________________
೫೩೦/ ಪಂಪಭಾರತಂ
ವ|| ಎಂದು ನುಡಿದ ಪನ್ನಗಧ್ವಜನ ನುಡಿಗೆ ಕಾರ್ಮುಕಾಚಾರ್ಯನಿಂತೆಂದಂ
ಮ||
ಎನಗಾರ್ಗಮಸಾಧನ ವಿಜಯಂ ನೀನಾತನಂ ಗೆಲ್ವ ಮಾ ತನಮೋಘಂ ಬಿಸುಡಿಂದ ನಾಳೆ ವಿಜಯಂ ಮಾರ್ಕೊಳ್ಳದಂದುರ್ಕಿ ಪೊ | ಕನನಾಂತೋರ್ವನನಿಕ್ಕುವಂ ಕದನದೊಳ್ ಮೇಣ್ ಕಟ್ಟುವಂ ಧರ್ಮ ನಂ ದನನಂ ನೀನಿದನಿಂತು ನಂಬು ಬಗೆಯಲ್ವೇಡನ್ನನಂ ಭೂಪತೀ 1 ೮೪ ವ|| ಎಂಬುದುಮಾನಿನಿತಂ ನಿಮ್ಮ ಪೂಣಿಸಲೆ ಬಂದೆನೆಂದು ಪೊಡಮಟ್ಟು ಬೀಳ್ಕೊಂಡು ಪೋಗಿ ಸಂಸಪಕರ್ಕಳ್ ಬಡೆಯನಟ್ಟಿ ಬರಿಸಿ
ಚಂll
ಅರಿಗನನಾಂಗ ಗಂಡುಮದಟು ನಿಮಗಾವಗಮಾದುದಾಹವಾ ಜಿರದೊಳದರ್ಕೆ ನಾಳೆ ನರನಂ ತೆಗೆದುಯ್ದುದು ಧರ್ಮಪುತ್ರನಂ | ಗುರು ಪಿಡಿದಪ್ಪನೆಂದವರನಾಗಲೆ ಪೂಣಿಸಿ ಪೋಗವೇಟ್ಟು ಮ ಚರದೊಳೆ ಮಾಣದೊಡ್ಡಿದನಸುಂಗೊಳೆ ಕಕ್ಕರ ಸಂಜೆ ಸಂಜೆಯೊಳ್ || ೮೫
ವ|| ಆಗಳ್ ಪಾಂಡವ ಪತಾಕಿನಿಯುಮಿರದ ಪೊಮಟ್ಟರ್ಧಚಂದ್ರವೂಹಮನೊಡ್ಡಿ ನಿಲೆ ಸಂಸಪಕರ್ ತಮಗೆ ಮಿಲ್ಕುಗರೆವಂತೆ ವಿಕ್ರಮಾರ್ಜುನನಂ ಕರೆದುಯರಿತ್ತ
ಕೊಲ್ಲುತ್ತಿರುವುದನ್ನು ನೋಡಿ ನೀವು ಹೀಗೆ ಉಪೇಕ್ಷಿಸಿ ನೋಡುತ್ತೀರಿ ಎಂದ ಮೇಲೆ ನಾನು ಮತ್ತಾರನ್ನು ನಂಬಲಿ ವ ಎಂದು ಹೇಳಿದ ದುರ್ಯೋಧನನ ಮಾತಿಗೆ ದ್ರೋಣನು ಹೀಗೆ ಹೇಳಿದನು-೮೪, ಮಹಾರಾಜನೇ ಅರ್ಜುನನು ನನಗಲ್ಲ, ಯಾರಿಗೂ ಅಸಾಧ್ಯನಾದವನು. ನೀನು ಅವನನ್ನು ಗೆಲ್ಲುವ ಮಾತು ವ್ಯರ್ಥವಲ್ಲವೇ? ಅದನ್ನು ಈ ದಿನವೇ ಬಿಸಾಡು. ನಾಳೆಯ ದಿನ ಅರ್ಜುನನು ಪ್ರತಿಭಟಿಸದಿರುವಾಗ ಅಹಂಕಾರದಿಂದ ಹೊಕ್ಕಂಥ ಯಾವನನ್ನಾದರೂ ಎದುರಿಸಿ ಯುದ್ಧದಲ್ಲಿ ಕೊಲ್ಲುತ್ತೇನೆ. ಅಲ್ಲದೆ ಧರ್ಮರಾಜನನ್ನು ಸೆರೆಹಿಡಿಯುತ್ತೇನೆ. ನೀನು ಇದನ್ನು ನಂಬು ನನ್ನನ್ನು ಅಂಥವನೆಂದು ಗಣಿಸಬೇಡ, ವ|| ಎನ್ನಲು ನಾನು ನಿಮ್ಮಲ್ಲಿ ಇಷ್ಟನ್ನು ಪ್ರತಿಜ್ಞೆಮಾಡಿಸಬೇಕೆಂದೇ ಬಂದೆನೆಂದು ನಮಸ್ಕಾರಮಾಡಿ ಅವರನ್ನು ಬಿಟ್ಟುಹೋಗಿ ಸಂಸಪ್ತಕರುಗಳಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡನು. ೮೫. ಯುದ್ಧರಂಗದಲ್ಲಿ ಅರ್ಜುನನನ್ನು ಪ್ರತಿಭಟಿಸುವ ಪೌರುಷವೂ ಶಕ್ತಿಯೂ ನಿಮಗೆ ಯಾವಾಗಲೂ ಇದೆ. ಅದಕ್ಕಾಗಿ ನಾಳೆ ಅರ್ಜುನನನ್ನು ದೂರಕ್ಕೆ ಕರೆದುಕೊಂಡು ಹೋಗುವುದು. ದ್ರೋಣಾಚಾರ್ಯನು ಧರ್ಮಪುತ್ರನನ್ನು ನಾಳೆ ಸೆರೆಹಿಡಿಯುತ್ತಾನೆ ಎಂದು ಅವರನ್ನು ಆಗಲೇ ಪ್ರತಿಜ್ಞೆ ಮಾಡಿಸಿ ಹೋಗಹೇಳಿದನು. ಮಾತ್ಸರ್ಯದಿಂದ ತಡವಿಲ್ಲದೆ ಬೆಳಗಿನ ಜಾವದಲ್ಲಿಯೇ ಎಂತಹ ಕಠಿಣರಾದವರೂ ಹೆದರುವ ಹಾಗೆ ಶತ್ರುಗಳ ಪ್ರಾಣಾಪಹಾರಕ್ಕಾಗಿ ಭಯಂಕರವಾದ ಸೈನ್ಯವನ್ನು ಒಡ್ಡಿದನು-ವ|| ಆಗ ಪಾಂಡವಸೈನ್ಯವೂ ಸುಮ್ಮನಿರದೆ ಹೊರಟು ಅರ್ಧಚಂದ್ರಾಕಾರದ ಸೈನ್ಯರಚನೆಯನ್ನು ಚಾಚಿ ನಿಲ್ಲಲು ಸಂಸಪ್ತಕರು ತಮಗೆ ಮೃತ್ಯುವನ್ನು ಕರೆಯುವಂತೆ ಅರ್ಜುನನನ್ನು