________________
೫೩೬ | ಪಂಪಭಾರತಂ
ವ|| ಎನೆ ಜಯದ್ರಥನಿಂತೆಂದಂಮl ನರನೊಳ್ ಮುನ್ನಗಪಟ್ಟುದೊಂದಬಲೊಳಾಂ ಕೈಲಾಸ ಶೈಲೇಶನಂ
ಪಿರಿದುಂ ಭಕ್ತಿಯೊಳರ್ಚಿಸುತ್ತುಮಿರೆ ತದ್ದೇವಾಧಿಪಂ ಮೆಚ್ಚಿದಂ | ನರನೋರ್ವ೦ ಪೂಜಗಾಗಲೋಂದು ದಿವಸಂ ಕೌಂತೇಯರಂ ಕಾದಿ ಗಲ್ ನಿರುತಂ ನೀನೆನೆ ಪತ್ತೆನಾಂ ಬರಮನದೀಂದ್ರಾತ್ಮಜಾಧೀಶನೊಳ್ || ೯೮ ವ|| ಎಂದ ಸಿಂಧುರಾಜನ ನುಡಿಗೆ ರಾಜಾಧಿರಾಜನೆರಡು ಮುಯ್ಯುಮಂ ನೋಡಿ'ಉli ' ನಿನ್ನನೆ ನಚ್ಚಿ ಪಾಂಡವರೊಳಾಂತಿಯಲ್ ತಳೆಸಂದು ಪೂನಾಂ
ನಿನ್ನ ಶರಾಳಿಗಳಗಿದು ನಿಂದುವು ಪಾಂಡವ ಸೈನ್ಮೆಂದೊಡಿಂ | ನಿನ್ನ ಭುಜಪ್ರತಾಪದಳವಾರ್ಗಮಸಾಧ್ಯಮಾಯಂ
ನಿನ್ನಳವಿಂದಮಿನೆನಗೆ ಸಾರ್ದುದರಾತಿ ಜಯಂ ಜಯದ್ರಥಾ || ೯೯. * ವl ಎಂದು ಪೊಗಟ್ಟು ಸಿಂಧುರಾಜನನಿರಟ್ಟು ಕುಂಭಸಂಭವನುಂ ತಾನುಮಭಿ ಮನ್ಯುವಿನ ಸಂಗ್ರಾಮರಂಗಮನಯ ವಂದುಚಂ|| ಉಡಿದ ರಥಂಗಳಿಟ್ಟೆಡೆಗಳೊಳ್ ಮಕುಟಂಗಳ ರತ್ನದೀಪ್ತಿಗಳ
ಪೊಡರ್ವಿನಮಟ್ಟಿ ತಟ್ಟೆದ ನಿಜಾತ್ಮಜರಂ ನಡೆ ನೋಡಿ ಕಣ್ಣ ನೀ | ರೂಡನೊಡನುರ್ಚಿ ಪಾಯ ಮುಳಿಸಿಂದದನೊಯ್ಯನೆ ತಾಳಿ ಕಾಯ್ಲಿನೋಳ ಕಡಗಿ ಜಗಂಗಳಂ ನೊಣೆದು ನುಂಗಲುಮಾಟಿಸಿದಂ ಸುಯೋಧನಂ Il೧೦೦
ಎಂದು ಕೇಳಿದನು. ವ|| ಎನ್ನಲು ಸೈಂಧವನು ಹೀಗೆಂದನು. ೯೮. ಅರ್ಜುನನಲ್ಲಿ ಮೊದಲು ಸೆರೆಸಿಕ್ಕಿದ ಒಂದು ವ್ಯಥೆಯಿಂದ ನಾನು ಕೈಲಾಸಾಧಿಪತಿಯಾದ ಈಶ್ವರನನ್ನು - ಭಕ್ತಿಯಿಂದ ಪೂಜೆ ಮಾಡುತ್ತಿರಲು ಆ ದೇವತೆಗಳ ಒಡೆಯನಾದ ಈಶ್ವರನು 'ಮೆಚ್ಚಿದ್ದೇನೆ', ಅರ್ಜುನನೊಬ್ಬನನ್ನು ಬಿಟ್ಟು ಉಳಿದ ಪಾಂಡವರೊಡನೆ ನೀನು ಕಾದಿ ಒಂದು ದಿವಸ ನಿಶ್ಚಯವಾಗಿ ಗೆಲ್ಲು ಎನ್ನಲು ಆ ವರವನ್ನು ಪಾರ್ವತಿಪತಿಯಿಂದ ಪಡೆದೆನು. ವ|| ಎಂದು ಹೇಳಿದ ಸೈಂಧವನ ಮಾತಿಗೆ ಚಕ್ರವರ್ತಿಯಾದ ದುರ್ಯೋಧನನು (ತನ್ನ ಎರಡು ಹೆಗಲುಗಳನ್ನು ನೋಡಿಕೊಂಡು ಸಂತೋಷಪಟ್ಟನು. ವ! ನಿನ್ನನ್ನು ನಂಬಿಕೊಂಡೇ ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ನಿಷ್ಕರ್ಷಿಸಿ ಪ್ರತಿಜ್ಞೆಮಾಡಿದೆನು. ನಿನ್ನ ಬಾಣಗ ಸಮೂಹಗಳಿಗೆ ಹೆದರಿ ಪಾಂಡವಸೈನ್ಯವು ನಿಂತಿತು ಎಂದಾಗ ನಿನ್ನ ತೋಳಿನ ಬಲದ ಪ್ರಮಾಣ ಮತ್ತಾರಿಗೂ ಅಸಾಧ್ಯವಾಯಿತು. ಸೈಂಧವನೇ ನಿನ್ನ ಪರಾಕ್ರಮದಿಂದ ನನಗೆ ಶತ್ರುಜಯವುಂಟಾಯಿತು ವll ಎಂದು ಹೊಗಳಿ ಸೈಂಧವನನ್ನು ಅಲ್ಲಿಯೇ ಇರುವಂತೆ ಹೇಳಿ ದ್ರೋಣನೂ ತಾನೂ ಅಭಿಮನ್ಯುವಿನ ಯುದ್ಧರಂಗವನ್ನು ಸೇರಿದರು. ೧೦೦. ಮುರಿದ ತೇರುಗಳ ಸಂದಿಯಲ್ಲಿ ಕಿರೀಟಗಳ ರತ್ನಕಾಂತಿಗಳು ಹೊಳೆಯುತ್ತಿರಲು ನಾಶವಾಗಿ ಸತ್ತುಬಿದ್ದಿರುವ ತನ್ನ ಮಕ್ಕಳುಗಳನ್ನು ದುರ್ಯೋಧನನು ನಿಟ್ಟಿಸಿ ನೋಡಿದಾಗ ಕಣ್ಣೀರು ಒಡನೆಯೇ ಚಿಮ್ಮಿ ಹರಿಯಿತು. ಅದನ್ನು ನಿಧಾನವಾಗಿ ಸಹಿಸಿಕೊಂಡು ಕೋಪದಿಂದ ರೇಗಿ ಲೋಕವನ್ನೆಲ್ಲ