________________
ಏಕಾದಶಾಶ್ವಾಸಂ | ೫೩೫ ಕoll ಒಂದೆ ಸರಲಿಂದಮವನೆರ್ದೆ
ಯಂ ದೊಕ್ಕನೆ ತಿಣ್ಣಮೆಚ್ಚು ಕೊಲಲೊಲ್ಕನೆ ಸಂ | ಕಂದನ ನಂದನ ತನಯಂ ತಂದೆಯ ಪೂಣೆಯನೆ ನೆನೆದು ದುಶ್ಯಾಸನನಂ |
೯೬ ವಗ ಆಗಲ್ ಕಾನೀನಸೂನು ವೃಷಸೇನನೇನುಂ ಮಾಣದೆ ಕಾದುತ್ತಿರ್ದನನ್ನೆಗಮಿತ್ತ ನರನಂದನನ ಬಟವಡೆಯಂ ತಗುಳು ಗವಟೆಯ ಪಾವಿನಂತೆ ಚಕ್ರವ್ಯೂಹಮಂ ಪುಗಲೆಂದು ಬರ್ಪ ದ್ರುಪದ ವಿರಾಟ ದೃಷ್ಟದ್ಯುಮ್ಮ ಭೀಮಸೇನ, ಸಹದೇವ ನಕುಲ ಯುಧಿಷ್ಠಿರ ಘಟೋತ್ಕಚಾದಿಗಳೊಡನೆ ಮಲ್ಲಾಮಲ್ಲಿಯಾಗಿ ಕಾದುವ ಕುಂಭಸಂಭವನಲ್ಲಿಗೆ ದುರ್ಯೊಧನಂ ಬಂದು ನಮ್ಮ ಬಲಮೆಲ್ಲಮಭಿಮನ್ಯುವಿನಂಬಿನ ಮೊನೆಯೊಳ್ ತೊಟ್ಟು ತೆರಳೋಡಿದಪ್ಪುದು ನಿಮಗಲ್ಲಿ ಕಾಳೆಗಮತಿಭರಮೇಗೆಯ್ಯಮೆನೆ ಸಿಂಧುರಾಜನಿಂದಿನನುವರಕೀಯತೆಯೊಳೆ ನಿತಾದೊಡಮೀಶ್ವರ ವರಪ್ರಸಾದದೊಳಾನೆ ಸಾಲ್ವೆನೆಂದಿಂತೆಂದಂ
ಉಳಿದಿದಿರಾಂತು ನಿಂದ ರಿಪುಸೆನ್ಯಮನಾಹವರಂಗದಲ್ಲಿ ತ ಇಂದಳದಿಕ್ಕಲಾಂ ನಿಜವೆನಿರವೇಡೊಡಗೊಂಡು ಪೋಗು ನಿ | ನೈಟಿಕೆಯ ಕುಂಭಸಂಭವನನೆಂದೊಡೆ ಪಾಂಡವಸೈನಮಂ ಕಳು ತಿಳೆವನಿತೊಂದಳುರ್ಕೆ ನಿನಗೇತಳಾದುದೊ ಪೇಮ್ ಜಯದ್ರಥಾ || ೯೭
ಮಕ್ಕಳ ಸಾವನ್ನು ನೋಡಿ ನಮ್ಮಣ್ಣನ ಮುಖವನ್ನು ಯಾವ ಮುಖದಲ್ಲಿ ನೋಡಲಿ ಎಂದು ದುಶ್ಯಾಸನನು ಬಂದು ಮೇಲೆ ಬಿದ್ದನು. ೯೬. ಒಂದೇ ಬಾಣ ಅವನ ಎದೆಯನ್ನು ದೊಕ್ಕೆಂದು ತೀಕ್ಷವಾಗಿ ಹೊಡೆದು ತಂದೆಯಾದ ಭೀಮನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಂಡು ಅಭಿಮನ್ಯುವು ದುಶ್ಯಾಸನನನ್ನು ಕೊಲ್ಲಲು ಒಪ್ಪದವನಾದನು. ವ|| ಆಗ ಕರ್ಣನ ಮಗನಾದ ವೃಷಸೇನನು ಒಂದೇ ಸಮನಾಗಿ ಕಾದುತ್ತಿದ್ದನು. ಅಷ್ಟರಲ್ಲಿ ಈ ಕಡೆ ಅಭಿಮನ್ಯುವು ಬಂದ ದಾರಿಯನ್ನೇ ಹಿಡಿದು ಬಿದುರುಗಣೆಯ ಮೇಲಿರುವ ಹಾವಿನಂತೆ ಚಕ್ರವ್ಯೂಹವನ್ನು ಪ್ರವೇಶಿಸಬೇಕೆಂದು ಬರುತ್ತಿರುವ ದ್ರುಪದ, ವಿರಾಟ, ಧೃಷ್ಟದ್ಯುಮ್ಮ, ಭೀಮಸೇನ, ಸಹದೇವ, ನಕುಲ, ಯುಧಿಷ್ಠಿರ, ಘಟೋತ್ಕಚನೇ ಮೊದಲಾದವರೊಡನೆ ದ್ವಂದ್ವಯುದ್ಧದಿಂದ ಯುದ್ಧಮಾಡುತ್ತಿರುವ ದ್ರೋಣನಲ್ಲಿಗೆ `ದುರ್ಯೊಧನನು ಬಂದು ನಮ್ಮ ಸೈನ್ಯವೆಲ್ಲ ಅಭಿಮನ್ಯುವಿನ ಬಾಣದ ತುದಿಯಲ್ಲಿ ತೂಗಲ್ಪಟ್ಟು ಚದುರಿ ಓಡಿಹೋಗುತ್ತಿದೆ. ನಿಮಗೆ ಅಲ್ಲಿ ಕಾಳಗವು ಬಹಳ ಜೋರಾಗಿದೆ. ಏನು ಮಾಡೋಣ ಎಂದು ಕೇಳಿದನು. ಸೈಂಧವನು ಈ ದಿನ ಯುದ್ಧಕ್ಕೆ ಹೇಗಾದರೂ ಈಶ್ವರನ ಪ್ರಸಾದದಿಂದ ಈ ಸಂದರ್ಭದಲ್ಲಿ ನಾನೇ ಸಮರ್ಥನಾಗುತ್ತೇನೆ ಎಂದು ಹೀಗೆ ಹೇಳಿದನು. ೯೭. ವೇಗವಾಗಿ ಪ್ರತಿಭಟಿಸಿ ನಿಂತಿರುವ ಶತ್ರುಸೈನ್ಯವನ್ನು "ಯುದ್ಧರಂಗದಲ್ಲಿ ಚೂರು ಚೂರಾಗಿ ಕತ್ತರಿಸಿ ತರಿದಿಕ್ಕಲು ನಾನು ಸಮರ್ಥನಾಗಿದ್ದೇನೆ. ಇನ್ನು ನೀನು ಇಲ್ಲಿರಬೇಕಾಗಿಲ್ಲ. ಪ್ರಸಿದ್ಧನಾದ ನಿನ್ನ ದ್ರೋಣನನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗು ಎಂದನು. ಅದಕ್ಕೆ ರಾಜರಾಜನು 'ಎಲೈ ಸೈಂಧವನೇ ಪಾಂಡವ ಸೈನ್ಯವನ್ನು ಗುರಿಯಿಟ್ಟು ಕತ್ತರಿಸುವ ಅಷ್ಟೊಂದು ಪರಾಕ್ರಮವು ನಿನಗೆ ಹೇಗೆ ಬಂದಿತು'