________________
ಏಕಾದಶಾಶ್ವಾಸಂ | ೫೩೩ ಕಂti ಮಗನೆ ಪದಿನಾಲ್ಕು ವರುಷದ
ಮಗನೆ ನಿನ್ನನ್ನನೊರ್ವನಂ ಪಗೆವಡೆಯೊ | ಡುಗಳನೊಡೆಯಲೆವೇಳೆರ್ದ
ಧಗಮನೆ ಸೈರಿಸುವುಪಾಯಮಾವುದು ಕಟುವೇ || .. ೧ ವ!! ಎಂದೊಡಾ ಮಾತಂ ಮಾರ್ಕೊಂಡಭಿಮನ್ಯುವಿಂತೆಂದಂಮರ ಕ್ರಮಮಂ ಕೆಯ್ಯೋಳಲೆಂದು ಪುಟ್ಟ ರಣದೊಳ ಸಾವನ್ನೆಗಂ ಮಾತ್ತೂಡ
ಕ್ರಮಮಕ್ಕುಂ ಕ್ರಮಮರುಮೇ ಕ್ರಮಮನಾನೇಗೆಯಪಂ ವಿಕ್ರಮಂ | ಕ್ರಮಮಾಂ ವಿಕ್ರಮದಾತನಂ ಕ್ರಮದ ಮಾತಂತಿರ್ಕೆ ಮಾಣ್ಣಿರ್ದೊಡಾಂ | ಕ್ರಮಕೆಂದಿರ್ದೆನೆ ಬಿಟೊಡಂ ಬಿಡದೊಡಂ ಬೀಳ್ಕೊಂಡೆನಿಂ ಮಾಪ್ಟನೇ ||೯೨
ವಗಿರಿ ಎಂದು ತನ್ನೆಡೆದ ಕನಕ ರಥಮಂ ತನ್ನ ಮನದನ್ನನಪ್ಪ ಜಯನೆಂಬ ಸಾರಥಿಯಂ ಚೋದಿಸೆಂದಾಗಳ್ಚoll ಎಗುವ ಬಟ್ಟನಂಬುಗಳ ಬಲ್ಬರಿ ಕುಂಭಜನಂ ಮರಳ್ಳಿ ಪಾ
ಝಳಕೆಯ ಪಾರೆಯಂಬುಗಳ ತಂದಲಗುರ್ವಿಸಿ ಸಿಂಧುರಾಜನಂ | ಮಜುಗಿಸೆ ಬಾಗಿಲೊಳ್ ಮುಸುಳಿ ನಿಂದ ಘಟಾವಳಿಯಂ ತೆರಳಿ ತ
ತಂದುದೊ ಪೊಕ್ಕನಭಿಮನ್ನು ವಿರೋಧಿಬಳಾಂಬುರಾಶಿಯಂ || ೯೩ ಅಥವಾ ಪ್ರತಿಭಟಿಸಿದ ಶತ್ರುಸೈನ್ಯದಲ್ಲಿ ನಾಶವಾಗಬಹುದು. ಆದರೆ ನನ್ನ ವಂಶೋದ್ದಾರಕ್ಕಾಗಿಯೇ ಹುಟ್ಟಿರುವ ನಿನ್ನನ್ನೇ ಮದ್ದಾನೆಯ ದಂತವೆಂಬ ಒನಕೆಯ ಪೆಟ್ಟಿಗೂ ಕತ್ತಿಯ ಬಾಯಿಗೂ ಬಾಣದ ತುದಿಗೂ ಮಹಾರಥರ ಸಮೂಹಕ್ಕೂ ಹಿಡಿದು ಹೇಗೆ ನೂಕಲಿ? ೯೧. ಮಗು ನೀನು ಇನ್ನೂ ಹದಿನಾಲ್ಕು ವರ್ಷದ ಮಗುವಪ್ಪಾ, ನಿನ್ನಂತಹ ಒಬ್ಬನನ್ನು ಶತ್ರುಸೈನ್ಯದ ಗುಂಪನ್ನು ಭೇದಿಸಲು ಹೇಳಿ ಎದೆ ಧಣ್ಣೆಂದು ಉರಿಯಲು ತಡೆದುಕೊಳ್ಳುವ ಉಪಾಯವಾವುದು ಕಂದಾ? ವ|| ಎನ್ನಲು ಆ ಮಾತನ್ನು ಪ್ರತಿಭಟಿಸಿ ಅಭಿಮನ್ಯುವು ಹೀಗೆ ಹೇಳಿದನು. ೯೨. ಯುದ್ಧದಲ್ಲಿ ಕ್ರಮಪ್ರಾಪ್ತವಾದುದನ್ನು ಸ್ವೀಕರಿಸುವುದಕ್ಕಾಗಿಯೇ ಹುಟ್ಟಿ, ಸಾಯುವುದಕ್ಕೆ ತಪ್ಪಿದರೆ (ಹೆದರಿದರೆ) ಅದು ಅಕ್ರಮವಾಗುತ್ತದೆ; ಕ್ರಮವಾಗುತ್ತದೆಯೇ? ಕ್ರಮವನ್ನು ನಾನು ಏನು ಮಾಡುತ್ತೇನೆ. ಕ್ರಮದ ಮಾತು ಹಾಗಿರಲಿ; ಪರಾಕ್ರಮವೇ ಕ್ರಮ. ನಾನು ಪರಾಕ್ರಮಶಾಲಿ. ನೀವು ಅಪ್ಪಣೆ ಕೊಡದಿದ್ದರೂ ನಾನು ಕ್ರಮಕ್ಕಾಗಿ ಇದ್ದೇನೆ. ನೀವು ಬಿಡಲಿ ಬಿಡದಿರಲಿ ಹೊರಟಿದ್ದೇನೆ. ಅದನ್ನು ಇನ್ನು ಬಿಡುತ್ತೇನೆಯೇ? ವ| ಎಂದು ತಾನು ಹತ್ತಿದ್ದ ಚಿನ್ನದ ತೇರನ್ನು ತನಗೆ ಪ್ರೀತಿಪಾತ್ರನಾದ ಜಯನೆಂಬ ಸಾರಥಿಯನ್ನು ನಡಸೆಂದು ಹೇಳಿ-ಹೊರಟೇಬಿಟ್ಟನು: ೯೩. ಮೇಲೆ ಬೀಳುತ್ತಿರುವ ದುಂಡಾದ ಬಾಣಗಳ ಬಲವಾದ ಮಳೆಯು ದ್ರೋಣನನ್ನು ಹಿಂದಿರುಗಿಸಿತು. ಹಾರಿಹೋಗುತ್ತಿರುವ ಪ್ರಸಿದ್ದವಾದ ಪಾರೆಯಂಬುಗಳ ಜಿನುಗು ಮಳೆಯು ಸೈಂಧವನನ್ನು ಹೆದರಿಸಿ ವ್ಯಥೆಪಡಿಸಿತು. ಚಕ್ರವ್ಯೂಹದ ಬಾಗಿಲಿನಲ್ಲಿ ಮುತ್ತಿಕೊಂಡು ನಿಂತಿದ್ದ ಆನೆಯ ಸೈನ್ಯವನ್ನು ಓಡಿಸಿ ಚೂರುಚೂರಾಗಿ ತರಿದು ಶತ್ರುಸೇನಾಸಮುದ್ರವನ್ನು ಅಭಿಮನ್ಯುವು ನೂಕಿ