________________
೫೦೪) ಪಂಪಭಾರತಂ ಮll ಮೊದಲಿಟ್ಟಂ ಕೊಲಲೆಂದು ಕೌರವರನಿಕಿರ್ಪನಾರ್ದುರ್ಚಿ ಮು
ಕದಿವಂಗಾಂ ಕರಮೆಯ ಕೂರ್ಪನಿವರುಂ ಸತ್ತದ್ದರಿಂದಿಂಗೆ ಕಾ | ವುದನಾಂ ಕಾವನನುತ್ತ ಬೇತೆ ರಥಮಂ ಬಂದೇಳಿ ಪೋ ಪೋಗಲೆಂ ದೊದುತ್ತುಂ ಪರಿತಂದು ತಾಗಿ ತಗರ್ದ೦ ಗಂಗಾಸುತಂ ಭೀಮನಂ Iloo
ವll ಅನ್ನೆಗಮ ಸಂಸಪ್ತಕ ಬಲಮಲ್ಲಮನಳ ಪಳ ಕಿವುಟಿದುಟಿದು ಕೊಲ್ವಲ್ಲಿ ವಿಕ್ರಮಾರ್ಜುನಂ ಮುರಾಂತಕನೊಳಿಂತೆಂದಂಚಂil ಪ್ರಳಯ ಪಯೋಧಿ ನಾದಮನೆ ಪೋಲು ರಣಾನಕ ರಾವಮೀಗಳ
ಗಳಮೆಸೆದಪುದತ್ತ ಕಳವಂಬಿನ ಬಲ್ಬರಿಯಿಂದಮಾ ದಿಶಾ || ವಳಿ ಮಸುಳ್ಳಿಂತು ನೀಳಪುದು ಪೋಗದೆ ಕಾದುವ ಗಂಡರಿಲ್ಲ ನಿ
ಇಳಿಯನುಮಾ ವೃಕೋದರನುಮಲ್ಲದರಿಲ್ಲ ಪುರ್ ಮುರಾಂತಕಾ || ೧೧ ಚಂll .ಗುರು ಗುರುಪುತ್ರ ಶಲ್ಯ ಭಗದತ್ತ ನದೀಸುತರೆಂಬ ಸಂದ ಬೀ
ರರೆ ಮಜುವಕ್ಕಮಣನೊಡನಿರ್ವರೆ ಕೂಸುಗಳೆಂಬ ಶಂಕೆಯುಂ | ಪಿರಿದೆನಗೀಗಳಾದಪುದು ಮಾಣದೆ ಚೋದಿಸು ಬೇಗಮತ್ತಲ
ರಥವನೆಂದು ಭೋರ್ಗರೆಯ ಬಂದನರಾತಿಗೆ ಮತ್ತು ಬರ್ಪವೋಲ್೧೨
ವ|| ಅಂತು ನೆಲನದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ ಕುರುಬಲಮೆಲ್ಲ ಮೋಲ್ಕನುಲಿದೋಡಿ ಸುರಾಪಗಾನಂದನನ ಮತಯಂ ಪೊಕ್ಕಾಗಲ್
ಅವಕಾಶ ಕೊಡದೆ ಸಮೀಪಕ್ಕೆ ಬಂದಾಗ ೧೦. 'ಇವನು ಕೌರವರನ್ನು ಕೊಲ್ಲಬೇಕೆಂದು ಪ್ರಾರಂಭಿಸಿದ್ದಾನೆ. ಆರ್ಭಟಮಾಡಿ ಕತ್ತರಿಸಿ ನುಂಗದೇ ಬಿಡುವುದಿಲ್ಲ. ಇವನನ್ನು ನಾನು ವಿಶೇಷವಾಗಿ ಪ್ರೀತಿಸುತ್ತೇನೆ. ಇವರೂ ಸತ್ತುಹೋಗುತ್ತಾರೆ ಎಂಬುದು ನಿಜವೇ ಆದರೂ ಈ ದಿನ ನಾನು ಸಾಮರ್ಥ್ಯವಾದಷ್ಟು ರಕ್ಷಿಸುತ್ತೇನೆ ಎನ್ನುತ್ತ ಬೇರೊಂದು ರಥವನ್ನು ತರಿಸಿ ಅದನ್ನು ಏರಿಕೊಂಡು ಹೋಗಬೇಡ, ಹೋಗಬೇಡ' ಎಂಬುದಾಗಿ ಕೂಗಿಕೊಳ್ಳುತ್ತಾ ಓಡಿ ಬಂದು ಭೀಷ್ಮನು ಭೀಮನನ್ನು ತಡೆಗಟ್ಟಿದನು. ವll ಅಷ್ಟರಲ್ಲಿ ಆ ಕಡೆ ವಿಕ್ರಮಾರ್ಜುನನು ಸಂಸಪ್ತಕಬಲವನ್ನೆಲ್ಲ ಹೆದರಿ ಬೆವರುವಂತೆ ಅವುಕಿ ಹಿಂಡಿ ಕೊಲ್ಲುತ್ತ ಕೃಷ್ಣನೊಡನೆ ಹೀಗೆಂದನು- ೧೧. ಈಗ ರಣಭೇರಿಯ ಧ್ವನಿಯು ಪ್ರಳಯಸಮುದ್ರದ ಧ್ವನಿಯಂತೆ ಕೇಳಿಸುತ್ತಿದೆ. ಆ ಕಡೆ ಸುರಿಯುತ್ತಿರುವ ಬಾಣದ ಮಳೆಯಿಂದ ಆ ದಿಕ್ಕುಗಳ ಸಮೂಹವು ಮಾಸಲಾಗಿ ಕಾಂತಿಹೀನವಾಗಿ ಚಾಚಿಕೊಂಡಿದೆ. ಕೃಷ್ಣ ನಿನ್ನಳಿಯನಾದ ಅಭಿಮನ್ಯು ಮತ್ತು ಭೀಮನು ವಿನಾ ಕಾದುವ ಶೂರರು ಮತ್ತಾರೂ ಅಲ್ಲಿ ಇಲ್ಲ. ೧೨. ಶತ್ರುಪಕ್ಷದಲ್ಲಿ ದ್ರೋಣ, ಅಶ್ವತ್ಥಾಮ, ಶಲ್ಯ, ಭಗದತ್ತ, ಭೀಷ್ಮ ಮೊದಲಾದ ಪ್ರಸಿದ್ದ ವೀರರಿದ್ದಾರೆ. ನಮ್ಮ ಕಡೆ ಅಣ್ಣನಾದ ಭೀಮನೊಡನೆ ಮಕ್ಕಳಿಬ್ಬರು ಇದ್ದಾರಲ್ಲ (ಅಭಿಮನ್ಯು ಮತ್ತು ಘಟೋತ್ಕಚರು) ಎಂಬ ಶಂಕೆಯಾಗಿದೆ. ಆದುದರಿಂದ ಜಾಗ್ರತೆಯಾಗಿ ರಥವನ್ನು ತಡೆಯದೆ ಆ ಕಡೆ ನಡೆಯಿಸು ಎಂದು ಶಬ್ದಮಾಡುತ್ತ ಶತ್ರುವಿಗೆ ಮೃತ್ಯು ಬರುವ ಹಾಗೆ (ಆ ಕಡೆಗೆ) ಬಂದನು. ವ ಹಾಗೆ ನೆಲವು ನಡುಗುವ ಹಾಗೆ ಬರುತ್ತಿರುವ ಅರ್ಜುನನ ಬರುವಿಕೆಗೆ