________________
ಏಕಾದಶಾಶ್ವಾಸಂ | ೫೨೯ ಉll ಇತ್ತರಿಗಂಗಮಿತ್ರ ಜಯಮಪುದುಮತ್ತಮರರ್ಕಳಾರ್ದು ಸೂ
ಸುತ್ತಿಗೆ ಪುಷ್ಪವೃಷ್ಟಿಗಳನೋಗರವೂಗಳ ಬಂಡನೆಯೆ ಪೀ | ರುಡವಂದುವಿಂದ್ರವನದಿಂ ಮಣಿದುಂಬಿಗಳಿಂದ್ರನೀಲಮಂ ಮುತ್ತುಮನೋಳಿಯೋಳಿಯೊಳ ಕೂದಲಲಿಕ್ಕಿದ ಮಾಲೆಯಂತೆವೋಲ್ |೮೧ ಕ೦ll ಧರಣೀಸುತನದಂ ದಿ |
ಕರಿ ಕಡೆದುದು ನರಶರಂಗಳಿಂ ಭುವನಮುಮಿ || ನುರಿಯದಿರದಾನಡಂಗುವೆ ನಿರದೆಂಬವೋಲರ್ಕನಪರಜಳನಿಧಿಗೀಚಿದಂ ||
೮೨ ವ|| ಆಗಳೆರಡುಂ ಪಡೆಗಳಪಹಾರಡೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳೆ ಪೋಪುದುಂ ಸುಯೋಧನಂ ಭಗದತ್ತನ ಸಾವಿಂಗಲಲ್ಲು ತೊಟ್ಟ ಸನ್ನಣಮನಪೊಡಂ ಕಳೆಯದೆಯು ಮರಮನೆಗೆ ಪೋಗದ ಕುಂಭಸಂಭವನಲ್ಲಿಗೆ ವಂದುಮll ಮಸಕಂಗುಂದದ ಸುಪ್ರತೀಕ ಗಜಮಂ ಧಾತ್ರೀಸುತಂ ಕೀತಿ ಚೋ
ದಿಸಿ ಭೀಮಂ ಗೆಲೆ ಮುಟ್ಟೆವಂದು ಹರಿಯುಂ ತಾನುಂ ಭರಂಗೆಯು ತ | ನೈಸಕಂಗಾಯದಧರ್ಮಯುದ್ಧದೆ ನರಂ ಕೊಲ್ವಲ್ಲಿ ಕಂಡಿಂತುಪೇ ಕ್ಷಿಸಿ ನೀಮುಂ ನಡೆ ನೋಡುತಿರ್ದರನೆ ಮತ್ತಿನ್ನಾರನಾಂ ನಂಬುವಂ || ೮೩
ಹರಿದುಹೋಗುವಂತೆ ಹೊಡೆಯಲು ದಿಕ್ಕರಿಯ ತಲೆಯೂ ಆತನ ತಲೆಯೂ ಕೈಗಳೂ ಭಾಗಮಾಡಿದಂತೆ ಆಶ್ಚರ್ಯಯುತವಾಗಿ ಜೊತೆಯಾಗಿಯೇ ಭೂಮಿಯ ಮೇಲೆ ಉರುಳಿದುವು. ೮೧, ಈ ಕಡೆ ಅರಿಗನಿಗೆ (ಅರ್ಜುನನಿಗೆ ಶತ್ರುಜಯವಾಗಲು ಆ ಕಡೆ ದೇವತೆಗಳು ಜಯಘೋಷಮಾಡಿ ಹೂಮಳೆಯನ್ನು ಸುರಿಸಿದರು. ಆ ಮಿಶ್ರಪುಷ್ಪಗಳ ವಾಸನೆಯನ್ನು ಪೂರ್ಣವಾಗಿ ಹೀರುತ್ತ ಇಂದ್ರನ ತೋಟವಾದ ನಂದನವನದಿಂದ ಮರಿದುಂಬಿಗಳು ಇಂದ್ರನೀಲಮಣಿರತ್ನವನ್ನೂ ಮುತ್ತುಗಳನ್ನೂ ದಂಡದಂಡೆಯಾಗಿ ಸಾಲಾಗಿ ಪೋಣಿಸಿ ಜೋಲುಬಿಟ್ಟ ಹಾರದಂತೆ ಜೊತೆಯಲ್ಲಿಯೇ ಬಂದುವು. ೮೨. ಅರ್ಜುನನ ಬಾಣದಿಂದ ಭೂಪುತ್ರನಾದ ಭಗದತ್ತನು ನಾಶವಾದನು. ದಿಗ್ಗಜವು ಕೆಳಗುರುಳಿತು. ಪ್ರಪಂಚವು ಇನ್ನು ಸುಟ್ಟು ಹೋಗದೇ ಇರುವುದಿಲ್ಲ: ನಾನು ಇಲ್ಲಿರದೆ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು. ವ|| ಆಗ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಸೂಚಿಸುವ ವಾದ್ಯಗಳನ್ನು ಬಾಜಿಸಲು ತಮ್ಮತಮ್ಮಶಿಬಿರಕ್ಕೆ ಹೋದುವು. ದುರ್ಯೊಧನನು ಭಗದತ್ತನ ಸಾವಿಗೆ ದುಃಖಪಟ್ಟು ಧರಿಸಿದ ಯುದ್ಧಕವಚವನ್ನು ಕಳೆಯದೆಯೂ ಅರಮನೆಗೆ ಹೋಗದೆಯೂ ದ್ರೋಣಾಚಾರ್ಯರ ಹತ್ತಿರಕ್ಕೆ (ಬಳಿಗೆ) ಬಂದನು-೮೩. ಮದವಡಗದ ಸುಪ್ರತೀಕಗಜವನ್ನು ಭಗದತ್ತನು ಭಯಶಬ್ದಮಾಡುತ್ತ ರೇಗಿಸಿ ಮುಂದೆ ನುಗ್ಗಿಸಿ ಭೀಮನನ್ನು ಗೆಲ್ಲಲು ಕೃಷ್ಣನೂ ಅರ್ಜುನನೂ ಹತ್ತಿರಕ್ಕೆ ಬಂದು ವೇಗದಿಂದ (ತನ್ನ ಮಾತಿನಂತೆ ನಡೆದುಕೊಳ್ಳದೆ ಯುದ್ಧ ಮಾಡುವುದಿಲ್ಲವೆಂಬ ತನ್ನ ಪ್ರತಿಜ್ಞೆಯನ್ನು, ಕಾರ್ಯವನ್ನು, ಮಾತನ್ನು ಪರಿಪಾಲಿಸದೆ) ಅಧರ್ಮಯುದ್ಧದಲ್ಲಿ ಅರ್ಜುನನು