________________
೫೩೪) ಪಂಪಭಾರತಂ
ವ|| ಅಂತು ಪೊಕ್ಕು ವಿರೋಧಿ ಸೈನ್ಯಮಂ ಮಾರಿ ಪೊಕ್ಕಂತೆ ಪಣಮಯಂ ಮಾಡಿ ತೋಳಕೊಂಡ ಜೋಳದಂತಿರೆ ಪಡಲ್ವಡಿಸಿದಾಗಳ್ಚಂll ಒಣಗಿದುದೊಂದು ಪೆರ್ವಿದಿರ ಪರ್ವೊದಳೆಂ ಮೊರೆದುರ್ವುವಾಶುಶು ಕ್ಷಣಿಯವೊಲಾಂತ ಖಟ್ಟ ನಿವಹಕ್ಕೆ ರಥಕ್ಕೆ ದಕ್ಕೆ ಮತ್ತವಾ | ರಣ ನಿವಹಕ್ಕೆ ತಕ್ಕಿನಭಿಮನ್ನುವ ಕೂರ್ಗಣೆ ಪಾಯ್ತು ನುಂಗಲು ಟೊಣೆಯಲುಮುರ್ಚಿ ಮುಕ್ಕಲುಮಿದೇಂ ನೆಹಿತೆ ಕಲ್ಕುವೊ ಯುದ್ಧರಂಗದೊಳ್ ti೯೪
ವll ಅಂತಿದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗಚಿಕ್ಕುವ೦ತಿಕ್ಕಿ ನಿಂದ ನರನಂದನನಂ ಕಂಡು ವಿಕ್ರಮಕ್ರಂ ಕ್ರಮಕ್ರಂ ಪುರುಡಿಸುವ ಸುಯೋಧನನ ಮಕ್ಕಳ್: ಲಕ್ಷಣಂ ಮೊದಲಾಗೆ ನೂರ್ವರುಮೊಂದಾಗೆ ಬಂದು ತಾಗಿದಾಗಳ್|ಸೂಸೆಚ್ಚೆಚ್ಚು ಬಿಲ್ಲಂ ರಥದ ಕುದುರೆಯಂ ಸೂತನಂ ಖಂಡಿಸುತ್ತಾ
ಆಂಟೊಂಬತ್ತು ಪತ್ತೆಂಬಳಕೆಯ ಸರಬಿಂದೂಳಿಕೊಂಡಾವ ಮೆಯ್ಯುಂ | ಪಾಟಂಬಂತಾಗೆ ಪಾರ್ದಾರ್ದುಅದಿಸೆ ಮುಳಿಸಿಂ ನೂರ್ವರುಂ ಪೊನ್ನ ತಾಳ್ ಸೂಳೊಳ್ ಬೀಚ್ಚಿಂತೆ ಬಿಲ್ಡರ್ ಮಕುಟಮಣಿಗಣಜ್ಯೋತಿಸಾರರ್
ಕುಮಾರರ್ || ೯೫ ವ|| ಆಗಳ್ ಸುಯೋಧನನ ಮಕ್ಕಳ ಸಾವಂ ಕಂಡು ತಮ್ಮಣ್ಣನ ಮೊಗಮನಾವ ಮೊಗದೊಳ್ ನೋಟಿನೆಂದು ದುಶ್ಯಾಸನಂ ಬಂದು ತಾಗಿದಾಗಳ್
ನುಗ್ಗಿದನು. ವ|| ಹಾಗೆ ಶತ್ರುಸೈನ್ಯವನ್ನು ಪ್ರವೇಶಮಾಡಿ ಮಾರಿ ಹೊಕ್ಕಂತೆ ಹೆಣಮಯವನ್ನಾಗಿ ಮಾಡಿ ಗಾಳಿಯಲ್ಲಿ ತೂರಿದ ಜೋಳದ ಹಾಗೆ ನೆಲಕ್ಕೆ . ಚೆಲ್ಲಾಪಿಲ್ಲಿಯಾಗಿ ಬೀಳಿಸಿದನು. ೯೪, ಒಣಗಿಸಿದ ಒಂದು ಹೆಬ್ಬಿದಿರಿನ ದೊಡ್ಡ ಮಳೆಯಿಂದ ಶಬ್ದಮಾಡಿಕೊಂಡು ಉಬ್ಬುವ ಅಗ್ನಿಯ ಹಾಗೆ ಪ್ರತಿಭಟಿಸಿದ ಖಡ್ಡಧಾರಿಗಳ ಗುಂಪಿಗೆ, ತೇರಿಗೆ, ಸೈನ್ಯಕ್ಕೆ, ಮದ್ದಾನೆಗಳ ಸಮೂಹಕ್ಕೆ, ಯೋಗ್ಯವಾದ (ಸಮರ್ಥವಾದ) ಅಭಿಮನ್ಯುವಿನ ಹರಿತವಾದ ಬಾಣಗಳು ಹಾಯ್ದು ನುಂಗುವುದಕ್ಕೂ ಚಪ್ಪರಿಸುವುದಕ್ಕೂ ಮುಕ್ಕುವುದಕ್ಕೂ ಯುದ್ಧರಂಗದಲ್ಲಿ ಎಷ್ಟು ಚೆನ್ನಾಗಿ ಕಲಿತುವೋ! ವ! ಹಾಗೆ ಪ್ರತಿಭಟಿಸಿದ ಸೈನ್ಯವೆಲ್ಲವನ್ನೂ ಯಮನ ಸೈನ್ಯಕ್ಕೆ ನಿಯಮಿತ ನಿತ್ಯಾಹಾರ(?)ವನ್ನು ಕೊಡುವ ಹಾಗೆ ಕೊಟ್ಟು ನಿಂತಿರುವ ಅಭಿಮನ್ಯುವನ್ನು ಕಂಡು ಪರಾಕ್ರಮಕ್ಕೂ ಸಂಪ್ರದಾಯಕ್ಕೂ ಸ್ಪರ್ಧೆಮಾಡುತ್ತಿದ್ದ ದುರ್ಯೊಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರುಮಂದಿಯೂ ಒಟ್ಟಾಗಿ ಬಂದು ತಾಗಿದರು. ೯೫. ಸರದಿಯ ಪ್ರಕಾರ ಬಿಲ್ಲನ್ನೂ ರಥದ ಕುದುರೆಯನ್ನೂ ಸಾರಥಿಯನ್ನೂ ಹೊಡೆಹೊಡೆದು ಕತ್ತರಿಸುತ್ತ ಆರು, ಏಳು, ಎಂಟು, ಒಂಬತ್ತು, ಹತ್ತು ಎಂಬ ಸಂಖ್ಯೆಯ ಸಿದ್ದವಾದ ಬಾಣಗಳಿಂದ ನಾಟಿಕೊಳ್ಳುವ ಹಾಗೆ ಮಾಡಿ ಎಲ್ಲ ಶರೀರಗಳೂ ಹಾಳು (ದದ್ದು -ಪೊಳ್ಳು) ಎನ್ನುವ ಹಾಗೆ ಆರ್ಭಟ ಮಾಡಿ ಹೊಡೆಯಲು ಕಿರೀಟದ ರತ್ನಸಮೂಹದ ಕಾಂತಿಯಿಂದ ಪ್ರಕಾಶರಾದ ನೂರ್ವರು ಕುಮಾರರು ಹೊಂದಾಳೆಯ ಮರಗಳು ಸರದಿಯ ಮೇಲೆ ಬೀಳುವ ಹಾಗೆ ಬಿದ್ದರು. ವ| ಆಗ ದುರ್ಯೊಧನನ