________________
ಏಕಾದಶಾಶ್ವಾಸಂ /೫೩೧
ಅನವದ್ಯ || ಅಜೆಪಿದಂ ಗುರು ಭಾರ್ಗವನಿಂತೀಯೊ ನಿದಂ ಗೆಲಲಾವನುಂ ನೆಯನುರ್ಕಿನಳುರ್ಕಯಿನೊರ್ವಂ ಪೊಕ್ಕೊಡೆ ಪೊಕ್ಕನೆ ಮತ್ತಣಂ । ಪೊಮಡಂ ತಲೆದೊಟ್ಟುವನಂತಾ ಪಾಂಡವಸೈನ್ಯಮನೆಂದು ಬಿ ಲೆಯನೊಡ್ಡಿದನಂಕದ ಚಕ್ರವ್ಯೂಹಮನಾಹವರಂಗದೊಳ್ || ೮೬
ವ|| ಅಂತೊಡ್ಡಿದ ಚಕ್ರವ್ಯೂಹದ ನಡುವೆಡೆಯಂದು ಕಳಿಂಗರಾಜನ ಕರಿಘಟೆಗಳುಮಂ ಕರ್ಣ ಶಲ್ಯ ಶಕುನಿ ಕೃಪ ಕೃತವರ್ಮ ಭೂರಿಶ್ರವೋಶ್ವತ್ಥಾಮ ದುರ್ಯೋಧನ ವೃಷಸೇನ ಲಕ್ಕಣಾದಿಗಳಪ್ಪತಿರಥ ಮಹಾರಥ ಸಮರಥಾರ್ಧರಥರ್ಕಳನಿರಿಸಿ ಮತ್ತಮವರ ಬಳಸಿಯುಮನೇಕ ಸಾಮಜಬಲಂಬೆರಸು ಜಯತೇನ ಸುದಕ್ಷಿಣ ಕಾಂಭೋಜಾದಿ ನಾಯಕರನಿರಿಸಿ ಮತ್ತಮವರ ಕೆಲದೊಳೆಡೆಯಲೆದು ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಷಣ ಹಳಾಯುಧ ಮುಸಳಾಯುಧ ಕಾಳ ನೀಳ ರೂಕ್ಷ ರಾಕ್ಷಸ ಬಲಮನಿರಿಸಿ ಮತ್ತಮವರ ಕೆಲದೊಳಿವರ್ಗಿವರ್ ಪಾಸಟಿಯಾಗಿರ್ಪುದೆಂದು ನಿಂದ ನೆಲೆಯೊಳ್ ತಳರದ ನಿಲ್ದಂತಾಗಿರಿಸಿ ಗುಹೆಯ ಬಾಗಿಲೊಳ್ ಸಿಂಹಮಿರ್ಪಂದದಿಂ ಭಾರದ್ವಾಜಂ ಸಿಂಧುರಾಜಂಬೆರಸು ಚಕ್ರವ್ಯೂಹದ ಬಾಗಿಲೊಳ್ ನೆದು ಮೆದು ನಿಂದಾಗಳ್ ಧರ್ಮಪುತ್ರನೇಗೆಯ್ದ ತನುಮನಯದಭಿಮನ್ಯುವಂ ಕರೆದಿಂತೆಂದಂ
ಕರೆದುಕೊಂಡೊಯ್ದರು. ಈ ಕಡೆ ೮೬. ಚಕ್ರವ್ಯೂಹ ರಚನೆಯನ್ನು ಆಚಾರ್ಯನಾದ ಪರಶುರಾಮನು ನನಗೆ ಉಪದೇಶಮಾಡಿದ್ದಾನೆ. ಇದನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಉತ್ಸಾಹಾತಿಶಯದಿಂದ ಯಾವನಾದರೊಬ್ಬ ಪ್ರವೇಶಮಾಡಿದರೆ ಅವನು ಪ್ರವೇಶಮಾಡಿದವನೇ. ಪುನಃ ಹೇಗೂ ಹೊರಟುಹೋಗಲಾರ; ಆ ಪಾಂಡವ ಸೈನ್ಯವನ್ನು ಇದರಿಂದ ಕತ್ತರಿಸಿ ಹಾಕುತ್ತೇನೆ ಎಂದು ಬಿಲ್ಲೋಜನಾದ ದ್ರೋಣನು ಪ್ರಸಿದ್ಧವಾದ ಚಕ್ರವ್ಯೂಹವನ್ನು ಯುದ್ಧರಂಗದಲ್ಲಿ ಹೂಡಿದನು - ವ|| ಹಾಗೆ ಒಡ್ಡಿದ ಚಕ್ರವ್ಯೂಹದ ಮಧ್ಯಭಾಗದಲ್ಲಿ ಯೋಗ್ಯವಾದ ಸ್ಥಳಗಳನ್ನು ಗೊತ್ತುಮಾಡಿ ಕಳಿಂಗ ರಾಜನ ಆನೆಯ ಸಮೂಹವನ್ನೂ ಕರ್ಣ, ಶಲ್ಯ, ಶಕುನಿ, ಕೃತವರ್ಮ, ಭೂರಿಶ್ರವ, ಅಶ್ವತ್ಥಾಮ, ದುರ್ಯೋಧನ, ವೃಷಸೇನ, ಲಕ್ಷಣನೇ ಮೊದಲಾದ ಅತಿರಥ ಮಹಾರಥ ಸಮರಥ ಅರ್ಧರಥರುಗಳನ್ನು ಇರಿಸಿದನು. ಅದರ ಸುತ್ತಲೂ ಅನೇಕ ಆನೆಯ ಸೈನ್ಯದೊಡನೆ ಜಯತೇನ, ಸುದಕ್ಷಿಣ, ಕಾಂಭೋಜರೇ ಮೊದಲಾದ ನಾಯಕರುಗಳನ್ನಿಟ್ಟನು. ಮತ್ತು ಅವರ ಪಕ್ಕದಲ್ಲಿ ಸೂಕ್ತ ಸ್ಥಳವನ್ನು ವಿಚಾರಮಾಡಿ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷಣ, ಹಳಾಯುಧ, ಮುಸಳಾಯುಧ, ಕಾಳನೀಳರ ಭಯಂಕರವಾದ ರಾಕ್ಷಸ ಸೈನ್ಯವನ್ನಿರಿಸಿದನು. ಅವರ ಪಕ್ಕದಲ್ಲಿ ಇವರಿಗೆ ಇವರು ಸಮನಾಗಿರುತ್ತದೆ ಎಂದು ನಿಂತ ಸ್ಥಳದಲ್ಲಿಯೇ ಚಲಿಸದೆ ನಿಲ್ಲುವ ಹಾಗೆ ಇರಿಸಿ ಗುಹೆಯ ಬಾಗಿಲಿಗೆ ಸಿಂಹವಿರುವ ಹಾಗೆ ದ್ರೋಣಾಚಾರ್ಯನು ಸೈಂಧವನೊಡಗೂಡಿ ಚಕ್ರವ್ಯೂಹದ ಬಾಗಿಲಿನಲ್ಲಿ ಕೂಡಿಕೊಂಡು ಮೆರೆದು ನಿಂತನು. ಧರ್ಮರಾಜನು ಏನು