________________
ಏಕಾದಶಾಶ್ವಾಸಂ | ೫೦೫ ಮಃ ಎಡೆಗೊಂಡಂಕದ ಶಲ್ಯ ಸೈಂಧವ ಕೃಪ ದ್ರೋಣರ್ಕಳುಂ ಸಾಯಕಂ
ಗಿಡ ತನ್ನೆಚ್ಚ ಶರಾಳಿಗಳ ವಿಲಯ ಕಾಲೋಲ್ಬಂಗಳಂ ತಾಗಿದಾ | *ಗಡೆ ತತ್ತೂತ ರಥಾಶ್ವ ಕೇತನ ಶರವಾತಂಗಳುಂ ನುರ್ಗಿಕ
ಇಡೆ ಬೆನ್ನಟ್ಟಿದನಂತು ನಮ್ಮ ಹರಿಗಂ ಗಂಡಂ ಪೆಟರ್ ಗಂಡರೇ | ೧೩
ವ|| ಅಂತತಿರಥ ಸಮರಥ ಮಹಾರಥಾರ್ಧರಥರ್ಕಳನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆದೆಸೆಗೆ ಕೆದಕುವನ್ನಮೆಚ್ಚಿಟ್ಟಿದಾಗಳ್ ಸೋಲ್ಕ ತನ್ನ ಬಲಮನಳುಂಬಮಾದ ವಿಕ್ರಮಾರ್ಜುನನ ಭುಜಬಲಮುಮಂ ಕಂಡು ಕನಕತಾಳಧ್ವಜಂಗೆ ಪನ್ನಗಧ್ವಜನಿಂತೆಂದಂತರಳ 11 ಮುಳಿಯೆ ಬಿನ್ನಪಮಜ್ಜ ದಾಯಿಗರೊಳ್ ವಿರೋಧಮನಿಂತು ಬ
ಛಳನೆ ಮಾಲುದನಂದು ನಿಮ್ಮನೆ ನಂಬಿ ಮಾಡಿದೆನಿಂತು ಗೋ || ವಳಿಗನಂ ಗೆಡೆಗೊಂಡು ಮುಂ ಬಳೆದೊಟ ಪೇಡಿಯ ನಿಮನಿಂ .
ತಿಳಿಸಿ ಮದ್ದಲಮೆಲ್ಲಮಂ ಕೊಲೆ ನೋಡುತಿರ್ಪುದು ಪಾಟಿಯೇ || ೧೪ ಕoll ಮೇಳದೊಳೆಂತುಂ ಪೋ ಪೆಜಿ
ರಾಳಂ ಛಿದ್ರಿಸುವೆವೆಂಬ ಪಾಡವರೊಳ್ ನೀಂ | ಮೇಳಿಸಿ ನಣನೆ ಬಗೆದಿರ್
ಜೋಳದ ಪಾಟಿಯುಮನಿನಿಸು ಬಗೆಯಿಂ ನಿಮ್ಮೊಳ್ || ವ|| ಎಂಬುದುಂ ಸಿಂಧುತನೂಜನಿಂತೆಂದಂ
೧೫
ಕೌರವಸೈನ್ಯವೆಲ್ಲ ಒಟ್ಟಿಗೆ ಕೂಗಿಕೊಂಡು ಓಡಿ ಭೀಷ್ಮನ ಮರೆಹೊಕ್ಕವು. ೧೩. ನಡುವೆ ಬಂದ ಶಲ್ಯ ಸೈಂಧವ ಕೃಪ ದ್ರೋಣಾದಿಗಳ ಬಾಣಗಳು ನಿಷ್ಟಯೋಜಕವಾದುವು. ಭೀಷ್ಮರು ಪ್ರಯೋಗಿಸಿದ ಬಾಣಸಮೂಹಗಳು ಪ್ರಳಯಕಾಲದ ಉಲ್ಕಾಪಾತಗಳು ಸರಿ, ಆದರೂ ಅರ್ಜುನನು ಅವರ ಆ ಸಾರಥಿ, ತೇರು, ಕುದುರೆ, ಬಾವುಟ, ಬಾಣಸಮೂಹ - ಎಲ್ಲವೂ ಪುಡಿಯಾಗುವ ಹಾಗೆ ಹಿಂಬಾಲಿಸಿದನು. ಶೂರನೆಂದರೆ ಅರಿಕೇಸರಿ, ಅವನಂತೆ ಮತ್ತಾರಿದ್ದಾರೆ. ವ|| ಹಾಗೆ ಅತಿರಥ ಸಮರಥ ಮಹಾರಥ ಅರ್ಧರಥರುಗಳನ್ನು ಆನೆ ತುಳಿದು ಕದಡಿದ ಕುಂಟೆಯ ನೀರಿನ ಹಾಗೆ ದಿಕ್ಕುದಿಕ್ಕಿಗೂ ಚದುರುವ ಹಾಗೆ ಎಬ್ಬಿಸಿ ಓಡಿಸಿದಾಗ ದುರ್ಯೋಧನನು ಭೀಷ್ಮನನ್ನು ಕುರಿತು ಹೀಗೆಂದನು. ೧೪. ಅಜ್ಜ ವಿಜ್ಞಾಪನೆ; ಕೋಪಮಾಡಬೇಡಿ, ದಾಯಾದಿಗಳಲ್ಲಿ ಈ ರೀತಿಯ ವಿರೋಧವನ್ನು ಮಾಡುವಾಗ ನಿಮ್ಮ ವಿಶೇಷವಾದ ಸಹಾಯವನ್ನೇ ನಂಬಿ ಮಾಡಿದೆನು. ಹೀಗಿರುವಲ್ಲಿ ಈಗ ಹೀಗೆ ದನಕಾಯುವವನೊಬ್ಬನ ಸ್ನೇಹಮಾಡಿಕೊಂಡು ಬಳೆದೊಟ್ಟ ಹೇಡಿಯೊಬ್ಬನು ನಿಮ್ಮನ್ನು ಹೀಗೆ ಅವಮಾನಮಾಡಿ ನನ್ನ ಸೈನ್ಯವೆಲ್ಲವನ್ನೂ ಕೊಲ್ಲುತ್ತಿರಲು ಅದನ್ನು ನೀವು ಉದಾಸೀನವಾಗಿ ನೋಡುತ್ತಿರುವುದು ಸೂಕ್ತವೇ? ೧೫. 'ಸ್ನೇಹದಿಂದ ಪರಪಕ್ಷದ ಶೂರರನ್ನು ಭೇದಿಸಬಲ್ಲೆವು ಬಿಡು' ಎಂಬುದಾಗಿರುವ ಪಾಂಡವರಲ್ಲಿ ನೀವು ಸೇರಿಕೊಂಡು ಬಾಂಧವ್ಯವನ್ನೇ ಬಗೆದಿರಿ; ನಿಮ್ಮ ಮನಸ್ಸಿನಲ್ಲಿ ಉಪ್ಪಿನ ಋಣವನ್ನು ಸ್ವಲ್ಪ ಯೋಚಿಸಿ. ವll ಎನ್ನಲು ಭೀಷ್ಮನು ಹೀಗೆ ಹೇಳಿದನು.