್ವತ್ಥಾಮನನ್ನು ಕೃಪನು ಮೃದುವಾದ ಮಾತುಗಳಿಂದಲೂ; ತನ್ನ ಸಮಾಧಾನೋಕ್ತಿಯಿಂದಲೂ ಬೀಡಿಗೆ ಕರೆದು ತಂದನು. ತಂದೆಯ ಸಾವೇ' (ಅಗಲಿಕೆಯೇ) ಹೆಚ್ಚಿನ ದುಃಖಕ್ಕೆ ಕಾರಣವಾಗಿರುವಾಗ ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗದುಃಖವು ಗುರುತರವಾಗಿರುವುದಿಲ್ಲವೇ ? ವ! ಅಷ್ಟರಲ್ಲಿ ದುರ್ಯೋಧನನು ಅಶ್ವತ್ಥಾಮನ ದುಃಖವನ್ನು ಆರಿಸಬೇಕೆಂದು ಕರ್ಣ, ಶಲ್ಯ, ಶಕುನಿಯರೊಡನೆ ಬಂದು ಅವನಿಗೆ ಹೀಗೆ ಹೇಳಿದನು. ೩೫. ಆಚಾರ್ಯರು ಆವರಿಸಿ