________________
೧೦೫
೫೩೮ / ಪಂಪಭಾರತಂ ಚಂii #ುರಿತ ಕೃಪಾಣಪಾಣಿಗಿದಿರಂ ನಡೆದಳ್ಳು ತೊಟ್ಟು ನಾಲ್ಕು ಡೊ
ಕರದೂಳೆ ಮಿಕ್ಕ ದಿಕ್ಕರಿಯನಿಕ್ಕುವವೋಲ್ ನೆಲಕಿಕ್ಕಿ ಪತ್ತಿ ಕ | ತರಿಗೊಳೆ ಕಾಯ್ದು ಕಣ್ಣುಮುಟ್ಟುಸಿರ್ ಕುಸಿದಂತಕನಂತಮೆಯ ಮೆಯ್
ಪರವಶವಾಗೆ ಜೋಲನಭಿಮನ್ಯು ಭಯಂಕರ ರಂಗಭೂಮಿಯೊಳ್ II೧೦೪ ಕಂ|| ಅನಿತಿ ಸತ್ತ ನರನಂ
ದನಂಗೆ ಕಣ್ ಸೋಲ್ಕು ಬಗೆಯದಮರೇಂದ್ರನನಿ | ನೆನಗೆ ತನಗೆಂಬ ದೇವಾಂ ಗನೆಯರ ಕಳಕಳಮೆ ಪಿರಿದುಮಾಯ್ತಂಬರದೊಳ್ || ಅಭಿಮನ್ಯು ಮರಣ ವಾರ್ತಾ ಪ್ರಭೂತ ಶೋಕಾಗಿ ಧರ್ಮತನಯನನಿರದಂ | ದಭಿಭವಿಸಿ ತನ್ನನಳುರ್ದಂ ತೆ ಭಾಸ್ಕರಂ ಕೆಂಕಮಾದನಸ್ತಾಚಲದೊಳ್ ||
೧೦೬ ವli ಅಂತು ನಿಜತನೂಜನ ಮರಣ ಶ್ರವಣಾಶನಿಘಾತದಿಂ ಕುಳಶೈಲಂ ಕೆಡವಂತ ಕೆಡೆದು ಮೂರ್ಛಾಗತನಾದ ಧರ್ಮಪುತ್ರನಂ ಭೀಮಸೇನ ನಕುಳ ಸಹದೇವ ಸಾತ್ಯಕಿ ದ್ರುಪದ ವಿರಾಟಾದಿಗಳಪಹತ ಕದನ ಮುಂದಿಟೊಡಗೊಂಡು ಬೀಡಿಂಗೆ ಪೊದರಾಗಳ ಧರ್ಮಪುತನ ಶೋಕಮನಾಳೆಸಲೆಂದು ಕೃಷ್ಣಪಾಯನಂ ಬಂದು ಸಂಸಾರಸ್ಥಿತಿಯನಳೆಯದವರಂತೆ ನೀನಿಂತು ಶೋಕಾಕ್ರಾಂತನಾದೊಡೆಕತ್ತಿಯೊಡನೆ ಹಾಯ್ದನು. ೧೦೪, ಪ್ರಕಾಶದಿಂದ ಕೂಡಿರುವ ಕತ್ತಿಯನ್ನು ಹಿಡಿದಿರುವ ಗದಾಯುಧನಿಗೆ ಅಭಿಮನ್ಯುವು ಇದಿರಾಗಿ ನಡೆದು ಭಯಂಕರವಾದ ರೀತಿಯಲ್ಲಿ ಥಟ್ಟನೆ ಹಾಯ್ದು ಡೊಕ್ಕರವೆಂಬ ಪಟ್ಟಿನಿಂದ ದಿಗ್ಗಜವನ್ನು ಇಕ್ಕುವಂತೆ ಅವನನ್ನು ನೆಲಕ್ಕೆ ಅಪ್ಪಳಿಸಿ ಅವನ ಮೇಲೆ ಹತ್ತಿ ಕತ್ತರಿಯಂತೆ ಹಿಡಿಯಲು ಆ ಗದಾಯುಧನ ಕೋಪದಿಂದ ಅವನ ಕಣ್ಣಿನ ಗುಳ್ಳೆ ಹೊರಕ್ಕೆ ಬಂದು ಉಸಿರು ಕುಗ್ಗಿ ಸತ್ತನು. ಅಭಿಮನ್ಯುವು ಭಯಂಕರವಾದ ಯುದ್ಧಭೂಮಿಯಲ್ಲಿ ಮೂರ್ಛಹೋಗಿ ಜೋತುಬಿದ್ದನು. ೧೦೫. ಅಷ್ಟು ಪರಾಕ್ರಮವನ್ನು ಪ್ರದರ್ಶಿಸಿ ಸತ್ತ ಅಭಿಮನ್ಯುವಿಗೆ ಮೋಹಗೊಂಡು ದೇವೇಂದ್ರನನ್ನೂ ಅಲಕ್ಷಿಸಿ ಅಭಿಮನ್ಯುವು ನನಗೆ ಬೇಕು ತನಗೆ ಬೇಕು ಎನ್ನುವ ಅಪ್ಪರಸ್ತ್ರೀಯರ ಕಳಕಳ ಶಬ್ದವೇ ಆಕಾಶಪ್ರದೇಶದಲ್ಲಿ ವಿಶೇಷವಾಯಿತು. ೧೦೬. ಅಭಿಮನ್ಯುವಿನ ಮರಣವಾರ್ತೆಯಿಂದ ಉಂಟಾದ ಶೋಕಾಗ್ನಿಯು ಧರ್ಮರಾಜನನ್ನು ಅಂದು ಬಿಡದೆ ಆಕ್ರಮಿಸಿ ತನ್ನನ್ನೂ ವ್ಯಾಪಿಸಿದಂತೆ (ಆವರಿಸಿರುವಂತೆ) ಅಸ್ತಪರ್ವತದಲ್ಲಿ ಸೂರ್ಯನು ಕೆಂಪಗಾದನು. ವ| ಹಾಗೆ ತನ್ನ ಮಗನು ಸತ್ತ ಮಾತನ್ನು ಕೇಳುವಿಕೆಯೆಂಬ ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳು ಉರುಳುವಂತೆ ಉರುಳಿ ಮೂರ್ಛ ಹೋದನು. ಭೀಮಸೇನ, ನಕುಲ, ಸಹದೇವ, ಸಾತ್ಯಕಿ, ದ್ರುಪದ, ವಿರಾಟನೇ ಮೊದಲಾದವರು ಯುದ್ಧವನ್ನು ನಿಲ್ಲಿಸಿ ಧರ್ಮಜನನ್ನು ಮುಂದಿಟ್ಟುಕೊಂಡು ಯುದ್ಧದಿಂದ ಹಿಂತಿರುಗಿದವರಾಗಿ ತಮ್ಮಬೀಡಿಗೆ ಹೋದರು. ಆಗ ಧರ್ಮರಾಜನ ದುಃಖವನ್ನು ಶಮನಮಾಡಬೇಕೆಂದು ವೇದವ್ಯಾಸರೇ ಬಂದರು.