________________
OOD
ಏಕಾದಶಾಶ್ವಾಸಂ | ೫೩೭ - ವ|| ಆಗಳ್ ದ್ರೋಣ ದ್ರೋಣಪುತ್ರ ಕೃಪ ಕೃತವರ್ಮ ಕರ್ಣ ಶಲ್ಯ ಶಕುನಿ ದುಶ್ಯಾಸನ ವೃಷಸೇನಾದಿಗಳಾಳನ ಮುಳಿದ ಮೊಗಮನದು ಧರ್ಮಯುದ್ಧಮಂ ಬಿಸುಟು ನರನಂದನನ ರಥಮಂ ಸುತ್ತಿ ಮುತ್ತಿಕೊಂಡು ಕಂil ತೇರಂ ಕುದುರೆಯನೆಸಗುವ
ಸಾರಥಿಯಂ ಬಿಲ್ಲನದ ಗೊಣೆಯುಮನುಜದಾ | ರ್ದೊರೋರ್ವರೊಂದನೆಯೊಡೆ ಬೀರಂ ಗದೆಗೊಂಡು ಬೀರರಂ ಬೆಂಕೊಂಡಂ || ಬೆಂಕೊಳೆ ಕಳಿಂಗ ರಾಜನ ನೂಕಿದ ಕರಿಘಟೆಯನುಡಿಯೆ ಬಡಿ ಬಡಿದೆತ್ತಂ | ಕಿಂಕೋಟಮಾಲ್ಕುದುಮುಂದೆ ಚಂ ಕರ್ಣ೦ ನಿಶಿತ ಶರದಿನೆರಡುಂ ಕರಮಂ ||
೧೦೨ ಕರಮೆರಡುಂ ಪಳೆವುದುಮಾ ಕರದಿಂದಂ ತನ್ನ ಕುನ್ನಗೆಯೊಳೆ ಕೊಂಡು ದ್ಭುರ ರಥಚಕ್ರದಿನಿಟ್ಟಂ ತಿರಿಪಿ ನರಪ್ರಿಯ ತನೂಜನಕ್ಕೋಹಿಣಿಯಂ ||
೧೦೩ ವ|| ಆಗಳ್ ದುಶ್ಯಾಸನನ ಮಗಂ ಗದಾಯುಧನಟಿಯ ನೊಂದ ಸಿಂಗದ ಮೇಲೆ ಬೆರಗಳಯದ ಬೆಳ್ಳಾಲ್ ಪಾಯ್ದಂತೆ ಕಿ ಬಾಳ್ವೆರಸು ಪಾಯ್ದುದುಂ
ಚಪ್ಪರಿಸಿ ನುಂಗಲು ಆಶಿಸಿದನು. ವ|| ಆಗ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಕರ್ಣ ,ಶಲ್ಯ, ಶಕುನಿ, ದುಶ್ಯಾಸನ, ವೃಷಸೇನನೇ ಮೊದಲಾದವರು ಒಡೆಯನಾದ ದುರ್ಯೋಧನನ ಕೋಪದಿಂದ ಕೂಡಿದ ಮುಖವನ್ನು ನೋಡಿ ತಿಳಿದು ಧರ್ಮಯುದ್ಧವನ್ನು ಬಿಸಾಡಿ (ಬಿಟ್ಟು) ಅಭಿಮನ್ಯುವಿನ ರಥವನ್ನು ಸುತ್ತಿ ಮುತ್ತಿಕೊಂಡರು. ೧೦೧. ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯನ್ನೂ ಬಿಲ್ಲನ್ನೂ ಅದರ ಹೆದೆಯನ್ನೂ ಸಾವಕಾಶಮಾಡದೆ ಒಬ್ಬೊಬ್ಬರೊಂದನ್ನು ಹೊಡೆಯಲು ವೀರನಾದ ಅಭಿಮನ್ಯುವು ಗದೆಯನ್ನು ತೆಗೆದುಕೊಂಡು ವೀರರನ್ನು ಬೆನ್ನಟ್ಟಿದನು. ೧೦೨. ಕಳಿಂಗ ರಾಜನು ಮುಂದಕ್ಕೆ ತಳ್ಳಿದ ಆನೆಯ ಸಮೂಹವನ್ನು ಒಡೆಯುವ ಹಾಗೆ ಬಡಿಬಡಿದು ಎಲ್ಲೆಲ್ಲಿಯೂ ಸಂಕಟಪಡಿಸಲು ಕರ್ಣನು ವೇಗವಾಗಿ ಬಂದು ಹರಿತವಾದ ಬಾಣದಿಂದ ಅಭಿಮನ್ಯುವಿನ ಎರಡುಕೈಗಳನ್ನು ಹೊಡೆದನು (ಕತ್ತರಿಸಿದನು). ೧೦೩. ಕೈಗಳೆರಡೂ ಕತ್ತರಿಸಿಹೋದರೂ ಅಭಿಮನ್ಯುವು ವೇಗವಾಗಿ ತನ್ನ ಮೋಟುಗೈಗಳಿಂದಲೇ ಕಳಚಿ ಬಿದ್ದಿದ್ದ ಗಾಲಿಯೊಂದನ್ನು ತೆಗೆದುಕೊಂಡು ಸುತ್ತಿ ತಿರುಗಿ ಪ್ರಯೋಗಮಾಡಿ ಒಂದಕ್ಟೋಹಿಣಿ ಸೈನ್ಯವನ್ನು ಹೊಡೆದು ಹಾಕಿದನು. ವಗಿ ಆಗ ದುಶ್ಯಾಸನನ ಮಗನಾದ ಗದಾಯುಧನು ಸಾಯುವ ಹಾಗೆ ಯಾತನೆ ಪಡುತ್ತಿರುವ ಸಿಂಹದ ಮೇಲೆ ಅವಿವೇಕಿಯಾದ ದಡ್ಡನು ಹಾಯುವ ಹಾಗೆ ಒರೆಯಿಂದ ಹೊರಗೆ ಕಿತ್ತ (ಸೆಳೆದ)